ಚಂದ್ರಯಾನ ಟೀಕಿಸಿದ ಪ್ರಕಾಶ್‌ ರೈ ದೇಶ ಬಿಟ್ಟು ಹೋಗಲಿ: ಸಚಿವೆ ಶೋಭಾ ಕರಂದ್ಲಾಜೆ

By Kannadaprabha News  |  First Published Aug 24, 2023, 3:00 AM IST

ಪ್ರಕಾಶ್‌ ರೈ ಅವರು ಚಂದ್ರಯಾನದಂಥ ವಿಷಯವನ್ನು ಗೇಲಿ, ತಮಾಷೆ ಮಾಡಿರುವುದು, ನಮ್ಮ ವಿಜ್ಞಾನಿಗಳಿಗೆ ಮಾಡಿದ ಅಪಮಾನ, ಭಾರತಕ್ಕೆ ಮಾಡುತ್ತಿರುವ ಅಪಮಾನ ಎಂದವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಕೇಂದ್ರ ರೈತ, ಕೃಷಿ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ 


ಉಡುಪಿ(ಆ.24):  ಇಡೀ ವಿಶ್ವವೇ ಭಾರತದ ಇಸ್ರೋವನ್ನು ಕೊಂಡಾಡುತ್ತಿದೆ, ಆದರೆ ನಟ ಪ್ರಕಾಶ್‌ ರೈ ಇಸ್ರೋವನ್ನು ಗೇಲಿ ಮಾಡುತ್ತಿದ್ದಾರೆ. ಅಂಥವರು ಭಾರತದಲ್ಲಿ ಇರಬೇಕಾದ ಅವಶ್ಯಕತೆ ಇಲ್ಲ, ಅವರು ಭಾರತ ಬಿಟ್ಟು ಹೋಗಲಿ ಎಂದು ಕೇಂದ್ರ ರೈತ, ಕೃಷಿ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. 

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಕಾಶ್‌ ರೈ ಅವರು ಚಂದ್ರಯಾನದಂಥ ವಿಷಯವನ್ನು ಗೇಲಿ, ತಮಾಷೆ ಮಾಡಿರುವುದು, ನಮ್ಮ ವಿಜ್ಞಾನಿಗಳಿಗೆ ಮಾಡಿದ ಅಪಮಾನ, ಭಾರತಕ್ಕೆ ಮಾಡುತ್ತಿರುವ ಅಪಮಾನ ಎಂದವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. 

Tap to resize

Latest Videos

undefined

ಚಂದ್ರಯಾನ-3: ಪ್ರತಿಯೊಬ್ಬ ದೇಶವಾಸಿಗೂ ಹೆಮ್ಮೆಯ ಕ್ಷಣ, ಸಚಿವ ಸತೀಶ್ ಜಾರಕಿಹೊಳಿ

ಪ್ರಕಾಶ್‌ ರೈ ಭಾರತವನ್ನು ಪ್ರೀತಿಸುವುದಿಲ್ಲ, ಆದರೆ ಅವರಿಗೆ ಭಾರತದ ಗಾಳಿ, ನೀರು, ಅನ್ನ ಬೇಕು, ಅವರ ದೇಹ ಮಾತ್ರ ಇಲ್ಲಿದೆ, ಮನಸ್ಸು ಬೇರೆಲ್ಲೋ ಇದೆ. ಆದ್ದರಿಂದ ಅವರು ಭಾರತದ ಬಗ್ಗೆ ಇಷ್ಟು ದುಃಖಪಟ್ಟು ಇಲ್ಲಿರಬೇಕಾದ ಅವಶ್ಯಕತೆ ಇಲ್ಲ, ಅವರ ಮನಸ್ಸು ಎಲ್ಲಿದೆಯೋ ಅಲ್ಲಿಗೆ ಹೋಗಲಿ ಎಂದರು.

click me!