
ಕನಕಗಿರಿ(ಫೆ.14): ಬಿಜೆಪಿ ವಾಟ್ಸಾಪ್ ಗ್ರುಪ್‌ನಲ್ಲಿ ಅಶ್ಲೀಲ ವಿಡಿಯೋವೊಂದು ವೈರಲ್ ಆಗಿದ್ದು, ಪಕ್ಷದ ವೇದಿಕೆಯಲ್ಲಿ ಭಾರಿ ಮುಜುಗರ ಹಾಗೂ ಆಕ್ರೋಶ ವ್ಯಕ್ತವಾಗಿದೆ.
‘61-ಕನಕಗಿರಿ ಮಂಡಲ’ ಎಂಬ ಬಿಜೆಪಿ ಗ್ರುಪ್‌ಗೆ ಫೆ. 12ರಂದು ಕಾರ್ಯಕರ್ತರೊಬ್ಬರಿಂದ ಅಶ್ಲೀಲ ವಿಡಿಯೋ ರವಾನೆಯಾಗಿದೆ. ಈ ಗ್ರುಪ್‌ನಲ್ಲಿ ಶಾಸಕರು, ಮಹಿಳಾ ಘಟಕದ ಪದಾಧಿಕಾರಿಗಳು, ಅಭಿಮಾನಿಗಳು ಸೇರಿದಂತೆ ಬಿಜೆಪಿಯ ಚುನಾಯಿತ ಪ್ರತಿನಿಧಿಗಳಿದ್ದು, ಅಶ್ಲೀಲ ವಿಡಿಯೋನಿಂದಾಗಿ ಮುಜುಗುರ ಉಂಟಾಗಿದೆ. 225 ಸದಸ್ಯರನ್ನು ಈ ಗ್ರುಪ್ ಹೊಂದಿದ್ದು, ಅಶ್ಲೀಲ ವಿಡಿಯೋ ಹರಿಬಿಟ್ಟ ಕಾರ್ಯಕರ್ತನ ಮೇಲೆ ಭಾರಿ ಆಕ್ರೋಶ ವ್ಯಕ್ತವಾಗಿದೆ.
ಮಕ್ಕಳ ಅಶ್ಲೀಲ ವಿಡಿಯೋ ಕಳಿಸುತ್ತಿದ್ದ ಖತರ್ನಾಕ್ : ಕೊನೆಗೆ ಸಿಕ್ಕಿಬಿದ್ದ
ಗ್ರುಪ್‌ಗೆ ವಿಡಿಯೋ ಹರಿಬಿಟ್ಟವರಾರು ಎಂಬ ಮಾಧ್ಯದವರ ಪ್ರಶ್ನೆಗೆ ಬಿಜೆಪಿಯವರಾರಯರು ಉತ್ತರಿಸಲಿಲ್ಲ. ಅಚಾತುರ್ಯವಾಗಿ ವಿಡಿಯೋ ಗ್ರುಪ್‌ಗೆ ಬಂದಿದೆ. ಅದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಕಾರ್ಯಕರ್ತರು ಪತ್ರಕರ್ತರ ಪ್ರಶ್ನೆಗೆ ಏರು ಧ್ವನಿಯಲ್ಲಿ ಪ್ರತಿಕ್ರಿಯಿಸಿದರು. ಇದು ಪಕ್ಕದಲ್ಲೇ ಇದ್ದ ಶಾಸಕ ಬಸವರಾಜ ದಡೇಸೂಗುರ ಕಿವಿಗೆ ತಾಕಿದ್ದರಿಂದ ಅಶ್ಲೀಲ ವಿಡಿಯೋ ವೈರಲ್ ಆಗಿರುವ ಸುದ್ದಿ ಕೇಳಿ ದಂಗಾದರು. ಅಶ್ಲೀಲ ವಿಡಿಯೋವನ್ನು ತಕ್ಷಣವೇ ಡಿಲೀಟ್ ಮಾಡಿಸಿ, ಆತನನ್ನು ಗ್ರುಪ್‌ನಿಂದ ತೆಗೆದು ಹಾಕುವಂತೆ ಶಾಸಕರು ಆಪ್ತ ಸಹಾಯಕರಿಗೆ ಸೂಚಿಸಿದ್ದಾರೆ.