ಸಿದ್ದರಾಮಯ್ಯ ವಿರುದ್ಧ ಸಂಸದ ಪ್ರತಾಪ್‌ ಸಿಂಹ ಕಿಡಿ

By Kannadaprabha News  |  First Published Jul 1, 2020, 10:05 AM IST

ಮಾಜಿ ಮುಖ್ಯಮಂತ್ರಿ 13 ಬಾರಿ ಬಜೆಟ್‌ ಮಂಡಿಸಿರುವ ಸಿದ್ದರಾಮಯ್ಯ ಪರಿಸ್ಥಿತಿಯನ್ನು ಅರಿತುಕೊಳ್ಳದೆ ಕೇಂದ್ರ ಸರ್ಕಾರದ ವಿರುದ್ಧ ತೈಲ ಬೆಲೆ ಏರಿಕೆ ವಿಚಾರದಲ್ಲಿ ಟೀಕಿಸುತ್ತಿರುವುದು ಸಮಂಜಸವಲ್ಲ ಎಂದು ಸಂಸದ ಪ್ರತಾಪ್‌ ಸಿಂಹ ಕಿಡಿಕಾರಿದ್ದಾರೆ.


ಮಡಿಕೇರಿ(ಜು.01): ಮಾಜಿ ಮುಖ್ಯಮಂತ್ರಿ 13 ಬಾರಿ ಬಜೆಟ್‌ ಮಂಡಿಸಿರುವ ಸಿದ್ದರಾಮಯ್ಯ ಪರಿಸ್ಥಿತಿಯನ್ನು ಅರಿತುಕೊಳ್ಳದೆ ಕೇಂದ್ರ ಸರ್ಕಾರದ ವಿರುದ್ಧ ತೈಲ ಬೆಲೆ ಏರಿಕೆ ವಿಚಾರದಲ್ಲಿ ಟೀಕಿಸುತ್ತಿರುವುದು ಸಮಂಜಸವಲ್ಲ ಎಂದು ಸಂಸದ ಪ್ರತಾಪ್‌ ಸಿಂಹ ಕಿಡಿಕಾರಿದ್ದಾರೆ.

ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಪಾಲ್ಗೊಂಡು ಬಳಿಕ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ದೇಶದ ಅರ್ಥ ವ್ಯವಸ್ಥೆ ಆದಾಯ ಮೂಲದ ಕನಿಷ್ಟಅರಿವಿಲ್ಲದೆ ಮಾತನಾಡುತ್ತಿರುವ ಸಿದ್ದರಾಮಯ್ಯ 13 ಬಾರಿ ಹೇಗೆ ಬಜೆಟ್‌ ಮಂಡಿಸಿದ್ದಾರೆ ಎಂಬ ಅನುಮಾನ ಕಾಡುತ್ತಿದೆ. ಚಿಕಿತ್ಸೆ, ಆರೋಗ್ಯ ಇಲಾಖೆ ಬಲವರ್ಧನೆ, ಪಡಿತರ ಪೂರೈಕೆ, ಜನಸಾಮಾನ್ಯರ ಪರ ಸರ್ಕಾರ ಮಿಡಿಯುತ್ತಿದೆ. ಇದರಿಂದ ಸಹಜವಾಗಿ ಖರ್ಚು ಹೆಚ್ಚಾಗಿದೆ.

Latest Videos

undefined

ಬಳ್ಳಾರಿ: ಮಹಾಮಾರಿ ಕೊರೋನಾಗೆ ಮತ್ತೆ ಆರು ಸಾವು: ಕಳೆದ 4 ದಿನಗಳಲ್ಲಿ 20 ಬಲಿ

ರೈಲ್ವೆ, ವಿಮಾನಯಾನ, ಸಾರಿಗೆ ಕ್ಷೇತ್ರ ಸ್ಥಗಿತಗೊಂಡಿದೆ. ತೈಲ ಬಳಕೆ ಶೇ. 50 ಇಳಿಮುಖಗೊಂಡಿದೆ. ತೈಲ ಬೆಲೆ ಇಳಿಸಿದರೆ ಇತರ ಕ್ಷೇತ್ರಗಳಿಗೆ ಸವಲತ್ತು ನೀಡುವುದು, ಕಾಮಗಾರಿ ನಡೆಸುವುದು, ರಕ್ಷಣಾ ಕ್ಷೇತ್ರಕ್ಕೆ ಸೌಲಭ್ಯ ಒದಗಿಸುವುದು ಹೇಗೆ ಎಂದು ಪ್ರಶ್ನಿಸಿದರು. ಬೇರೆ ಕಾಂಗ್ರೆಸ್‌ ನಾಯಕರು ಈ ಬಗ್ಗೆ ಮಾತನಾಡಿದ್ದಾರೆ. ಅದು ದೊಡ್ಡ ವಿಚಾರವೆನ್ನಲ್ಲ ಎಲ್ಲಾ ತಿಳಿದಿರುವ ಸಿದ್ದರಾಮಯ್ಯ ವಿವೇಚನೆ ಇಲ್ಲದೆ ವರ್ತಿಸುತ್ತಿದ್ದು, 30 ಸಾವಿರ ರೂಪಾಯಿ ಬೆಲೆಬಾಳುವ ಸೈಕಲ್‌ನಲ್ಲಿ ಪ್ರತಿಭಟಿಸುತ್ತಿದ್ದಾರೆ ಎಂದು ಟೀಕಿಸಿದರು.

ಆ್ಯಪ್‌ ಬ್ಯಾನ್‌ ದಿಟ್ಟನಿಲುವು: ಚೀನಾ ಆ್ಯಪ್‌ ಬ್ಯಾನ್‌ ಮಾಡುವ ಮೂಲಕ ಕೇಂದ್ರ ಸರ್ಕಾರ ದಿಟ್ಟನಿಲುವು ತೋರಿದೆ. ಚೀನಾ ವಿರುದ್ಧ ಯಾವ ದೇಶವೂ ತೋರದ ಧೈರ್ಯವನ್ನು ಮೋದಿ ತೋರಿದ್ದಾರೆ. ಬಹಳಷ್ಟುಆ್ಯಪ್‌ಗಳು ಸುರಕ್ಷಿತವಲ್ಲ. ಬಹಳಷ್ಟುಆ್ಯಪ್‌ಗಳು ವೈಯಕ್ತಿಕ ಮಾಹಿತಿ ಪಡೆದುಕೊಳ್ಳುತ್ತವೆ. ಈ ಹಿನ್ನೆಲೆಯಲ್ಲಿ 59 ಆ್ಯಪ್‌ಗಳನ್ನು ಬ್ಯಾನ್‌ ಮಾಡಲಾಗಿದೆ. ಉತ್ತಮ ನಿರ್ಧಾರವನ್ನು ಎಲ್ಲರೂ ಸ್ವಾಗತಿಸಿದ್ದಾರೆ ಎಂದರು.

ಸೋಂಕಿತರ ಶವ ಗುಂಡಿಗೆಸೆದರು: ಒಂದೇ ಗುಂಡಿಗೆ 8 ಶವ!

ಆ್ಯಪ್‌ ಅಭಿವೃದ್ಧಿ ಮಾಡುವುದರಲ್ಲಿ ಭಾರತೀಯರೇ ಹೆಚ್ಚಿದ್ದಾರೆ. ಪಬ್ಜಿಯನ್ನು ಬ್ಯಾನ್‌ ಮಾಡದಿರುವ ಬಗ್ಗೆ ಪ್ರತಿಕ್ರಿಯಿಸಿದ ಸಂಸದರು, ಯಾವುದಾದರೂ ಆ್ಯಪ್‌ ಬಿಟ್ಟು ಹೋಗಿದ್ದರೆ ಅದನ್ನು ಸೇರಿಸಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.

click me!