ಬೇಸಿಗೆಯ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ರೈತಾಪಿ ಜನರು ಹಾಗೂ ನಾಗರಿಕರು ವರುಣನ ಆಗಮನಕ್ಕೆ ಆಕಾಶದತ್ತ ಕಾಯುತ್ತಿರುವಾಗಲೇ ಹೆಸ್ಕಾಂ ಇಲಾಖೆಯವರು ಮೇಲಿಂದ ಮೇಲೆ ವಿದ್ಯುತ್ ಕಡಿತ ಮಾಡುತ್ತಿರುವುದರಿಂದ ಪಟ್ಟಣದ ನಿವಾಸಿಗಳು ನರಕ ಯಾತನೆ ಅನುಭವಿಸುವಂತಾಗಿದೆ.
ಅಥಣಿ (ಮೇ.26) : ಬೇಸಿಗೆಯ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ರೈತಾಪಿ ಜನರು ಹಾಗೂ ನಾಗರಿಕರು ವರುಣನ ಆಗಮನಕ್ಕೆ ಆಕಾಶದತ್ತ ಕಾಯುತ್ತಿರುವಾಗಲೇ ಹೆಸ್ಕಾಂ ಇಲಾಖೆಯವರು ಮೇಲಿಂದ ಮೇಲೆ ವಿದ್ಯುತ್ ಕಡಿತ ಮಾಡುತ್ತಿರುವುದರಿಂದ ಪಟ್ಟಣದ ನಿವಾಸಿಗಳು ನರಕ ಯಾತನೆ ಅನುಭವಿಸುವಂತಾಗಿದೆ.
ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿನ ವಿವಿಧ ಬಡಾವಣೆಗಳಲ್ಲಿ ಕಳೆದ ಒಂದು ತಿಂಗಳಿಂದ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದ್ದು, ಬೇಸಿಗೆ ಬಿಸಿಲಿನ ತಾಪ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿರುವುದರಿಂದ ಮನೆಯಲ್ಲಿನ ಫ್ಯಾನ್‌ಗಳು ತಿರುಗದೇ ಇದ್ದರೆ ಪ್ರತಿಯೊಬ್ಬರಿಗೂ ನರಕ ಯಾತನೆ ತಪ್ಪಿದ್ದಲ್ಲ. ಅತ್ತ ಹೊರಗಡೆ ಹೋದರೆ ಬಿಸಿಲಿನ ಝಳ, ಇತ್ತ ಮನೆಯಲ್ಲಿದ್ದರೆ ಗಾಳಿ ಇಲ್ಲದೇ ಸಂಕಟಪಡುವ ಪರಿಸ್ಥಿತಿ. ಇಂತಹ ಹೆಸ್ಕಾಂ ಇಲಾಖೆಯ ಅಧಿಕಾರಿಗಳ ವಿರುದ್ಧ ನಗರ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸುವಂತಾಗಿದೆ.
ಇದಲ್ಲದೆ ಪಟ್ಟಣದ ವಿವಿಧ ಬ್ಯಾಂಕ್‌ಗಳಲ್ಲಿ ಮತ್ತು ಸರ್ಕಾರಿ ಮತ್ತು ಖಾಸಗಿ ಕಚೇರಿಗಳಲ್ಲಿಯೂ ಮೇಲಿಂದ ಮೇಲೆ ವಿದ್ಯುತ್ ಸಮಸ್ಯೆ ತಲೆದೋರುತ್ತಿರುವುದರಿಂದ ಸಾರ್ವಜನಿಕರಿಗೆ ಸಕಾಲಕ್ಕೆ ಸೌಲಭ್ಯಗಳು ದೊರಕುತ್ತಿಲ್ಲ. ಇದರಿಂದ ನಾಗರಿಕರು ಪರದಾಡುವಂಥ ಪರಿಸ್ಥಿತಿ ನಿರ್ಮಾಣವಾಗಿದೆ.
ಹೆಚ್ಚು ಕಡಿಮೆ ವೋಲ್ಟೇಜ್ ಪೂರೈಕೆ:
ಕಳೆದೆರಡು ಮೂರು ದಿನಗಳಿಂದ ಪಟ್ಟಣದಲ್ಲಿ ಗಂಟೆಗಟ್ಟಲೆ ವಿದ್ಯುತ್ ಪೂರೈಕೆ ಸ್ಥಗಿತ ಮಾಡಲಾಗುತ್ತಿದ್ದು, ಇದಲ್ಲದೆ ಪೂರೈಸಲಾಗುತ್ತಿರುವ ವಿದ್ಯುತ್ ವೋಲ್ಟೇಜ್ ಹೆಚ್ಚು ಕಡಿಮೆಯಾಗಿ ಮನೆಯಲ್ಲಿನ ಫ್ಯಾನ್, ಫ್ರಿಡ್ಜ್, ಮೊಬೈಲ… ಮತ್ತು ಟಿವಿ ಯಟತಹ ಎಲೆಕ್ಟ್ರಾನಿಕ್ ವಸ್ತುಗಳಿಗೆ ಹಾನಿಯಾಗುತ್ತೇವೆ ಎಂದು ಜನರು ಹೆಸ್ಕಾಂ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಬೆಸ್ಕಾಂ-ಗ್ರಾಪಂ ಚೆಲ್ಲಾಟ: ಸಾರ್ವಜನಿಕರ ಆರೋಗ್ಯಕ್ಕೆ ಕುತ್ತು
ಅಥಣಿ ಪಟ್ಟಣದ ವಿವಿಧ ಬಡಾವಣೆಗಳಲ್ಲಿ ವಿದ್ಯುತ್ ಇರುವ ಕೆಪ್ಯಾಸಿಟಿಯಲ್ಲಿ ಪೂರೈಕೆ ಮಾಡುತ್ತಿದ್ದೇವೆ. ಕೆಪಿಟಿಸಿಎಲ…ನಿಂದ ತಾಂತ್ರಿಕ ದುರಸ್ತಿ ಕಾರ್ಯ ಇದ್ದುದ್ದರಿಂದ ಒಂದು ದಿನದ ಮಟ್ಟಿಗೆ ಪೂರೈಕೆ ಸ್ಥಗಿತಗೊಂಡಿತ್ತು. ಮುಂದೆ ಯಾವುದೇ ತೊಂದರೆ ಇರುವುದಿಲ್ಲ. ವೋಲ್ಟೇಜ್ ಸಮಸ್ಯೆಯಿಂದ ಕೆಲವೊಮ್ಮೆ ಟ್ರಿಪ್ ಆಗುವ ಸಾಧ್ಯತೆ ಇರುತ್ತದೆ. ಇನ್ನು ಕೆಲವು ಸಂದರ್ಭಗಳಲ್ಲಿ ಹೆಚ್ಚಿಗೆ ವಿದ್ಯುತ್ ಪ್ರಸರಣವಾದರೆ ಎಲೆಕ್ಟ್ರಾನಿಕ್ ವಸ್ತುಗಳಿಗೆ ಹಾನಿಯಾಗುವ ಸಾಧ್ಯತೆ ಇರುತ್ತದೆ. ಇನ್ನು ಮುಂದೆ ಈ ರೀತಿ ತೊಂದರೆಯಾಗದಂತೆ ನೋಡಿಕೊಳ್ಳುತ್ತೇವೆ.
-ಸಿ.ಬಿ.ಯಕ್ಕಟಚಿ, ಕಾರ್ಯನಿರ್ವಾಹಕ ಅಭಿಯಂರ್ತ, ಹೆಸ್ಕಾಂ ವಿಭಾಗ ಅಥಣಿ.
ಹೊರಗಡೆ ಹೋದರೆ ಬಿಸಿಲಿನ ಝಳ ಹೆಚ್ಚಾಗಿದ್ದು, ಮನೆಯಲ್ಲಿ ಇರೋಣ ಎಂದರೆ ಮೇಲಿಂದ ಮೇಲೆ ಕರೆಂಟ್ ತೆಗೆಯುತ್ತಿದ್ದಾರೆ. ಕೆಲವೊಮ್ಮೆ ರಾತ್ರಿವೇಳೆಯೂ ಕೂಡ ಕರೆಂಟ್ ತೆಗೆಯುತ್ತಿರುವುದರಿಂದ ನರಕ ಯಾತನೆ ಅನುಭವಿಸುವಂತಾಗಿದೆ. ಹೆಸ್ಕಾಂ ಅಧಿಕಾರಿಗಳು ವಿದ್ಯುತ್ ಪೂರೈಕೆಯಲ್ಲಿನ ತಾಂತ್ರಿಕ ದೋಷವನ್ನು ಕೂಡಲೇ ಸರಿಪಡಿಸಿ ದಿನದ 24 ಗಂಟೆ ವಿದ್ಯುತ್ ಪೂರೈಸಬೇಕು.
-ಸುಪ್ರೀತ್ ಮಾದರ, ಕನಕ ನಗರ ನಿವಾಸಿ.
ಇತ್ತೀಚಿನ ದಿನಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಾಸವಾಗುತ್ತಿದ್ದು, ಈ ರೀತಿ ಹೆಚ್ಚು ಕಡಿಮೆ ವಿದ್ಯುತ್ ಪೂರೈಕೆಯಿಂದ ಮನೆಯಲ್ಲಿನ ಫ್ಯಾನ್, ಮೊಬೈಲ…, ಫ್ರಿಡ್ಜ್ ಮತ್ತು ಟಿವಿ ಹಾಳಾಗಿವೆ. ಎರಡೆರಡು ಬಾರಿ ರಿಪೇರಿ ಮಾಡಿಸಿದ್ದೇವೆ. ಹೆಸ್ಕಾಂನವರನ್ನು ಕೇಳಿದರೆ ವೋಲ್ಟೇಜ್ ಸಮಸ್ಯೆ ಎಂದು ಹೇಳುತ್ತಾರೆ. ಬೇಸಿಗೆ ಸಂದರ್ಭದಲ್ಲಿ ಕರೆಂಟ್ ಸಮಸ್ಯೆಯಿಂದ ಬಹಳಷ್ಟುತೊಂದರೆಯಾಗುತ್ತಿದೆ.
- ಶಿಲ್ಪಾ ಕಕಮರಿ, ಸಂಗಮೇಶ ನಗರದ ಗೃಹಿಣಿ