Chitradurga News:ಜನರ ಸೇವೆಗೆ ಅಧಿಕಾರ ಮೀಸಲು: ಶಾಸಕ ಎಂ. ಚಂದ್ರಪ್ಪ

By Kannadaprabha News  |  First Published Dec 16, 2022, 12:02 AM IST

ತಮಗೆ ಸಿಕ್ಕಿರುವ ಅಧಿಕಾರವನ್ನು ಕ್ಷೇತ್ರದ ಜನರ ಸಮಸ್ಯೆಗಳನ್ನು ಬಗೆಹರಿಸಲು ಮೀಸಲಿಡಬೇಕೆಂಬ ಹೊಣೆಗಾರಿಕೆಯನ್ನು ಮನದಲ್ಲಿಟ್ಟುಕೊಂಡು ಶ್ರಮ ವಹಿಸಿ ಕೆಲಸ ಮಾಡುತ್ತಿದ್ದೇನೆ ಎಂದು ಹೊಳಲ್ಕೆರೆ ಕ್ಷೇತ್ರದ ಶಾಸಕ ಎಂ. ಚಂದ್ರಪ್ಪ ಹೇಳಿದರು.


ಸಿರಿಗೆರೆ (ಡಿ.16) : ತಮಗೆ ಸಿಕ್ಕಿರುವ ಅಧಿಕಾರವನ್ನು ಕ್ಷೇತ್ರದ ಜನರ ಸಮಸ್ಯೆಗಳನ್ನು ಬಗೆಹರಿಸಲು ಮೀಸಲಿಡಬೇಕೆಂಬ ಹೊಣೆಗಾರಿಕೆಯನ್ನು ಮನದಲ್ಲಿಟ್ಟುಕೊಂಡು ಶ್ರಮ ವಹಿಸಿ ಕೆಲಸ ಮಾಡುತ್ತಿದ್ದೇನೆ ಎಂದು ಹೊಳಲ್ಕೆರೆ ಕ್ಷೇತ್ರದ ಶಾಸಕ ಎಂ. ಚಂದ್ರಪ್ಪ ಹೇಳಿದರು.

ಹೊಳಲ್ಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಭರಮಸಾಗರ ಹೋಬಳಿಯ ಹೆಗ್ಗೆರೆ ಗ್ರಾಮದಲ್ಲಿ 1 ಕೋಟಿ ರೂ.ವೆಚ್ಚದ ಸಿಮೆಂಟ್‌ ರಸ್ತೆ ಮತ್ತು ಡಾಂಬರ್‌ ರಸ್ತೆ ಕಾಮಗಾರಿಗೆ ಭೂಮಿಪೂಜೆ ಸಲ್ಲಿಸಿ ಮಾತನಾಡಿದರು. ಗ್ರಾಮದಿಂದ ಭರಮಸಾಗರಕ್ಕೆ ಹೋಗಲು 1 ಕೋಟಿ 25 ಲಕ್ಷ ರು.ಗಳನ್ನು ರಸ್ತೆ ನಿರ್ಮಾಣಕ್ಕೆ ನೀಡಿದ್ದೇನೆ. ಸಿರಿಗೆರೆಯ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ಶಾಂತಿವನದವರೆಗೆ ರಸ್ತೆಗೆ 4 ಕೋಟಿ ಅನುದಾನ ನೀಡಿದ್ದೇನೆ. ಜನ ಮತ್ತು ವಾಹನಗಳ ಓಡಾಟಕ್ಕೆ ಉತ್ತಮ ರಸ್ತೆ ಅವಶ್ಯಕತೆಯಿದೆ ಎನ್ನುವುದನ್ನು ಗಮನಿಸಿ ಗುಣಮಟ್ಟದ ರಸ್ತೆಗೆ ಒತ್ತು ನೀಡುತ್ತಿದ್ದೇನೆಂದು ಹೇಳಿದರು.

Latest Videos

undefined

ಚಿತ್ರದುರ್ಗ: ಅರ್ಧಕ್ಕೆ ನಿಂತ ಶಾಲಾ ಕಟ್ಟಡ ಕಾಮಗಾರಿ, ಮರದ ಕೆಳಗೆ ಮಕ್ಕಳಗೆ ಪಾಠ

ಮೊದಲ ಬಾರಿಗೆ ನಾನು ಭರಮಸಾಗರದಿಂದ ಶಾಸಕನಾದಾಗ ಸರ್ಕಾರದಲ್ಲಿ ಅಷ್ಟೊಂದು ಹಣ ಇರುತ್ತಿರಲಿಲ್ಲ. ಅಂತಹ ಕಷ್ಟದÜ ಕಾಲದಲ್ಲಿಯೇ 386 ಹಳ್ಳಿಗಳಲ್ಲಿ ಟಾರ್‌ ರಸ್ತೆ ಮಾಡಿಸಿದ್ದಕ್ಕೆ ಜನರಿಂದ ರಸ್ತೆ ರಾಜ ಎಂಬ ಬಿರುದು ಪಡೆದಿದ್ದೆ. ಎರಡನೆ ಬಾರಿಗೆ ಮತ್ತೆ ಭರಮಸಾಗರ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಾಗ ಇಡೀ ಕ್ಷೇತ್ರದಲ್ಲಿ ರಸ್ತೆ, ಕುಡಿಯುವ ನೀರು, ವಿದ್ಯುತ್‌ ಸಮಸ್ಯೆಗಳ ನಿವಾರಣೆಗೆ ಮೊದಲಿನಿಂದಲೂ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಜೋಗ್‌ಫಾಲ್ಸ್‌ನಿಂದ ನೇರವಾಗಿ ಅಜ್ಜನಹಳ್ಳಿ ಸಮೀಪದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಕೇಂದ್ರಕ್ಕೆ ವಿದ್ಯುತ್‌ ಸರಬರಾಜು ಆಗುವಂತೆ ಕಾರ‍್ಯ ನಿರ್ವಹಿಸುತ್ತಿದ್ದೇನೆ. ಅದಕ್ಕಾಗಿ 250 ಕೋಟಿ ರು.ಗಳನ್ನು ಸರ್ಕಾರದಿಂದ ಮಂಜೂರು ಮಾಡಿಸಿಕೊಂಡು ಬಂದಿದ್ದೇನೆ. ಇದರಿಂದ ರೈತರ ವಿದ್ಯುತ್‌ ಸಮಸ್ಯೆಯೂ ಬಗೆಹರಿಯಲಿದೆ ಎಂದರು.

ಚೆಕ್‌ಡಾಮ್‌ ನಿರ್ಮಾಣ:

ಹೊಳಲ್ಕೆರೆ ತಾಲೂಕಿನ ಪ್ರತಿ ಹಳ್ಳಿ ಹಳ್ಳಿಗಳಲ್ಲಿ ಶುದ್ಧ ಕುಡಿಯುವ ನೀರು ಪೂರೈಸುವುದಕ್ಕಾಗಿ ಹಿರಿಯೂರಿನ ವಾಣಿವಿಲಾಸ ಸಾಗರದಿಂದ ನೀರು ತರಲಾಗುವುದು. ಹೊಳಲ್ಕೆರೆ ತಾಲೂಕಿನಾದ್ಯಂತ ಮುನ್ನೂರಕ್ಕೂ ಹೆಚ್ಚು ಕೆರೆ ಕಟ್ಟೆಗಳು ಈಗ ಎಲ್ಲಾ ಭರ್ತಿಯಾಗಿದೆ. ಹೆಗ್ಗೆರೆಯಿಂದ ಹಂಪನೂರು ರಸ್ತೆ, ನೀರ್ಥಡಿ ಕ್ರಾಸ್‌ವರೆಗಿನ ರಸ್ತೆಗೆ 3 ಕೋಟಿ ರು.ಗಳನ್ನು ನೀಡುತ್ತೇ ನೆ. ಶಾಂತಿವನದಲ್ಲಿ ಕೋಡಿ ಬಿದ್ದಿರುವ ನೀರು ವ್ಯರ್ಥವಾಗಿ ಹರಿದು ಹೋಗಲು ಬಿಡದೆ ತಡೆಯುವುದಕ್ಕಾಗಿ ಪಕ್ಕದ ಗೊಲ್ಲರಹಟ್ಟಿಬಳಿ 5 ಕೋಟಿ ರು.ವೆಚ್ಚದಲ್ಲಿ ದೊಡ್ಡ ಚೆಕ್‌ ಡ್ಯಾಂ ನಿರ್ಮಾಣ ಮಾಡಲಾಗಿದೆ ಎಂದರು.

Chitradurga: ಹೊಳಲ್ಕೆರೆ ಬಿಜೆಪಿ ಶಾಸಕ ಚಂದ್ರಪ್ಪ ಪತ್ನಿ, ಪುತ್ರರ ವಿರುದ್ಧ FIR

ಬಿಜೆಪಿ ಹಿರಿಯ ಮುಖಂಡ ಡಿ.ವಿ.ಶರಣಪ್ಪ, ಭರಮಸಾಗರ ಬಿಜೆಪಿ ಮಂಡಲ ಅಧ್ಯಕ್ಷ ಶೈಲೇಶ್‌, ಕಲ್ಲೇಶ್‌, ವೀರೇಶ್‌, ಚಂದ್ರಶೇಖರ್‌, ಡಿ.ಎಸ್‌.ಪ್ರವೀಣ್‌ ಕುಮಾರ್‌, ವೀರೇಶ್‌ ಮುಂತಾದವರು ಭಾಗವಹಿಸಿದ್ದರು.

click me!