
ದಾವಣಗೆರೆ: ದಾವಣಗೆರೆಯ ಕಾಂಗ್ರೆಸ್ ನಾಯಕ ಸೈಯದ್ ಕೆರೆಕಟ್ಟೆ ಸೈಫುಲ್ಲ ಸಾಬ್ ನಿಧನರಾಗಿದ್ದಾರೆ. 79 ವರ್ಷದ ಸೈಯದ್ ಸೈಫುಲ್ಲ ಸಾಬ್ ಈ ಬಾರಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಅಬ್ದುಲ್ ಜಬ್ಬಾರ್ ಜೊತೆಗೆ ಸೈಯದ್ ಸೈಫುಲ್ಲಾ ಅವರ ಹೆಸರು ಸಹ ಬಲವಾಗಿ ಕೇಳಿ ಬಂದಿತ್ತು. ಹಿಂದೆ ತಮ್ಮ ಹೆಸರಿಗೆ ಕಾಂಗ್ರೆಸ್ ಬಿ ಫಾರಂ ಬಂದಿದ್ದರೂ ಅದನ್ನು ತಿದ್ದಿದ ಕಾರಣಕ್ಕೆ ಸ್ಪರ್ಧೆಯಿಂದ ಸೈಯದ್ ಸೈಫುಲ್ಲಾ ವಂಚಿತರಾಗಿದ್ರು ಎಂಬ ಮಾತುಗಳು ಕೇಳಿಬಂದಿತ್ತು.
79 ವರ್ಷದ ಸೈಯದ್ ಸೈಫುಲ್ಲ ಅವರು ಕಳೆದ ಕೆಲವು ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಇಂದು ಚಿಕಿತ್ಸೆ ಫಲಿಕಾರಿಯಾಗದೇ ಸೈಯದ್ ಸೈಫುಲ್ಲಾ ನಿಧನರಾಗಿದ್ದಾರೆ. ಅಲ್ಪ ಸಂಖ್ಯಾತರ ಆಯೋಗದ ಅಧ್ಯಕ್ಷರಾಗಿಯೂ ಸೈಫುಲ್ಲಾ ಸೇವೆ ಸಲ್ಲಿಸಿದ್ದರು.
ಸೈಯದ್ ಸೈಫುಲ್ಲ ಅವರು ಮಿಲ್ಲತ್ ವಿದ್ಯಾಸಂಸ್ಥೆಗಳ ಸ್ಥಾಪಕರಾಗಿದ್ದು, ಶಿಕ್ಷಣ ಸುಧಾಕರಾಗಿಯೂ ಗುರುತಿಸಿಕೊಂಡಿದ್ದರು. ಕಳೆದ 45 ವರ್ಷಗಳಿಂದ ಶಿಕ್ಷಣ, ರಾಜಕೀಯ, ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸೈಯದ್ ಸೈಫುಲ್ಲಾ ಸಕ್ರಿಯರಾಗಿದ್ದರು.
ಇದನ್ನೂ ಓದಿ: Davanagere By-Election 2026: ಕಾಂಗ್ರೆಸ್ ಪಕ್ಷ ನಮಗೆ ಅನಿವಾರ್ಯವಲ್ಲ, ಹೊಸ ಪಕ್ಷ ಕಟ್ಟುವ ಎಚ್ಚರಿಕೆ ನೀಡಿದ ಮುಸ್ಲಿಂ ಮುಖಂಡ!
ಸೈಯದ್ ಸೈಫುಲ್ಲಾ ಅವರ ಪತ್ನಿ, ಐವರು ಹೆಣ್ಣು ಮಕ್ಕಳು, ಪುತ್ರ ಸೈಯದ್ ಖಾಲಿದ್ ಅಹ್ಮದ್ ಮತ್ತು ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಆಗಲಿದ್ದಾರೆ. ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಸೈಯದ್ ಸೈಫುಲ್ಲಾ ನಿವಾಸದತ್ತ ಜನರು ಆಗಮಿಸುತ್ತಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ವಿರುದ್ಧ ಮುಸ್ಲಿಂ ಸಂಘಟನೆಗಳ ಆಕ್ರೋಶ, ಜಂಟಿ ಹೇಳಿಕೆಯಲ್ಲಿ 'ಕೈ'ಗೆ ಎಚ್ಚರಿಕೆ, ಮುಂದಿನ ನಡೆ ಏನು?