ಬೆಂಗಳೂರಿನ ವಿವಿಧೆಡೆ ವಿದ್ಯುತ್‌ ವ್ಯತ್ಯಯ

Kannadaprabha News   | Asianet News
Published : Feb 28, 2020, 07:28 AM IST
ಬೆಂಗಳೂರಿನ ವಿವಿಧೆಡೆ ವಿದ್ಯುತ್‌ ವ್ಯತ್ಯಯ

ಸಾರಾಂಶ

ಬೆಂಗಳೂರಿನ ವಿವಿಧ ಏರಿಯಾಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಯಾವ ಏರಿಯಾಗಳಲ್ಲಿ ಇಲ್ಲಿದೆ ಮಾಹಿತಿ

ಬೆಂಗಳೂರು [ಫೆ.28]: ಹೊಸಕೋಟೆಯ ಆರ್ಮಿ ಮತ್ತು ಕೋನದಾಸಪುರ 66/11 ಕೆ.ವಿ. ಉಪ ವಿದ್ಯುತ್‌ ವಿತರಣಾ ಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾರ್ಯದ ನಿಮಿತ್ತ ನಗರದ ವಿವಿಧ ಪ್ರದೇಶಗಳಲ್ಲಿ ಫೆ.29ರ ಶನಿವಾರ ಬೆಳಗ್ಗೆ 9.30ರಿಂದ ಮಧ್ಯಾಹ್ನ 1.30 ರವರೆಗೆ ವಿದ್ಯುತ್‌ ಅಡಚಣೆಯಾಗಲಿದೆ.

ಆರ್ಮಿ 66/11 ಕೆ.ವಿ. ಉಪಕೇಂದ್ರದ ವ್ಯಾಪ್ತಿಯಲ್ಲಿ ಬರುವ ಕನ್ನಮಂಗಲ (ಬೇವಿನ ಮರ ಕಾಲೊನಿ), ಕೊರಳೂರು, ಮಲ್ಲಸಂದ್ರೆ, ಅಪ್ಪಾಜಿಪುರ, ನಡುವತ್ತಿ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳು. ಕೋನದಾಸಪುರದ ದೊಡ್ಡಬನಹಳ್ಳಿ, ಗೊರವಿಗೆರೆ, ಚಿನ್ನಾನಾಗೇನಹಳ್ಳಿ, ಶೀಗೇಹಳ್ಳಿ, ಕನ್ನಮಂಗಲ, ಖಾಜಿಸೊಣ್ಣೇನಹಳ್ಳಿ, ಜೋಗಿ ಕಾಲೋನಿ, ಚಿಕ್ಕಬನಹಳ್ಳಿ.

ಲಾಭದಲ್ಲಿದ್ದರೂ ಮಸ್ಕಾಂನಿಂದ ವಿದ್ಯುತ್‌ ದರ ಏರಿಕೆ!...

ಬಂಡಾಪುರ ಗೇಟ್‌, ಚೀಮಸಂದ್ರ, ಕಿತ್ತಗನೂರು, ಹಳೇಹಳ್ಳಿ, ಬಿದರಹಳ್ಳಿ, ಹಿರಂಡಹಳ್ಳಿ, ಆವಲಹಳ್ಳಿ, ವೀರೇನಹಳ್ಳಿ, ಮೇಡಹಳ್ಳಿ, ಬಟ್ಟರಹಳ್ಳಿ, ಕಾಟಂನಲ್ಲೂರು ಗೇಟ್‌, ಕರುಣಾ ಶ್ರೀ ಲೇಔಟ್‌, ರಿಪ್ಕೋ ಶಾಂತಿನಿಕೇತನ ಲೇಔಟ್‌, ಪಾರ್ವತಿನಗರ, ಸಾಯಿಸಿಟಿ ಲೇಔಟ್‌ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಹೊಸಕೋಟೆ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV
click me!

Recommended Stories

ವಿದ್ಯಾರ್ಥಿನಿಯರ ಮೈಮುಟ್ಟಿ ಅಸಭ್ಯ ವರ್ತನೆ; ಪ್ರೌಢಶಾಲೆಗೆ ನುಗ್ಗಿ ಪ್ರಾಂಶುಪಾಲನಿಗೆ ಧರ್ಮದೇಟು ಕೊಟ್ಟ ಗ್ರಾಮಸ್ಥರು!
ಮೈಸೂರು ಏಕತಾ ಮಹಲ್‌ ವಿವಾದ, ಕೋರ್ಟ್ ಮೆಟ್ಟಲೇರಿದ ರಾಜಮಾತೆ ಪ್ರಮೋದಾದೇವಿ!