ಕಾರವಾರದ ಈ ದೇವರಿಗೆ ಗಾಂಜಾವೇ ನೈವೇದ್ಯ!

By Kannadaprabha News  |  First Published Oct 27, 2020, 7:44 AM IST

ಕಾರವಾರದ ಇಲ್ಲೊಂದು ದೇವರಿಗೆ ಗಾಂಜಾವೇ ಪ್ರಸಾದವಾಗಿದೆ. ಗಾಂಜಾವನ್ನೇ ನೈವೇದ್ಯ ಮಾಡಲಾಗುತ್ತದೆ


ಕಾರವಾರ (ಅ.27): ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲೂಕಿನ ಯಕ್ಷಕಾಶಿ ಗುಂಡಬಾಳದ ಸಮೀಪ ಮುಟ್ಟಾಊರಿನಲ್ಲಿರುವ ಹಬ್ಸಿ ದೇವರಿಗೆ ಗಾಂಜಾ ನೈವೇದ್ಯ ಮಾಡಲಾಗುತ್ತಿದೆ. 

ಹಬ್ಸಿ ದೇವರ ಎದುರು ಭಂಗಿ (ಗಾಂಜಾ) ಪಾನಕ ಮಾಡಿ ನೈವೇದ್ಯಕ್ಕೆ ಇಡುತ್ತಾರೆ. ಹಸಿ ತೆಂಗಿನಗರಿಯನ್ನು ಸುರುಳಿ ಸುತ್ತಿ ಅದರೊಳಗೆ ಒಣಗಿದ ಗಾಂಜಾ ಸೊಪ್ಪು ತುಂಬಿ ಬುಡದಲ್ಲಿ ಹತ್ತಿಯನ್ನು ತುಂಬಿ ದೊಡ್ಡ ಬೀಡಿಯಂತೆ ಮಾಡಿ ಬೆಂಕಿ ಹೊತ್ತಿಸಿ ದೇವರ ಎದುರು ಇಡುತ್ತಾರೆ. ದೇವರ ಮುಖಕ್ಕೆ ಇದರ ಹೊಗೆ ಹೋಗುವಂತೆ ಮಾಡುತ್ತಾರೆ.

Latest Videos

undefined

'ನಾವು ತುಳಸಿ ಬೆಳೀತಿವಿ, ಗಾಂಜಾವನ್ನಲ್ಲ: ಆಹಾರ ಹುಡುಕಿಕೊಂಡು ಬಂದವರು ನೀವು' ...

 ವರ್ಷಕ್ಕೊಮ್ಮೆ ಈ ದೇವರು ಗುಂಡಬಾಳದ ಯಕ್ಷಗಾನ ರಂಗಸ್ಥಳಕ್ಕೆ ಬರಲೇಬೇಕು. ವರ್ಷದ ಆರು ತಿಂಗಳು ಇಲ್ಲಿ ಯಕ್ಷಗಾನ ನಡೆಯುತ್ತದೆ.

ಸುಮಾರು 3 ತಿಂಗಳು ಯಕ್ಷಗಾನ ಸೇವೆ ಮುಗಿದ ಮೇಲೆ ಹಬ್ಸಿ ವೇಷ ರಂಗಕ್ಕೆ ಬರುತ್ತದೆ. ಅಂದು ಸಂಜೆ ಹಬ್ಸಿ ದೇವರ ಎದುರು ಭಂಗಿ ಪಾನಕ, ಭಂಗಿಯ ಬೀಡಿ ಇಟ್ಟು ಪೂಜೆ ಮಾಡುತ್ತಾರೆ. ಹಾಗಂತ ಹಬ್ಸಿ ವೇಷಧಾರಿಗಳು ಗಾಂಜಾ ಸೇವಿಸುವುದಿಲ್ಲ.

click me!