ಅರವಿಂದ ಪಾಟೀಲ್ ಸವದಿ ಮನೆಯಲ್ಲಿ ಪಾತ್ರೆ ತೊಳೀತಾನೆ, ಅರಿವೆ ಒಗೀತಾನೆ. ಸವದಿ ತನ್ನ ವೈಯಕ್ತಿಕ ಲಾಭಕ್ಕಾಗಿ ಅರವಿಂದ ಪಾಟೀಲ್ ಹೆಸರು ಹೇಳುವ ಮೂಲಕ ನಾಟಕೀಯ ಹಾಗೂ ಢೋಂಗಿ ರಾಜಕಾರಣ ಮಾಡುತ್ತಿದ್ದಾರೆ:ಪ್ರಮೋದ್ ಕೋಚರಿ
ಬೆಳಗಾವಿ(ಜ.31): ಖಾನಾಪುರ ಕ್ಷೇತ್ರಕ್ಕೆ ಎಂಇಎಸ್ ಮಾಜಿ ಶಾಸಕ ಅರವಿಂದ ಪಾಟೀಲ್ ಮುಂದಿನ ಬಿಜೆಪಿ ಅಭ್ಯರ್ಥಿ ಎಂಬ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿಕೆಗೆ ಬೆಳಗಾವಿ ಜಿಲ್ಲೆಯ ಖಾನಾಪುರ ಕ್ಷೇತ್ರದ ಬಿಜೆಪಿ ನಾಯಕರು ಗರಂ ಆಗಿದ್ದಾರೆ. ಹೌದು, ಈ ಬಗ್ಗೆ ಸಭೆ ಸೇರಿದ ಕ್ಷೇತ್ರದ ಬಿಜೆಪಿ ನಾಯಕರು ಸವದಿ ವಿರುದ್ಧ ತಮ್ಮ ಆಕ್ರೋಶವನ್ನ ಹೊರಹಾಕಿದ್ದಾರೆ.
undefined
ಸಭೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಖಾನಾಪುರ ಬಿಜೆಪಿ ಮುಖಂಡ ಪ್ರಮೋದ್ ಕೋಚರಿ ಅವರು, ಅರವಿಂದ ಪಾಟೀಲ್ ಮುಂದಿನ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸುತ್ತಾರೆ ಎಂದು ಲಕ್ಷ್ಮಣ ಸವದಿ ಹೇಳ್ತಾರೆ. ನಾವೇನು ಕೈಯಲ್ಲಿ ಬಳೆ ಹಾಕಿಕೊಂಡು ಕುಳಿತಿದ್ದೇವಾ?, ರಾಜೀನಾಮೆ ಪತ್ರ ರೆಡಿ ಮಾಡಿಕೊಂಡು ರಾಜ್ಯಾಧ್ಯಕ್ಷರಿಗೆ, ಸಂಘಟನಾ ಕಾರ್ಯದರ್ಶಿಗೆ ನೀಡೋಣ, ನಮ್ಮ ಕ್ಷೇತ್ರದಲ್ಲಿ ನಾವೇ ರಾಜರು ಇದ್ದ ಹಾಗೇ ಎಂದು ಖಾರವಾಗಿ ಹೇಳಿದ್ದಾರೆ.
ಮಹಿಳೆಯರಿಗಾಗಿ ವಿಶೇಷ ಮೊಬೈಲ್ ಬಸ್ ನಿರ್ಮಾಣ: ಸಚಿವ ಸವದಿ
ಅರವಿಂದ ಪಾಟೀಲ್ ಸವದಿ ಮನೆಯಲ್ಲಿ ಪಾತ್ರೆ ತೊಳೀತಾನೆ, ಅರಿವೆ ಒಗೀತಾನೆ. ಸವದಿ ತನ್ನ ವೈಯಕ್ತಿಕ ಲಾಭಕ್ಕಾಗಿ ಅರವಿಂದ ಪಾಟೀಲ್ ಹೆಸರು ಹೇಳುವ ಮೂಲಕ ನಾಟಕೀಯ ಹಾಗೂ ಢೋಂಗಿ ರಾಜಕಾರಣ ಮಾಡುತ್ತಿದ್ದಾರೆ. ತಮ್ಮ ತಮ್ಮ ಸ್ವಾರ್ಥಕ್ಕೆ ರಾಜಕಾರಣ ಮಾಡುತ್ತಿದ್ದಾರೆ. ಈ ಬಗ್ಗೆ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಎಲ್ಲ ಕಾರ್ಯಕರ್ತರು ಸೇರಿ ಪತ್ರ ಬರೆಯೋಣ. ಲಕ್ಷ್ಮಣ ಸವದಿಗೆ ನಮ್ಮ ತಾಲೂಕು ರಾಜಕಾರಣದಲ್ಲಿ ಪ್ರವೇಶಿಸುವ ಹಕ್ಕಿಲ್ಲ ಎಂದು ಕಿಡಿ ಕಾರಿದ್ದಾರೆ.