ಎರಡೂ ಕಿಡ್ನಿ ವೈಫಲ್ಯ; ಬೇಕಿದೆ ಸಹಾಯಹಸ್ತ, ಕಣ್ಣೀರಿನಲ್ಲಿ ಕೈ ತೊಳೆಯುತ್ತಿರುವ ಬಡ ಕುಟುಂಬ

Published : Sep 14, 2022, 08:43 AM ISTUpdated : Sep 14, 2022, 09:02 AM IST
ಎರಡೂ ಕಿಡ್ನಿ ವೈಫಲ್ಯ; ಬೇಕಿದೆ ಸಹಾಯಹಸ್ತ, ಕಣ್ಣೀರಿನಲ್ಲಿ ಕೈ ತೊಳೆಯುತ್ತಿರುವ ಬಡ ಕುಟುಂಬ

ಸಾರಾಂಶ

ಚಿಕಿತ್ಸೆಗೆ ಸುಮಾರು 18 ಲಕ್ಷಕ್ಕೂ ಹೆಚ್ಚು ಹಣ ಖರ್ಚು. ಚಿಕಿತ್ಸೆಗೆ ಹಣ ಹೊಂದಿಸುವುದು ಗೊತ್ತಾಗದೆ ಪರದಾಡುತ್ತಿರುವ ಕುಟುಂಬ  

ಕೊಪ್ಪಳ(ಸೆ.14):  ಕಾರಟಗಿ ತಾಲೂಕಿನ ಯರಡೋಣ ಗ್ರಾಮದ ನಿವಾಸಿ ಮಾಬುಸಾಬ್‌ ಅವರ ಹಿರಿಯ ಪುತ್ರ ಬಾಬುಸಾಬ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು, ಇಡೀ ಕುಟುಂಬ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದೆ.  ವೃತ್ತಿಯಲ್ಲಿ ಭತ್ತದ ಕಟಾವು ಮಷಿನ್‌ ಆಪರೇಟರ್‌ ಆಗಿರುವ ಬಾಬುಸಾಬ್‌ ಕಳೆದೊಂದು ತಿಂಗಳ ಹಿಂದೆ ಎಲ್ಲರಂತೆ ಚೆನ್ನಾಗಿಯೇ ಇದ್ದ. ತಿಂಗಳ ಹಿಂದೆ ಕಾಲುಗಳು ಊದಿಕೊಂಡಾಗ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ಹೋಗಿದ್ದಾಗ ಎರಡೂ ಕಿಡ್ನಿಗಳು ಫೇಲ್‌ ಆಗಿವೆ ಎಂದು ವೈದ್ಯರು ತಿಳಿಸಿದ್ದಾರೆ. ಬಾಬುಸಾಬ್‌(35)ನಿಗೆ ಪತ್ನಿ, ಇಬ್ಬರು ಮಕ್ಕಳು ಸಹ ಇದ್ದಾರೆ.

ಬಾಬುಸಾಬ್‌ಗೆ ಆದಷ್ಟು ಬೇಗನೇ ಕಿಡ್ನಿ ಕಸಿ ಮಾಡಿಸಬೇಕು ಎಂದು ವೈದ್ಯರು ಹೇಳಿದ್ದಾರೆ. ಚಿಕಿತ್ಸೆಗೆ ಸುಮಾರು .18 ಲಕ್ಷಕ್ಕೂ ಹೆಚ್ಚು ಹಣ ಖರ್ಚಾಗಲಿದೆಯಂತೆ. ಚಿಕಿತ್ಸೆಗೆ ಹಣ ಹೊಂದಿಸುವುದು ಗೊತ್ತಾಗದೆ ಕುಟುಂಬ ಪರದಾಡುತ್ತಿದೆ.

ಬಿಜೆಪಿ ಶಾಸಕ ಹಣ ಸಂಗ್ರಹ ಮಾಡಿದ ಸ್ಫೋಟಕ ವಿಡಿಯೋ ರಿಲೀಸ್ ಮಾಡಿದ ಕಾಂಗ್ರೆಸ್

ದಾನಿಗಳು ಬಾಬುಸಾಬ ಅವರ ಖಾತೆ ಸಂಖ್ಯೆ 10561101036242, IFSC Code: PKGB0010561, ಕರ್ನಾಟಕ ಗ್ರಾಮಿಣ ಬ್ಯಾಂಕ್‌, ಬೂದಗುಂಪಾ ಶಾಖೆ, ಕಾರಟಗಿ ತಾಲೂಕು, ಕೊಪ್ಪಳ ಜಿಲ್ಲೆ ಇಲ್ಲಿಗೆ ಹಣವನ್ನು ಜಮಾ ಮಾಡಬಹುದು.

ಈಗಾಗಲೇ ನಾವು ಮನೆ ಒತ್ತೆ ಇಟ್ಟು ಚಿಕಿತ್ಸೆ ಕೊಡಿಸಿದ್ದೇವೆ. ಅಲ್ಲದೆ ಕೆಲವು ಕಡೆ ಸಾಲ ಮಾಡಿದ್ದೇವೆ. ಆದರೆ ಕಿಡ್ನಿ ಕಸಿಗೆ 18 ಲಕ್ಷ ಬೇಕಿರುವುದರಿಂದ ದಾನಿಗಳನ್ನು ಈ ಮೂಲಕ ಸಹಾಯ ಮಾಡಲು ಕೇಳಿಕೊಳ್ಳುತ್ತಿದ್ದೇನೆ ಅಂತ ಬಾಬುಸಾಬ್‌ನ ತಂದೆ ಮಾಬುಸಾಬ್‌ ತಿಳಿಸಿದ್ದಾರೆ.  
 

PREV
Read more Articles on
click me!

Recommended Stories

ಬೆಂಗಳೂರು ಹೊಸೂರು ಫ್ಲೈಓವರ್ ಮೇಲೆ ಸ್ಲೀಪರ್ ಬಸ್ ಅಪಘಾತ, ನಾಲ್ವರಿಗೆ ಗಾಯ
ಬೆಂಗಳೂರಿನ ಎಂಜಿ ರಸ್ತೆಯಲ್ಲಿ ಹೊಸ ವರ್ಷ ಸೆಲೆಬ್ರೇಷನ್‌ಗೆ ಡೆಡ್ ಲೈನ್, ಸಮಯ ಮೀರಿದರೆ ಆಪತ್ತು