Anti Conversion Bill: ಮತಾಂತರ ನಿಷೇಧ ಕಾಯ್ದೆ ವಿರೋಧಿಗಳು ಅಭಿವೃದ್ಧಿ ಕಂಟಕರು: ಮುತಾಲಿಕ್‌

By Kannadaprabha News  |  First Published Dec 22, 2021, 7:59 AM IST

*  ಮತಾಂತರ ನಿಷೇಧ ಕಾಯ್ದೆ ಮಂಡನೆಗೆ ಮುಂದಾಗಿರುವುದು ಸ್ವಾಗತಾರ್ಹ
*  ಕಾಯಿದೆ ಜಾರಿಗೆ ತರುವಂತೆ ಆಗ್ರಹಿಸಿದ್ದ ಹಿಂದು ಸಂಘಟನೆಗಳು
*  ಹಿಂದುಸ್ತಾನದಲ್ಲಿ ಹಿಂದುಗಳ ಸುರಕ್ಷತೆಗೆ ಈ ಕಾಯಿದೆ ಬಂದಿದೆ


ಧಾರವಾಡ(ಡಿ.22):  ಮತಾಂತರ ನಿಷೇಧ ಕಾಯ್ದೆ(Anti Conversion Bill) ವಿರೋಧ ಮಾಡುವವರು ಗಾಂಧೀಜಿ(Mahatma Gandhi), ಅಂಬೇಡ್ಕರ್‌(Dr BR Ambedkar) ಹಾಗೂ ಸಂವಿಧಾನ(Constitution) ವಿರೋಧಿಗಳು ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್‌ ಮುತಾಲಿಕ್‌(Pramod Mutalik) ಹೇಳಿದರು.

ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಸದನದಲ್ಲಿ ಬಿಜೆಪಿ(BJP) ಮತಾಂತರ ನಿಷೇಧ ಕಾಯ್ದೆ ಮಂಡನೆಗೆ ಮುಂದಾಗಿರುವುದು ಸ್ವಾಗತಾರ್ಹ. ಈ ಕಾಯಿದೆ ಜಾರಿಗೆ ತರುವಂತೆ ಎಲ್ಲ ಹಿಂದು ಸಂಘಟನೆಗಳು(Hindu Organizations) ಆಗ್ರಹಿಸಿದ್ದವು. ಜೊತೆಗೆ ನಿತ್ಯವೂ ಹೋರಾಟ ಮಾಡುತ್ತಿವೆ. ಇದಕ್ಕೆ ತಾರ್ಕಿಕ ಅಂತ್ಯ ಕಾಣಿಸುವ ಕೆಲಸವನ್ನು ಬಿಜೆಪಿ ಮಾಡಿದೆ. ಈ ಕಾಯಿದೆ ವಿರೋಧ ಮಾಡುವವರೂ ಇದ್ದಾರೆ. ಕಾಂಗ್ರೆಸ್‌(Congress), ಜೆಡಿಎಸ್‌(JDS), ಕಮ್ಯೂನಿಸ್ಟ್‌(Communist) ಸೇರಿ ಇನ್ನು ಕೆಲ ಜನ ವಿರೋಧಿಸುತ್ತಾರೆ. ಇವರು ದೇಶದ ಅಭಿವೃದ್ಧಿಗೆ ಕಂಟಕರು ಎಂದು ಆಕ್ರೋಶ ವ್ಯಕ್ತಪಡಿಸಿದರು.

Tap to resize

Latest Videos

undefined

ಮತಾಂತರ ನಿಷೇಧ ಕಾಯ್ದೆ ಮಂಡನೆ: ವಿಧೇಯಕದ ಪ್ರಮುಖ ಅಂಶಗಳು ಇಲ್ಲಿವೆ

ಹಿಂದುಸ್ತಾನದಲ್ಲಿ(Hindustan) ಹಿಂದುಗಳ(Hindu) ಸುರಕ್ಷತೆಗೆ ಈ ಕಾಯಿದೆ ಬಂದಿದೆ. ಕ್ರಿಶ್ಚಿಯನ್‌ರು(Christians) ಈ ದೇಶ ನಾಶ ಮಾಡಲು ವ್ಯವಸ್ಥಿತ ಮತಾಂತರ(Conversion) ಮಾಡುತ್ತಿದ್ದಾರೆ. ವಿವೇಕಾನಂದರು ಮತಾಂತರವನ್ನು ದೇಶಾಂತರ, ಗಾಂಧೀಜಿ ವ್ಯಾಪಾರೀಕರಣ ಎಂದಿದ್ದರು. ಈ ಮಸೂದೆ ಒಪ್ಪಿಗೆ ಪಡೆದ ನಂತರ ಕ್ರಿಶ್ಚಿಯನ್‌ರು ತಮ್ಮ ಅಂಗಡಿ ಮುಚ್ಚಬೇಕು. ಕ್ರಿಶ್ಚಿಯನ್‌ ಸೇವೆ ಹಿಂದೆ ಮತಾಂತರ ಹುನ್ನಾರವೇ ಇದೆ ಎಂದು ಆರೋಪಿಸಿದರು.

ರಾಜ್ಯದಲ್ಲಿ ಅಶಾಂತಿ ಮೂಡಿಸಲು ಮತಾಂತರ ನಿಷೇಧ ಮಸೂದೆ: ಡಿಕೆಶಿ

ಬೆಳಗಾವಿ: ರಾಜ್ಯ ಸರ್ಕಾರ ಸಂವಿಧಾನ ವಿರುದ್ಧವಾಗಿರುವ ‘ಮತಾಂತರ ನಿಷೇಧ ಮಸೂದೆ’ ಮುಖಾಂತರ ರಾಜ್ಯದಲ್ಲಿ(Karnataka) ಅಶಾಂತಿ ಮೂಡಿಸಲು ಮುಂದಾಗಿದೆ. ಈ ಮಸೂದೆ ಮಂಡನೆಗೆ ತೀವ್ರ ವಿರೋಧವಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌(DK Shivakumar) ಹೇಳಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲಿನಿಂದಲೂ ನಾವು ಈ ವಿವಾದಿತ ಮಸೂದೆ ವಿರೋಧಿಸಿದ್ದೇವೆ. ರಾಜ್ಯ ಸರ್ಕಾರ(Government of Karnataka) ರಾಜಕೀಯ ಉದ್ದೇಶಕ್ಕಾಗಿ ವಿಷಯಾಂತರ ಮಾಡುವ ಪ್ರಯತ್ನ ಮಾಡುತ್ತಿದೆ. ಬಲವಂತ ಮತಾಂತರ ಮಾಡುವಂತಿಲ್ಲ ಎಂಬ ಕಾನೂನು ಇದ್ದರೂ ಧಾರ್ಮಿಕ ಸ್ವಾತಂತ್ರ್ಯ, ಬದುಕಿನ ಹಕ್ಕನ್ನು ಯಾರು ಕಸಿಯಲು ಸಾಧ್ಯವಿಲ್ಲ. ಇದು ಸರ್ವ ಧರ್ಮಕ್ಕೂ(Religion) ಸೇರಿದ ವಿಚಾರ. ಬೌದ್ಧ , ಕ್ರೈಸ್ತ ಧರ್ಮ ಸೇರಿದಂತೆ ಎಲ್ಲವೂ ಇದರ ವ್ಯಾಪ್ತಿಯಲ್ಲಿದೆ. ಇಸ್ಕಾನ್‌, ಅಮೃತಾನಂದಮಯಿ ಆಶ್ರಮ ಸೇರಿದಂತೆ ಹಲವೆಡೆ ವಿದೇಶದಿಂದ ಅನ್ಯ ಧರ್ಮದವರು ಬಂದು ಹರೇ ರಾಮ, ಹರೇ ಕೃಷ್ಣ ಎಂದು ಭಜನೆ ಮಾಡುತ್ತಾರೆ. ಹೀಗಿರುವಾಗ ಈ ಮಸೂದೆ ಎಲ್ಲರಿಗೂ ಕಸಿವಿಸಿ ವಾತಾವರಣ ಸೃಷ್ಟಿಸಲಿದೆ ಎಂದರು.

Anti Conversion Bill: ಮತಾಂತರ ನಿಷೇಧ ಕಾಯ್ದೆ ಮಂಡನೆ, ಸದನದಲ್ಲಿ ಕೋಲಾಹಲ

ನಮ್ಮದು ಜಾತ್ಯಾತೀತ ರಾಜ್ಯ(Secular State). ಇಲ್ಲಿ ಎಲ್ಲ ಜನಾಂಗದವರು ಬದುಕಲು ಅವಕಾಶವಿದೆ. ಆದರೆ, ರಾಜ್ಯ ಸರ್ಕಾರ ಈ ಮಸೂದೆ ಮೂಲಕ ಶಾಂತಿ ಕದಡಲು ಪ್ರಯತ್ನಿಸುತ್ತಿದೆ. ಈ ದೇಶವನ್ನು ಮೊಘಲರು, ಪೋರ್ಚುಗೀಸರು ಹಾಗೂ ಬ್ರಿಟಿಷರು ಆಳಿದ್ದಾರೆ. ಕ್ರೈಸ್ತರ ಜನಸಂಖ್ಯೆ ಎಲ್ಲಿ ಹೆಚ್ಚಾಗಿದೆ. ಈಗಲೂ ಸುಮಾರು ಶೇ.2.30 ರಷ್ಟುಜನ ಇದ್ದಾರೆ. ಎಲ್ಲ ನಾಯಕರು ಕ್ರೈಸ್ತ ಶಿಕ್ಷಣ ಸಂಸ್ಥೆಯಲ್ಲಿ ತಮ್ಮ ಮಕ್ಕಳಿಗೆ ಶಿಕ್ಷಣ, ಆಸ್ಪತ್ರೆಯಲ್ಲಿ ಚಿಕಿತ್ಸೆ ಬೇಕು ಅಂತಾರೆ. ನಾನು ಕ್ರೈಸ್ತ ಶಿಕ್ಷಣ ಸಂಸ್ಥೆಯಲ್ಲಿ ಓದಿದ್ದೇನೆ. ನನಗೆ ಯಾರೂ ಬಂದು ಕ್ರೈಸ್ತ ಧರ್ಮದ ಬಗ್ಗೆ ಬೋಧನೆ ಆಗಲಿ, ಮತಾಂತರಕ್ಕೆ ಬಲವಂತ ಮಾಡಿಲ್ಲ ಎಂದು ಹೇಳಿದರು.

ಇಬ್ಬರ ಪ್ರೀತಿ ಲವ್‌ ಜಿಹಾದ್‌ ಆಗುತ್ತಾ?:

ಇಬ್ಬರ ಹೃದಯ ಪರಸ್ಪರ ಇಷ್ಟಪಟ್ಟು ಪ್ರೀತಿಸಿದರೆ ಲವ್‌ ಜಿಹಾದ್‌(Love Jihad) ಆಗುತ್ತಾ? ಅಕ್ಕಿ ಒಂದು ಕಡೆ, ಅರಿಶಿನ ಒಂದು ಕಡೆ ಇರುತ್ತದೆ. ಅವೆರಡೂ ಸೇರಿದರೆ ಮಾತ್ರ ಮಂತ್ರಾಕ್ಷತೆ ಆಗುತ್ತದೆ. ರಾಜಕೀಯಕ್ಕಾಗಿ ವಿವಾದಿತ ಮಸೂದೆ ತರುವುದು ಸರಿಯಲ್ಲ. 21 ಮಂತ್ರಿಗಳ ಮಕ್ಕಳು ಕ್ರೈಸ್ತ ಶಿಕ್ಷಣ ಸಂಸ್ಥೆಗಳಲ್ಲಿ ಓದುತ್ತಿದ್ದಾರೆ. ಎಲ್ಲಾದರೂ ಒಂದೇ ಒಂದು ಬಲವಂತದ ಮತಾಂತರ ಪ್ರಕರಣ ಇದೆಯಾ? ಈ ಸಮುದಾಯ ಸಮಾಜ ಸೇವೆ ಮಾಡಿಕೊಂಡು ಬಂದಿದೆ. ನಾವು ಈ ಮಸೂದೆಯನ್ನು ಖಂಡಿಸುತ್ತೇವೆ. ಇದು ರಾಜ್ಯಕ್ಕೆ ಕಪ್ಪು ಚುಕ್ಕೆ ಎಂದು ಕಾಡಿಕಾರಿದರು.
 

click me!