ಕೊಪ್ಪಳ ಜಿಲ್ಲಾ ಸ್ವೀಪ್‌ ರಾಯಭಾರಿಯಾಗಿ ಪ್ರಾಣೇಶ

By Kannadaprabha News  |  First Published Feb 26, 2023, 5:19 AM IST

ಖ್ಯಾತ ಹಾಸ್ಯ ಕಲಾವಿದರಾದ ಗಂಗಾವತಿ ಪ್ರಾಣೇಶ ಅವರು ಕೊಪ್ಪಳ ಜಿಲ್ಲಾ ಸ್ವೀಪ್‌ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ.


ಕೊಪ್ಪಳ :  ಖ್ಯಾತ ಹಾಸ್ಯ ಕಲಾವಿದರಾದ ಗಂಗಾವತಿ ಪ್ರಾಣೇಶ ಅವರು ಕೊಪ್ಪಳ ಜಿಲ್ಲಾ ಸ್ವೀಪ್‌ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ.

ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಾಹುಲ್‌ ರತ್ನಂ ಪಾಂಡೆ ಅವರು ಗಂಗಾವತಿ ಪ್ರಾಣೇಶ ಅವರನ್ನು ಶುಕ್ರವಾರ ಭೇಟಿ ಮಾಡಿ, ಮುಂಬರಲಿರುವ ಕರ್ನಾಟಕ ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಕೊಪ್ಪಳ ಜಿಲ್ಲಾ ಸ್ವೀಪ್‌ ಕಾರ್ಯಕ್ರಮಗಳ ಕುರಿತು ಚರ್ಚಿಸಿದರು.

Tap to resize

Latest Videos

undefined

ಮುಂಬರುವ 2023ರ ಕರ್ನಾಟಕ ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ನೂತನ ಮತ್ತು ಭÜವಿಷ್ಯದ ಯುವ ಮತದಾರರಲ್ಲಿ ಚುನಾವಣೆ ಮತ್ತು ಮತದಾನ ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ಜಾಗೃತಿ ಮೂಡಿಸುವ ಸಲುವಾಗಿ ‘ಮತದಾನಕ್ಕಿಂತ ಇನ್ನೊಂದಿಲ್ಲ, ನಾನು ಖಚಿತವಾಗಿ ಮತದಾನ ಮಾಡುವೆ’ ಎಂಬ ಧ್ಯೇಯವಾಕ್ಯದೊಂದಿಗೆ ಜಿಲ್ಲೆ, ತಾಲೂಕು ಮತ್ತು ಗ್ರಾಪಂ ಸ್ಥಳಗಳಲ್ಲಿ ವಿವಿ ಪ್ಯಾಟ್‌ಗಳ ಮುಖಾಂತರ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ವ್ಯವಸ್ಥಿತ ಮತದಾರರ ಶಿಕ್ಷಣ ಮತ್ತು ಚುನಾವಣೆ ಪಾಲ್ಗೊಳ್ಳುವಿಕೆಗಾಗಿ ಸ್ವೀಪ್‌ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ಸಿಇಒ ತಿಳಿಸಿದರು.

ಸಾಧನೆ ಮಾಡಬೇಕೆಂದರೆ ಕನ್ನಡ ಸಾಹಿತ್ಯ, ಕನ್ನಡದ ಪುಸ್ತಕದ ದಾಸರಾಗಬೇಕು

ಕಾರಟಗಿ (ನ.07): ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕೆಂದರೆ ಕನ್ನಡ ಸಾಹಿತ್ಯ, ಕನ್ನಡದ ಪುಸ್ತಕದ ದಾಸರಾಗಬೇಕು. ಬಿಯರ್‌, ಬ್ರ್ಯಾಂಡಿಗಳಿಗಿಂತ ಕನ್ನಡ ಪುಸ್ತಕದ ಮತ್ತೇ ದೊಡ್ಡ ಗಮ್ಮತ್ತು ಎಂದು ಹಾಸ್ಯ ಕಲಾವಿದ ಬಿ. ಪ್ರಾಣೇಶ ಅಭಿಪ್ರಾಯಪಟ್ಟರು. ಇಲ್ಲಿನ ಪದ್ಮಶ್ರೀ ಕನ್ವೆನ್ಷನ್‌ ಹಾಲ್‌ನಲ್ಲಿ ಭಾನುವಾರ ಇಲ್ಲಿ ಸ್ಫಟಿಕ ಪ್ರಕಾಶನ ಹಾಗೂ ಅಖಿಲ ಭಾರತೀಯ ಸಾಹಿತ್ಯ ಪರಿಷತ್‌ ಏರ್ಪಡಿಸಿದ್ದ ಕಾರಟಗಿ ತಾಲೂಕು ಇತಿಹಾಸ ಮತ್ತು ಸಂಸ್ಕೃತಿ ಕುರಿತ ಪುಸ್ತಕಗಳನ್ನು ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ನಮ್ಮ ಜನರು ಪುಸ್ತಕಗಳನ್ನು ಹಣ ಕೊಟ್ಟು ಓದಬೇಕು. ಆ ಮೂಲಕ ಕನ್ನಡ ಸಾಹಿತ್ಯ, ಕನ್ನಡ ಪುಸ್ತಕಗಳಿಗೆ ಪ್ರೋತ್ಸಾಹಿಸಬೇಕು. ಸಾಹಿತ್ಯ, ಕನ್ನಡ ಪುಸ್ತಕಗಳು ಯಾವತ್ತೂ ಒಂದೇ ದಿನದಲ್ಲಿ ರಚನೆ ಮಾಡುವಂಥದಲ್ಲ. ನಿರಂತರ ಅಧ್ಯಯನ, ಓದಿನಿಂದ ರಚನೆಯಾಗುತ್ತದೆ ಎಂದರು.

ಮಠಗಳನ್ನು ದೂರ ಇಡಿ: ಡಾ. ಉಮೇಶ ಗುರಿಕಾರ ಮತ್ತು ಕಾರಟಗಿ ವಿರೂಪಾಕ್ಷೇಶ್ವರ ಸ್ವಾಮಿ ಅವರ ‘ಸ್ವಾತಂತ್ರ್ಯ ಹೋರಾಟದಲ್ಲಿ ಕಾರಟಗಿ’ ಎನ್ನುವ ಪುಸ್ತಕದ ಕುರಿತು ಸಂಶೋಧಕ ಡಾ. ಶರಣಬಸಪ್ಪ ಕೋಲ್ಕಾರ್‌ ಮಾತನಾಡಿ, ಇಂದು ನಾವು ಜಾತಿ, ಮತ, ಭೇದ, ಮಠಗಳನ್ನು ದೂರ ಸರಿಸಿ ಇತಿಹಾಸಗಳನ್ನು ರಚಿಸಬೇಕಾಗಿದೆ. ಓದುವ ವ್ಯವಧಾನವನ್ನು ಕಳೆದುಕೊಂಡಿಕೊಂಡಿದ್ದೇವೆ. ಚರಿತ್ರೆಯ ಮೂಲಕ ಸಂಸ್ಕೃತಿ ಬೆಳೆಸಲು ಸಾಧ್ಯ. ವೀರಗಲ್ಲು, ಮಾಸ್ತಿಗಲ್ಲು ನಮ್ಮೂರಿನ ಚರಿತ್ರೆಯ ದಾಖಲೆಗಳು. ಇವುಗಳನ್ನು ಸಂಗ್ರಹಿಸಬೇಕಾಗಿದೆ ಎಂದರು.

ಜಿಪಂ ಉಪ ಕಾರ್ಯದರ್ಶಿ ಸಮೀರ ಮುಲ್ಲಾ, ಯೋಜನಾ ನಿರ್ದೇಶಕ ಪಿ. ಕೃಷ್ಣಮೂರ್ತಿ, ಜಿಲ್ಲಾ ಐಇಸಿ ಸಂಯೋಜಕ ಶ್ರೀನಿವಾಸ ಚಿತ್ರಗಾರ ಹಾಗೂ ಇತರರು ಇದ್ದರು.

24ಕೆಪಿಎಲ್‌28 ಕೊಪ್ಪಳ ಜಿಲ್ಲಾ ಸ್ವೀಪ್‌ ರಾಯಭಾರಿಯಾಗಿ ಕಲಾವಿದ ಗಂಗಾವತಿ ಪ್ರಾಣೇಶ ಆಯ್ಕೆಯಾದರು.

ಮೀಸಲಾತಿ ಸಿಗುವವರೆಗೂ ಹೋರಾಟ: ಬಸವಜಯ ಮೃತ್ಯುಂಜಯ ಶ್ರೀ

ಇತಿಹಾಸ ಸುಲಭವಲ್ಲ: ಕಾರಟಗಿ ವಿರೂಪಾಕ್ಷೇಶ್ವರ ಸ್ವಾಮಿ ಅವರ ‘ಕಾರಟಗಿ ಪರಿಸರ ಶಾಸನ ಮತ್ತು ದೇವಾಲಯ ಸಂಸ್ಕೃತಿ’ ಪುಸ್ತಕದ ಕುರಿತು ಉಪನ್ಯಾಸಕ ಡಾ. ಜಾಜಿ ದೇವೇಂದ್ರಪ್ಪ ಮಾತನಾಡಿ, ಕತೆ, ಕಾವ್ಯ, ಕಾದಂಬರಿ ಬರೆಯಬಹುದು. ಪುರಾವೆಗಳಿಲ್ಲದೇ ಚರಿತ್ರೆ ಬರೆಯಲು ಸಾಧ್ಯವಿಲ್ಲ. ವೀರಗಲ್ಲು, ಗಜಲಕ್ಷ್ಮೀ ಕಲ್ಲುಗಳು ಚರಿತ್ರೆಯ ಪುರಾವೆಗಳು. ಇತಿಹಾಸ ಮತ್ತು ಚರಿತ್ರೆ ರಚನೆಯ ವೇಳೆ ಅಂತೆ- ಕಂತೆಗಳಿಗೆ, ಸುಳ್ಳುಗಳಿಗೆ, ಪುರಾಣಗಳಿಗೆ ಅವಕಾಶವಿಲ್ಲ. ಸತ್ಯ ಮತ್ತು ಪುರಾವೆಗಳೆ ಸಂಶೋಧನೆಗೆ ಮೂಲ ಆಧಾರ ಎಂದರು.

click me!