ವಯನಾಡು ದುರಂತ ಬಳಿಕ ಹೈ ಅಲರ್ಟ್, ಮಳೆ ಅಬ್ಬರ ಕಡಿಮೆಯಾಗಲೆಂದು ದಕ್ಷಿಣ ಕಾಶಿ ಕಳಸೇಶ್ವರನಿಗೆ ಅಗಿಲು ಸೇವೆ

By Suvarna News  |  First Published Aug 2, 2024, 6:15 PM IST

ರಾಜ್ಯಾದ್ಯಂತ ಮಳೆ ಅಬ್ಬರ ಕಡಿಮೆಯಾಗಲೆಂದು ಚಿಕ್ಕಮಗಳೂರು ಜಿಲ್ಲೆಯ ದಕ್ಷಿಣ ಕಾಶಿ ಎಂದೇ ಹೆಸರುವಾಸಿಯಾಗಿರುವ ಕಳಸದ ಕಳಸೇಶ್ವರಸ್ವಾಮಿಗೆ ಮಲೆನಾಡಿಗರು ಅಗಿಲು ಸೇವೆ ಸಲ್ಲಿಸಿದ್ದಾರೆ.


ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿಕ್ಕಮಗಳೂರು (ಆ.2): ರಾಜ್ಯಾದ್ಯಂತ ಮಳೆ ಅಬ್ಬರ ಕಡಿಮೆಯಾಗಲೆಂದು ಚಿಕ್ಕಮಗಳೂರು ಜಿಲ್ಲೆಯ ದಕ್ಷಿಣ ಕಾಶಿ ಎಂದೇ ಹೆಸರುವಾಸಿಯಾಗಿರುವ ಕಳಸದ ಕಳಸೇಶ್ವರಸ್ವಾಮಿಗೆ ಮಲೆನಾಡಿಗರು ಅಗಿಲು ಸೇವೆ ಸಲ್ಲಿಸಿದ್ದಾರೆ. ಮುಂಗಾರಿನಲ್ಲಿ ಮಳೆ ಕೈಕೊಟ್ಟರೆ ಮಳೆಗಾಗಿ ಭಕ್ತರು ಕಳಸೇಶ್ವರನನ್ನು ಪ್ರಾರ್ಥನೆ ಮಾಡುವುದು ಅನಾದಿ ಕಾಲದಿಂದ ನಡೆದುಕೊಂಡು ಬಂದ ರೂಢಿ. ಆದರೆ ಮಳೆ ಹೆಚ್ಚಾಗಿದೆ, ಸದ್ಯಕ್ಕೆ ಮಳೆ ನಿಲ್ಲಿಸುವಂತೆ ದೇವರ ಮೊರೆ ಹೋಗುವಂತಾಗಿದೆ.

Tap to resize

Latest Videos

undefined

20 ದಿನಗಳಿಂದ ಮಳೆ ಎಡೆಬಿಡದೆ ಸುರಿಯುತ್ತಿರುವ ಮಳೆ : 
ಕಳಸ ತಾಲೂಕಿನಲ್ಲಿ 20 ದಿನಗಳಿಂದ ಮಳೆ ಎಡೆಬಿಡದೆ ಸುರಿಯುತ್ತಿದೆ. ಮಳೆಯ ಆರ್ಭಟದಿಂದ ಜನರು ಹೈರಾಣಾಗಿದ್ದಾರೆ. ತೋಟಗಳಲ್ಲಿ ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ. ಆದ್ದರಿಂದ ಸುರಿಯುತ್ತಿರುವ ಮಳೆಯನ್ನು ನಿಲ್ಲಿಸಿ ಹದವಾದ ಮಳೆ ಕರುಣಿಸುವಂತೆ ಇಲ್ಲಿನ ಊರದೇವತೆ ಕಳಸೇಶ್ವರನಲ್ಲಿ ಭಕ್ತರು ಇಂದು  ಮೊರೆ ಇಟ್ಟಿದ್ದಾರೆ. ಅತಿಯಾದ ಮಳೆಯಿಂದ ಜನ, ಜಾನುವಾರುಗಳ ಜೊತೆ ಪ್ರಾಣಿಪಕ್ಷಿಗಳಿಗೂ ಬಾಧೆ ಉಂಟಾಗಿದೆ. ಆದ್ದರಿಂದ ಅತಿವೃಷ್ಟಿ ಆಗದಂತೆ ಹದವಾದ ಮಳೆ ನೀಡು ಎಂದು ಕಳಸೇಶ್ವರ ಸ್ವಾಮಿಗೆ ಅಗ್ನಿ ಸೂಕ್ತ ಮಂತ್ರ ಪಠಿಸಲಾಯಿತು. ಸಕಲ ಜೀವರಾಶಿಗೂ ಅನುಕೂಲವಾಗುವಂತೆ ಮಳೆ, ಬೆಳೆ ಕರುಣಿಸಬೇಕು ಎಂದು ಕಳಸೇಶ್ವರನಲ್ಲಿ ಪ್ರಾರ್ಥಿಸಲಾಯಿತು. ದೇವಸ್ಥಾನದ ತಂತ್ರಿಗಳು, ಪ್ರಧಾನ ಅರ್ಚಕರು, ಕಾರ್ಯನಿರ್ವಹಣಾಧಿಕಾರಿ ಮತ್ತು ಸಿಬ್ಬಂದಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು, ಸದಸ್ಯರು ಮತ್ತು ಗ್ರಾಮಸ್ಥರು ಇದ್ದರು.

ಮನು ಭಾಕರ್ ಪದಕ ಗೆದ್ದ ಬೆನ್ನಲ್ಲೇ ಅರಸಿ ಬಂದ 40ಕ್ಕೂ ಹೆಚ್ಚು ಬ್ರಾಂಡ್, ರಾಯಭಾರಿಯಾಗಲು ಕೋಟಿಗಟ್ಟಲೆ ಒಪ್ಪಂದ!

ಧಾರಾಕಾರ ಮಳೆಗೆ ಜನರ ಜೀವನ ಅಸ್ತವ್ಯಸ್ತ :
ಪುರಾಣ ಪ್ರಸಿದ್ಧ ಕಳಸ ತಾಲೂಕಿನ ಕಳಸೇಶ್ವರ ಸ್ವಾಮಿಗೆ ಕಳಸ ಸುತ್ತಮುತ್ತಲಿನ ಜನರಿಂದ ಮಳೆಕಡಿಮೆ ಮಾಡುವಂತೆ ಕೋರಿ ಅಗಿಲು ಸೇವೆ ಮಾಡಲಾಗಿದೆ. ಶತಮಾನಗಳಿಂದ ಅತಿವೃಷ್ಠಿ-ಅನಾವೃಷ್ಠಿಯಲ್ಲಿ ಪೂಜೆ ಸಲ್ಲಿಸಿದ್ರೆ ಭಕ್ತರ ಬಯಕೆ ಈಡೇರುತ್ತದೆ ಎಂದು ನಂಬಿಕೆ ಇಲ್ಲಿಯ ಜನರದ್ದಾಗಿದೆ. ವಾಡಿಕೆಗಿಂತ ಹೆಚ್ಚಿನ ಮಳೆಗೆ ಕಳಸ ತಾಲೂಕಿನಲ್ಲಾಗಿದ್ದು, ಧಾರಾಕಾರ ಮಳೆಗೆ ಜನರ ಜೀವನ ಅಸ್ತವ್ಯಸ್ತ ಗೊಂಡಿದೆ. ಮಳೆ ನಿಂತು ಜನಜೀವನ ಸುಧಾರಣೆಯಾಗಲಿ ಎಂದು ಈಶ್ವರನಲ್ಲಿ ಪ್ರಾರ್ಥನೆ ಮಾಡಿಕೊಳ್ಳಲಾಗಿದೆ.

ಜಿಲ್ಲಾಡಳಿತ ಹೈ ಅಲರ್ಟ್:
ಕೇರಳದ ವಯನಾಡು ಪ್ರಕರಣ ಬೆನ್ನಲ್ಲೆ ಕಾಫಿನಾಡಲ್ಲಿ ಜಿಲ್ಲಾಡಳಿತ ಹೈ ಅಲರ್ಟ್ ಆಗಿದೆ. ಚಾರ್ಮಾಡಿ ಘಾಟ್ ಬಳಿ ಪೊಲೀಸರು ಸರ್ವ ಸನ್ನದ್ಧರಾಗಿದ್ದಾರೆ. ಈ ಮಾರ್ಗ ಬೆಟ್ಟ,ಗುಡ್ಡಗಳ ನಡುವೆ 22 ಕಿ.ಮೀ.ಸಾಗಬೇಕಾಗಿದ್ದು, ಅತ್ಯಂತ ಅಪಾಯಕಾರಿಯಾಗಿದೆ. 2019 ರಿಂದಲೂ ಪ್ರತಿ ವರ್ಷ ಚಾರ್ಮಾಡಿಘಾಟಿ ಕುಸಿತಕ್ಕೊಳಗಾಗುತ್ತಲೇ ಬಂದಿದೆ.

Bengaluru: ನ್ಯಾಯಾಲಯದಲ್ಲಿ ತಂದೆ ಪಾಲಾದ ಮಗುವನ್ನು ಸ್ನೇಹಿತನ ಜೊತೆ ಸೇರಿ ಕಿಡ್ನಾಪ್ ಮಾಡಿದ ತಾಯಿ!

ಚಾರ್ಮಾಡಿ ಘಾಟಿಯು ಒಂದು ಬದಿ ಬೆಟ್ಟ-ಗುಡ್ಡ, ಮತ್ತೊಂದೆಡೆ ಸಾವಿರಾರು ಅಡಿ ಪ್ರಪಾತ ಇದೆ. ಹಾಗಾಗಿ ಇಲ್ಲಿ ಪೊಲೀಸರು ಸರ್ವಸನ್ನದ್ಧರಾಗಿದ್ದಾರೆ. ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿ ಡಿಆರ್ ತುಕಡಿ ನಿಯೋಜಿಸ ಲಾಗಿದೆ. ಕೇರಳದ ವಯನಾಡು ದುರಂತದ ಬಳಿಕ ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಆತಂಕ ಮನೆ ಮಾಡಿದೆ. ಶಿರಾಡಿಘಾಟ್ ರಸ್ತೆಯಲ್ಲಿ ಸಂಚಾರ್ ಬಂದ್ ಆಗಿರುವ ಹಿನ್ನಲೆಯಲ್ಲಿ ಚಾರ್ಮಾಟಿಘಾಟಿಯಲ್ಲಿ ಚಾಲಕರು ಭಯದಿಂದಲೇ ವಾಹನ ಚಲಾಯಿಸುವಂತಾಗಿದೆ.

ದಕ್ಷಿಣ ಕನ್ನಡ ಸಂಪರ್ಕ ಸೇತುವೆ ಚಾರ್ಮಾಡಿ ಘಾಟಿಯಾಗಿದೆ. ಚಾರ್ಮಾಡಿ ಘಾಟಿ 2019 ರಲ್ಲಿ ಭೂಕುಸಿತದಿಂದ 6 ತಿಂಗಳು ಬಂದ್ ಆಗಿತ್ತು. ಈ ವರ್ಷ ಸುರಿಯುತ್ತಿರುವ ಭಾರೀ ಮಳೆಗೆ ಮರಗಳು, ಗುಡ್ಡ, ಭೂ ಕುಸಿತ ಉಂಟಾಗುತ್ತಿದೆ. ಹಾಗಾಗಿ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮಗಳನ್ನುಕೈಗೊಂಡಿದೆ.

click me!