ಸಾವಿರಾರು ಬಿಲ್ ಬಾಕಿ: ರಾಜ್ಯದ ಪ್ರಸಿದ್ಧ ದೇಗುಲದ ವಿದ್ಯುತ್‌ ಸಂಪರ್ಕ ಕಟ್‌

Kannadaprabha News   | Asianet News
Published : Nov 12, 2020, 06:58 AM IST
ಸಾವಿರಾರು ಬಿಲ್ ಬಾಕಿ: ರಾಜ್ಯದ ಪ್ರಸಿದ್ಧ ದೇಗುಲದ ವಿದ್ಯುತ್‌ ಸಂಪರ್ಕ ಕಟ್‌

ಸಾರಾಂಶ

ಸಾವಿರಾರು ರು. ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡ ಪರಿಣಾಮ ರಾಜ್ಯದ ಪ್ರಸಿದ್ಧ ದೇಗುಲದ ವಿದ್ಯುತ್ ಸಂಪರ್ಕ ಕಟ್ ಮಾಡಲಾಗಿದೆ. 


ಹಾಸನ (ನ.12) : ಕೇಂದ್ರ ಪುರಾತತ್ವ ಇಲಾಖೆ ಅಧಿ​ಕಾರಿಗಳ ನಿರ್ಲಕ್ಷ್ಯದಿಂದಾಗಿ ಹಳೇಬೀಡಿನ ಐತಿಹಾಸಿಕ ಹೊಯ್ಸಳೇಶ್ವರ ದೇಗುಲವು ಹತ್ತು ದಿನಗಳಿಂದ ಕಗ್ಗತ್ತಿನಲ್ಲಿ ಇರುವಂತಾಗಿದೆ. 

ವಿದ್ಯುತ್‌ ಬಿಲ್‌ ಬಾಕಿ ಉಳಿಸಿಕೊಂಡಿರುವ ಕಾರಣ ಸೆಸ್ಕ ಸಿಬ್ಬಂದಿ ಸಂಪರ್ಕ ಕಡಿತಗೊಳಿಸಿದ್ದು 6 ತಿಂಗಳ ಬಾಕಿ 45,000 ಅನ್ನು ಪುರಾತತ್ವ ವಿಭಾಗ ಪಾವತಿಸಬೇಕಿದೆ. 

ಪ್ರತಿನಿತ್ಯ ದೇಗುಲಕ್ಕೆ ಭೇಟಿ ನೀಡುತ್ತಿರುವ ಪ್ರವಾಸಿಗರು ಹಾಗೂ ಭಕ್ತರು ಅ​ಧಿಕಾರಿಗಳ ಉದಾಸೀನ ಮನೋಭಾವ ತಿಳಿದು ಬೇಸರ ವ್ಯಕ್ತಪಡಿಸುತ್ತಿದ್ದು, ದೇಗುಲದ ಒಳಭಾಗದ ಶಿಲ್ಪಕಲೆಯನ್ನು ಸವಿಯಲಾಗದೆ ನಿರಾಶರಾಗುತ್ತಿದ್ದಾರೆ. 

ಮೂರು ತಿಂಗಳ ಹಿಂದೆ ಇದೇ ಕಾರಣಕ್ಕೆ ದೇಗುಲದ ವಿದ್ಯುತ್‌ ಸಂಪರ್ಕವನ್ನು ಸೆಸ್ಕ ಸಿಬ್ಬಂದಿ ಕಡಿತಗೊಳಿಸಿದ್ದರು. ಬಾಕಿ ಪಾವತಿಸುವುದಾಗಿ ಹೇಳಿದ್ದ ಪುರಾತತ್ವ ವಿಭಾಗದ ಅ​ಧಿಕಾರಿಗಳ ಭರವಸೆ ಮೇರೆಗೆ ಹಾಗೂ ಅರ್ಚಕರ ಮನವಿ ಆಲಿಸಿ ಪುನಃ ಸಂಪರ್ಕ ಕಲ್ಪಿಸಿದ್ದರು. ಆದರೆ, ಅಂದಿನಿಂದಲೂ ಬಿಲ್‌ ಬಾಕಿ ಇದ್ದು, ಈಗ ಮೊತ್ತವೂ ಹೆಚ್ಚಾಗಿರುವ ಕಾರಣ ನಿಯಮಾನುಸಾರ ಸಂಪರ್ಕ ಕಡಿತಗೊಳಿಸಲಾಗಿದೆ.

PREV
click me!

Recommended Stories

ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮುಗಿಸಿ ಬೈಕ್‌ನಲ್ಲಿ ತೆರಳುತ್ತಿದ್ದ ಜೋಡಿಗೆ ಲಾರಿ ಡಿಕ್ಕಿ, ಸ್ಥಳದಲ್ಲೇ ಸಾವು
ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ