ದತ್ತಪೀಠ ವಿವಾದ: ಮುಸ್ಲಿಂರನ್ನು ಒದ್ದು ಓಡಿಸಬೇಕು: ಪ್ರಮೋದ್‌ ಮುತಾಲಿಕ್‌

By Kannadaprabha News  |  First Published May 26, 2022, 5:58 AM IST

*  ಸಿ.ಟಿ. ರವಿ, ಶೋಭಾ ಕರಂದ್ಲಾಜೆ ವಿರುದ್ಧವೂ ಮುತಾಲಿಕ್‌ ವಾಗ್ದಾಳಿ 
*  ದತ್ತ ಪೀಠದಲ್ಲಿ ಮಾಂಸದೂಟ ಮಾಡಿರುವುದನ್ನು ಖಂಡಿಸುತ್ತೇನೆ
*  ಸಿಟಿ ರವಿ, ಶೋಭಾ ಕರಂದ್ಲಾಜೆ ಅವರೇ ನಿಮಗೆ ನೋವಾಗಲ್ವಾ? 


ಕೊಪ್ಪಳ(ಮೇ.26): ದತ್ತ ಪೀಠದಲ್ಲಿ ಮಾಡಬಾರದ ಚಟುವಟಿಕೆ ಮಾಡುವ ಮುಸ್ಲಿಮರನ್ನು ಒದ್ದೋಡಿಸಬೇಕು ಎಂದು ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್‌ ಮುತಾಲಿಕ್‌ ಹೇಳಿದರು.

ಸೋಮವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿ.ಟಿ. ರವಿ, ಶೋಭಾ ಕರಂದ್ಲಾಜೆ ವಿರುದ್ಧವೂ ವಾಗ್ದಾಳಿ ನಡೆಸಿದ ಅವರು, ದತ್ತ ಪೀಠ ಅಪವಿತ್ರ, ಅಪಮಾನ ಆಗಿದೆ. ನೀವೇನ್‌ ನಿದ್ದೆ ಮಾಡ್ತಿದ್ದೀರಾ? ನೀವೆಲ್ಲಾ ಗೆದ್ದಿರೋದೆ ದತ್ತ ಪೀಠದಿಂದ. ಧಾರ್ಮಿಕ ದತ್ತಿ ಇಲಾಖೆ ಅಧಿಕಾರಿಯನ್ನು ಕಿತ್ತು ಬಿಸಾಕುವುದನ್ನು ಬಿಟ್ಟು ಕತೆ ಹೇಳಿದರೆ ಯಾರ ಕೇಳ್ತಾರೆ? ದತ್ತ ಪೀಠದಲ್ಲಿ ಮಾಂಸದೂಟ ಮಾಡಿರುವುದನ್ನು ಖಂಡಿಸುತ್ತೇನೆ. ಸಿಟಿ ರವಿ, ಶೋಭಾ ಕರಂದ್ಲಾಜೆ ಅವರೇ ನಿಮಗೆ ನೋವಾಗಲ್ವಾ? ಅಲ್ಲಿರುವ ಪೊಲೀಸ್‌ ಅಧಿಕಾರಿಗಳನ್ನು ಸಸ್ಪೆಂಡ್‌ ಮಾಡಿ ಎಂದು ಆಗ್ರಹಿಸಿದರು.

Tap to resize

Latest Videos

ಮುತಾಲಿಕ್‌ ರಾಜಕೀಯ ಚಾಪ್ಟರ್‌ ಕ್ಲೋಸ್‌ ಆಗಿದೆ. ನಮ್ಮಂಥವರಿಗೆ ಅವಕಾಶ ಇಲ್ಲ ಬಿಡಿ. ಬಿಜೆಪಿಯವರದು ಹಿಂದುತ್ವ ಏನಿಲ್ಲ, ಬರೀ ನಾಟಕ ಎಂದು ಆರೋಪಿಸಿದರು. ಡಿಕೆ ಶಿವಕುಮಾರ, ಕುಮಾರಸ್ವಾಮಿ ವೋಟ್‌ಗಾಗಿ ಜೊಲ್ಲು ಸುರಿಸುತ್ತಿದಾರೆ. ಮುಸ್ಲಿಮರ ವೋಟ್‌ಗೆ ಜೊಲ್ಲು ಸುರಿಸುವ ರಾಜಕಾರಣಿಗಳಿಗೆ ಧಿಕ್ಕಾರ ಎಂದರು.

ಗ್ಯಾನವಾಪಿ ಹಿಂದೂ ದೇಗುಲ, ಮಸೀದಿಯಲ್ಲ: ಪ್ರಮೋದ್‌ ಮುತಾಲಿಕ್‌

ಕುಮಾರಸ್ವಾಮಿ ಅವರೇ ಹೋಗಿ ನಿಮ್ಮ ತಂದೆ ದೇವೇಗೌಡರನ್ನ ಕೇಳಿ. ಯಾಕೆ ಚಂಡಿಕಾ ಯಾಗ ಮಾಡ್ತಾರೆ? ಹಿಜಾಬ್‌, ಹಲಾಲ್‌, ಪ್ರಾರಂಭ ಮಾಡಿದ್ದು, ಮುಸ್ಲಿಮರು. ಇದೀಗ ಅದು ದೇವಸ್ಥಾನಕ್ಕೆ ಬಂದು ನಿಂತಿದೆ. ಮುಸ್ಲಿಮರಿಗಾಗಿ ನೀವು ಸ್ಟಂಟ್‌ ಮಾಡುವುದರಿಂದಲೇ ಈ ಸ್ಥಿತಿ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನೂತನ ಮನೆಯಲ್ಲಿ ಶಿವಾಜಿ ಮೂರ್ತಿ ಪ್ರತಿಷ್ಠಾಪನೆ

ಗಂಗಾವತಿ: ಇಲ್ಲಿನ ಗುಂಡಮ್ಮನ ಕ್ಯಾಂಪ್‌ನ ಹಿಂದೂ ಸಂಘಟನೆಯ ಕಾರ್ಯಕರ್ತ ಪ್ರಶಾಂತ ಚಿತ್ರಗಾರ ಅವರ ನೂತನ ಮನೆಯಲ್ಲಿ ಶಿವಾಜಿ ಮೂರ್ತಿ ಪ್ರತಿಷ್ಠಾಪನೆ ಜರುಗಿತು.

ಶಿವಾಜಿ ಮೂರ್ತಿಗೆ ಶ್ರೀರಾಮ ಸೇನೆಯ ಅಧ್ಯಕ್ಷ ಪ್ರಮೋದ್‌ ಮುತಾಲಿಕ್‌ ಪೂಜೆ ಸಲ್ಲಿಸಿದರು. ಇದಕ್ಕಿಂತ ಪೂರ್ವದಲ್ಲಿ ನಿವಾಸದಲ್ಲಿ ಹೋಮ ಹವನಗಳು ಜರುಗಿದವು. ಚೆನ್ನಬಸವ ಸ್ವಾಮಿ ಮಠದಿಂದ ಕ್ಯಾಂಪಿನಲ್ಲಿರುವ ಚಿತ್ರಗಾರ ನಿವಾಸದವರೆಗೂ ಮೆರವಣಿಗೆ ಜರುಗಿತು.
 

click me!