ಬಿಲ್ಲವ, ಈಡಿಗ, ನಾಮಧಾರಿ ಸಮಾಜಕ್ಕೆ 2ಎ ಮೀಸಲಾತಿ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆ ಈಡೇರಿಗೆ ಒತ್ತಾಯಿಸಿ ಜ.6ರಿಂದ ಮಂಗಳೂರಿನಿಂದ ಬೆಂಗಳೂರಿನವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಬ್ರಹ್ಮಶ್ರೀ ನಾರಾಯಣಗುರು ಶಕ್ತಿ ಪೀಠದ ಶ್ರೀ ಪ್ರಣವಾನಂದ ಸ್ವಾಮೀಜಿ ಹೇಳಿದರು.
ಶಿವಮೊಗ್ಗ (ನ.20) : ಬಿಲ್ಲವ, ಈಡಿಗ, ನಾಮಧಾರಿ ಸಮಾಜಕ್ಕೆ 2ಎ ಮೀಸಲಾತಿ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆ ಈಡೇರಿಗೆ ಒತ್ತಾಯಿಸಿ ಜ.6ರಿಂದ ಮಂಗಳೂರಿನಿಂದ ಬೆಂಗಳೂರಿನವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಬ್ರಹ್ಮಶ್ರೀ ನಾರಾಯಣಗುರು ಶಕ್ತಿ ಪೀಠದ ಶ್ರೀ ಪ್ರಣವಾನಂದ ಸ್ವಾಮೀಜಿ ಹೇಳಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಜ.6 ರಿಂದ ಫೆ.14ವರೆಗೆ ನಡೆಯುವ ಈ ಪಾದಯಾತ್ರೆ 658 ಕಿ.ಮೀ. ನಡೆಯಲು ನಿರ್ಧಾರ ಮಾಡಲಾಗಿದೆ. ಈ ಹಿನ್ನೆಲೆಯ ಲ್ಲಿ ಜ.6ರಂದು ಮಂಗಳೂರು ಕುದ್ರೋಳಿಯಿಂದ ಹೊರಟು ಫೆ.14 ತಂದು ಬೆಂಗಳೂರಿನ ಪ್ರೀಡಂಪಾರ್ಕ್ನಲ್ಲಿ ಸಮರೋಪಗೊಳ್ಳುತ್ತದೆ ಎಂದರು.
ಈಡಿಗ ಸಮಾಜಕ್ಕೆ ಶೀಘ್ರ ಸಿಹಿಸುದ್ದಿ: ಸಚಿವ ಸುನೀಲ ಕುಮಾರ
ಈಡಿಗ ಸಮಾಜದ ಸಮಸ್ಯೆ ಇಟ್ಟುಕೊಂಡು ಕಳೆದ 2 ವರ್ಷದಿಂದ ಹೋರಾಟ ಮಾಡಲಾಗುತ್ತಿದೆ. ಸಮಾಜ ಬೇಡಿಕೆ ಈಡೇರಿಸುವುದಾಗಿ ಕೇಂದ್ರ ಸಚಿವ ಮುರುಗೇಶ ನಿರಾಣಿ ಭರ ವಸೆ ನೀಡಿದ್ದರು. ಆದರೆ, ಇದುವರೆಗೆ ಈಡೇರಿಲ್ಲ ಎಂದು ದೂರಿದರು.
ಈಗ ಈ ಬಗ್ಗೆ ಸಚಿವ ಮುರುಗೇಶ್ ನಿರಾಣಿ ಅವರನ್ನು ಪ್ರಶ್ನಿಸಿದರೆ, ಈಡಿಗ ಸಮಾಜದ ಶಾಸಕರೇ ಬೆಂಬಲ ಕೊಡುತ್ತಿಲ್ಲ ಎಂದು ತಿಳಿಸಿದ್ದಾರೆ. ಈ ಸರ್ಕಾರ ಹಿಂದುಳಿದ ವರ್ಗಗಳ ನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಈ ಹಿಂದೆ ಸಮಾಜಕ್ಕೆ ನಿಗಮ ಮಂಡಳಿ ಮಾಡಲು ಒತ್ತಾಯ ಮಾಡಲಾಗಿತ್ತು. ಆದರೆ, ಸರ್ಕಾರ ಕೇವಲ ಕೋಶ ರಚಿಸಿ ಕೈತೊಳೆದುಕೊಂಡಿದೆ. ಮೇಲಿನ ವರ್ಗದವರಿಗೆ ನಿಗಮ ಸ್ಥಾಪನೆ ಮಾಡಿರುವ ಸರ್ಕಾರ ಹಿಂದುಳಿದ ವರ್ಗಗಳಿಗೆ ಕೋಶ ರಚನೆ ಮಾಡಿ ಸುಮ್ಮನಾಗಿಸಿದೆ ಎಂದು ಹರಿಹಾಯ್ದರು.
ಸೇಂದಿ ಮಾರಾಟಕ್ಕೆ ಅನುಮತಿ ಕೊಡಿ: ಸೇಂದಿ ಮಾರಾಟ ಈಡಿಗ ಸಮುದಾಯದವರ ಕುಲಕಸುಬಾಗಿದೆ. ಆದರೆ, ಮಾರಾಟಕ್ಕೆ ಅವಕಾಶ ಇಲ್ಲದಂತಾಗಿದೆ. ಇದರಿಂದ ಸಮಾಜ ದ ಆರ್ಥಿಕ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಸೇಂದಿ ಮಾರಾಟಕ್ಕೆ ಸರ್ಕಾರ ಅನುಮತಿ ನೀಡಬೇಕು. ನೆರೆಯ ಗೋವಾ, ಕೇರಳಗಳಲ್ಲಿ ಅನುಮತಿ ಇರಬೇಕಾದರೆ ನಮ್ಮ ರಾಜ್ಯದಲ್ಲಿ ಏಕಿಲ್ಲ ? ಎಂದು ಪ್ರಶ್ನೆ ಮಾಡಿದರು.
ಸಾಗರ ತಾಲೂಕಿನ ಸಿಗಂದೂರು ಚೌಡೇಶ್ವರಿ ದೇವಸ್ಥಾನದ ಮೇಲೆ ಸರ್ಕಾರದಿಂದ ದೌರ್ಜನ್ಯ ನಡೆಯುತ್ತಿದೆ. ಈ ದೌರ್ಜನ್ಯ ನಿಲ್ಲಬೇಕು. ನಮ್ಮ ಸಮಾಜದ ಮಂತ್ರಿಗಳು, ಶಾಸಕರು ಈ ಬಗ್ಗೆ ಚಕಾರ ಎತ್ತುತ್ತಿಲ್ಲ. ಸಮುದಾಯದ ಮತ ಪಡೆದು ಅಧಿಕಾರಕ್ಕೆ ಬಂದವರು ಸಮಾಜದವನ್ನು ನಿರ್ಲಕ್ಷಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಬೆಂಗಳೂರಲ್ಲಿ ನಾರಾಯಣ ಗುರು ಪ್ರತಿಮೆಯನ್ನು ಸ್ಥಾಪಿಸಬೇಕು. ಎಲ್ಲ ವಿವಿಯಲ್ಲಿ ನಾರಾಯಣ ಗುರು ಅಧ್ಯಯನ ಪೀಠ ಸ್ಥಾಪಿಸಬೇಕು. ಸೇಂದಿ ಇಳಿಸುವವರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಆರ್ಯ ಈಡಿಗ ಮಹಿಳೆಯರು ಕನಿಷ್ಠ 5 ಮಕ್ಕಳನ್ನಾದರೂ ಹೆರಬೇಕು: ಸ್ವಾಮೀಜಿ
ಚುನಾವಣೆಯಿಂದ ದೂರ, ರಾಜಕೀಯ ಒಲ್ಲೆ
ಚುನಾವಣೆಯಲ್ಲಿ ಸ್ಪರ್ಧಿಸುವ ತೀರ್ಮಾನ ಮಾಡಿಲ್ಲ. ರಾಜಕೀಯಕ್ಕೆ ನಾನು ಬರುವುದಿಲ್ಲ. ರಾಜಕೀಯದಿಂದ ದೂರ ಇದ್ದರೂ ಮತ ಹಾಕುವ ಮೂಲಕ ನಮ್ಮ ಹಕ್ಕುನ್ನು ಪಡೆಯ ಲು ಸಮಾಜದ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತೇನೆ. ಇದಕ್ಕಾಗಿ ನನಗೆ ಬೆದರಿಕೆ ಕರೆಗಳು ಬಂದಿದ್ದು, ಯಾವ ಬೆದರಿಕೆ ಕರೆಗಳಿಗೂ ನಾನು ಜಗ್ಗುವುದಿಲ್ಲ. ಸಮಾಜದ ಶಾಸಕರಿಗೆ ಹಕ್ಕನ್ನು ಕೇಳುವ ಶಕ್ತಿ ಇಲ್ಲ. ಅವರು ತಮ್ಮ ಶಾಸಕತ್ವಕ್ಕೆ ರಾಜೀನಾಮೆ ನೀಡಿ ನಮ್ಮ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಬೇಕು. ನಮ್ಮ ಸಮಾಜದ ಇತರ ಶ್ರೀಗಳು ಬೆಂಬಲ ಕೊಟ್ಟಿದ್ದಾರೆ. ಆದರೆ, ಅವರಾರಯರಿಗೂ ಬಹಿರಂಗವಾಗಿ ಮಾತನಾಡಲು ಆಗುತ್ತಿಲ್ಲ. ಯಾಕೆಂದರೆ ಅವರೆಲ್ಲ ಸರ್ಕಾರದ ನೆರವಿನಲ್ಲಿ ಮಠ, ಮತ್ತಿನ್ನೇನನ್ನೋ ಮಾಡಿರುತ್ತಾರೆ. ನನಗೆ ಯಾ ವ ಹಂಗೂ ಇಲ್ಲ. ಹಾಗಾಗಿ ನಾನು ಮಾತನಾಡುತ್ತಿದ್ದೇನೆ ಎಂದು ಶ್ರೀ ಪ್ರಣವಾನಂದ ಸ್ವಾಮೀಜಿ ತಿಳಿಸಿದರು.