ದೀಪಾವಳಿ ಎಫೆಕ್ಟ್‌: ಬೆಂಗಳೂರಲ್ಲಿ ಮಾಲಿನ್ಯ ಏರಿಕೆ..!

By Kannadaprabha NewsFirst Published Oct 28, 2022, 7:00 AM IST
Highlights

ಪಟಾಕಿಯ ಅಬ್ಬರ ಈ ಬಾರಿ ಹೆಚ್ಚಿತ್ತು. ಪರಿಣಾಮ ಬೆಂಗಳೂರಿನ ವಾಯುಮಾಲಿನ್ಯ ಹಾಗೂ ಶಬ್ದ ಮಾಲಿನ್ಯ ಏರಿಕೆ

ಬೆಂಗಳೂರು(ಅ.28):  ಉದ್ಯಾನ ನಗರದಲ್ಲಿ ಪಟಾಕಿಯ ಅಬ್ಬರ ಈ ಬಾರಿ ಹೆಚ್ಚಿತ್ತು. ಪರಿಣಾಮ ಬೆಂಗಳೂರಿನ ವಾಯುಮಾಲಿನ್ಯ ಹಾಗೂ ಶಬ್ದ ಮಾಲಿನ್ಯ ಏರಿಕೆಯಾಗಿದೆ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ದೀಪಾವಳಿ ಸಂದರ್ಭದ ವಾಯು ಗುಣಮಟ್ಟದ ಅಂಕಿ ಅಂಶ ಪ್ರಕಟಿಸಿದ್ದು, ಗಾಳಿಯ ಗುಣಮಟ್ಟದಲ್ಲಿ ಕುಸಿತ ದಾಖಲಾಗಿರುವುದು ಖಚಿತವಾಗಿದೆ. ದೀಪಾವಳಿಯ ಪೂರ್ವ ದಿನಗಳಿಗೆ ಹೋಲಿಸಿದರೆ ಮಾಲಿನ್ಯ ಹೆಚ್ಚಾಗಿರುವುದು ಒಂದೆಡೆಯಾದರೆ ಕಳೆದ ವರ್ಷದ ದೀಪಾವಳಿಗೆ ಹೋಲಿಸಿದರೂ ಮಾಲಿನ್ಯದಲ್ಲಿ ಹೆಚ್ಚಳ ಕಂಡು ಬಂದಿದೆ.

ನಗರದ ಸಿಲ್ಕ್‌ ಬೋರ್ಡ್‌ನಲ್ಲಿ ಅತಿ ಹೆಚ್ಚು ವಾಯುಮಾಲಿನ್ಯ ವರದಿಯಾಗಿದ್ದು, ಕಳೆದ ವರ್ಷದ ದೀಪಾವಳಿಗೆ ಹೋಲಿಸಿದರೆ ಶೇ.390.1ರಷ್ಟು ಹೆಚ್ಚಳ ಕಂಡು ಬಂದಿದೆ. ಗಾಳಿ ಗುಣಮಟ್ಟವನ್ನು ಒಟ್ಟು 6 ವಿಧಗಳಲ್ಲಿ ವಿಂಗಡಿಸಲಾಗುತ್ತದೆ. ಉತ್ತಮ (0-50), ಸಮಾಧಾನಕರ (51-100), ಮಧ್ಯಮ (101-200), ಕಳಪೆ (201-300), ಅತ್ಯಂತ ಕಳಪೆ (301-400), ಅಪಾಯಕಾರಿ (400 ಕ್ಕಿಂತ ಹೆಚ್ಚು) ಎಂದು ವರ್ಗೀಕರಿಸಲಾಗುತ್ತದೆ. ಈ ಪೈಕಿ ದೀಪಾವಳಿ ಮೂರು ದಿನಗಳು ಬೆಂಗಳೂರಿನ ಜಯನಗರ, ಕ.ವಿ.ಕಾ ಬಳಿ, ಹಾಗೂ ಸಿಲ್‌್ಕ ಬೋರ್ಡ್‌ ಬಳಿ ತೀವ್ರ ವಾಯುಮಾಲಿನ್ಯ ಆಗಿರುವುದು ಕಂಡುಬಂದಿದೆ. ಈ ಸ್ಥಳಗಳಲ್ಲಿ ಗಾಳಿಯ ಗುಣಮಟ್ಟಅತ್ಯಂತ ಕಳಪೆಯಾಗಿತ್ತು. ಗಾಳಿಯಲ್ಲಿ ಮಾಲಿನ್ಯಕಾರಕಗಳಾದ ಪಿಎಂ 2.5 ಹಾಗೂ ಪಿಎಂ 10 ಪ್ರಮಾಣ ಹೆಚ್ಚಳವಾಗಿದೆ. ಇದು ಆರೋಗ್ಯಕ್ಕೆ ತೀವ್ರ ಮಟ್ಟದಲ್ಲಿ ಅಡ್ಡ ಪರಿಣಾಮಗಳನ್ನು ಉಂಟುಮಾಡುತ್ತದೆ.

Green Crackers: ಎಚ್ಚರ, ಹಸಿರು ಪಟಾಕಿಗಳೂ ಸುರಕ್ಷಿತವಲ್ಲ!

ಇನ್ನು ಶಬ್ದ ಮಾಲಿನ್ಯ ಹೆಚ್ಚಿನ ಕೇಂದ್ರದಲ್ಲಿ ಏರಿಕೆ ದಾಖಲಾಗಿದ್ದರೂ ಕೆಲವೆಡೆ ಕಡಿಮೆ ಆಗಿದೆ. ನಗರದ ನಾಲ್ಕು ಕೇಂದ್ರದಲ್ಲಿ ಮಾಲಿನ್ಯದಲ್ಲಿ ಏರಿಕೆ ಆಗಿದ್ದರೆ, ಮೂರು ಕೇಂದ್ರದಲ್ಲಿ ಇಳಿಕೆ ದಾಖಲಾಗಿದೆ. ಒಂದು ಕೇಂದ್ರದಲ್ಲಿ ಯಥಾಸ್ಥಿತಿ ವರದಿಯಾಗಿದೆ. ಬಿಟಿಎಂ ಬಡಾವಣೆಯಲ್ಲಿ ಶಬ್ದ ಮಾಲಿನ್ಯ ಶೇ.11.7 ಏರಿಕೆ ಆಗಿದೆ. ಅದೇ ಬಸವೇಶ್ವರ ನಗರದಲ್ಲಿ ಶೇ.-45.5 ಇಳಿಕೆಯಾಗಿದೆ.

ಗಾಳಿಯ ಗುಣಮಟ್ಟದ ವಿವರ ಇಲ್ಲಿದೆ: ಸ್ಥಳ ದೀಪಾವಳಿ-2021 ದೀಪಾವಳಿ-2022 ವ್ಯತ್ಯಾಸ (ಶೇ.)

ಸಿಟಿ ರೈಲು ನಿಲ್ದಾಣ 112 105 -6.5
ಸಾನೆಗುರುವನಹಳ್ಳಿ 57 92 60.8
ಹೆಬ್ಬಾಳ 45 156 247.4
ಜಯನಗರ 74 257 245.3
ಕ.ವಿ.ಕ 87 313 261.5
ನಿಮ್ಹಾನ್ಸ್‌ 42 101 139.7
ಸಿಲ್ಕ್‌ ಬೋರ್ಡ್‌ 54 263 390.1

ಶಬ್ದ ಮಾಲಿನ್ಯ ದೀಪಾವಳಿ-2021 ದೀಪಾವಳಿ-2022 ವ್ಯತ್ಯಾಸ(ಶೇ)

ಬಿಟಿಎಂ ಬಡಾವಣೆ 56.3 62.9 11.7
ಬಸವೇಶ್ವರ ನಗರ 84.9 46.3 -45.5
ಚರ್ಚ್‌ ಸ್ಟ್ರೀಟ್‌ 61.6 63.8 3.6
ದೊಮ್ಮಲೂರು 51.6 54.8 6.2
ಪೀಣ್ಯ 64.3 49.4 -23.1
ಯಶವಂತಪುರ 62.1 65.7 5.8
ನಿಮ್ಹಾನ್ಸ್‌ 57 54.3 -4.8
ವೈಟ್‌ಫೀಲ್ಡ್‌ 60.9 60.9 00
 

click me!