Kodagu: ಲಾರಿ ಚಾಲಕನಿಂದ ಲಂಚ ಸ್ವೀಕಾರ ಲೋಕಾಯುಕ್ತ ಬಲೆಗೆ ಬಿದ್ದ ಪೊಲೀಸಪ್ಪ

By Suvarna NewsFirst Published Feb 2, 2023, 10:32 PM IST
Highlights

ಅಕ್ರಮವಾಗಿ ಮಣ್ಣು ಸಾಗಿಸುತ್ತಿದ್ದೀಯಾ ಎಂದು ಲಾರಿ ಚಾಲಕನ ಬಳಿ ಸಾವಿರಾರು ರೂಪಾಯಿ ಪೀಕಲು ಹೋಗಿ ಈ ಪೊಲೀಸ್ ಲೋಕಾಯುಕ್ತ ಪೊಲೀಸರಿಗೆ ತಗಲಾಕಿಕೊಂಡಿದ್ದಾರೆ.

ವರದಿ: ರವಿ ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಡಗು (ಫೆ.2): ಕಳ್ಳ ಪೊಲೀಸರ ಬಲೆಗೆ ಬೀಳುವುದು ಸಾಮಾನ್ಯ ಬಿಡಿ. ಆದರೆ ಇಲ್ಲಿ ಪೊಲೀಸಪ್ಪನೇ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಅಕ್ರಮವಾಗಿ ಮಣ್ಣು ಸಾಗಿಸುತ್ತಿದ್ದೀಯಾ ಎಂದು ಲಾರಿ ಚಾಲಕನ ಬಳಿ ಸಾವಿರಾರು ರೂಪಾಯಿ ಪೀಕಲು ಹೋಗಿ ಈ ಪೊಲೀಸ್ ಲೋಕಾಯುಕ್ತ ಪೊಲೀಸರಿಗೆ ತಗಲಾಕಿಕೊಂಡಿದ್ದಾರೆ. ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆ ಪೇದೆ ಸಜನ್ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಭೂಪ. ಮಡಿಕೇರಿ ತಾಲ್ಲೂಕಿನ ಬಿಳಿಗೇರಿಯ ಕಿರಣ್ ಎಂಬುವರಿಂದ ಪೊಲೀಸ್ ಪೇದೆ ಸಜನ್ 30 ಸಾವಿರಕ್ಕೆ ಲಂಚದ ಬೇಡಿಕೆ ಇರಿಸಿದ್ದ ಎನ್ನಲಾಗಿದೆ. ಮೊನ್ನೆಯೇ ಲಾರಿ ಚಾಲಕನಿಂದ ಏಳುವರೆ ಸಾವಿರ ರೂಪಾಯಿಯನ್ನು ಲಂಚವಾಗಿ ಪಡೆದಿದ್ದ ಪೇದೆ, ಉಳಿದ ಹಣವನ್ನು ಕೊಡುವಂತೆ ಸೂಚಿಸಿದ್ದ ಎನ್ನಲಾಗಿದೆ.

ಹೀಗಾಗಿ ಚಾಲಕ ಮಡಿಕೇರಿ ನಗರದ ಖಾಸಗಿ ಹಳೇ ಬಸ್ ನಿಲ್ದಾಣದ ಬಳಿ ಇರುವ ಬೀಡ ಅಂಗಡಿಯಲ್ಲಿ ಹಣ ನೀಡಲು ಕಾನ್ ಸ್ಟೆಬಲ್  ಹೇಳಿದ್ದರಂತೆ. ಹೀಗಾಗಿ ಚಾಲಕ ಕಿರಣ್ ಹತ್ತು ಸಾವಿರ ರೂಪಾಯಿ ಹಣವನ್ನು ನೀಡಿದ್ದರು. ಲಂಚದ ಹಣವನ್ನು ಸಜನ್ ಅವರು ಬೀಡ ಅಂಗಡಿಯಿಂದ ಪಡೆದುಕೊಳ್ಳುವ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ ಅರೆಸ್ಟ್ ಮಾಡಿದ್ದಾರೆ.

ವಿದೇಶಿಗರು 45 ಸಾವಿರ ಕೊಟ್ರೆ ಭಾರತೀಯ ನಕಲಿ ದಾಖಲೆ ಸೃಷ್ಟಿ: ಅಕ್ರಮ ನುಸುಳುಕೋರರಿಗೆ

ಸಜನ್ ಮುವತ್ತು ಸಾವಿರಕ್ಕೆ ಬೇಡಿಕೆ ಇಟ್ಟಿದ್ದರಿಂದ ಅಷ್ಟೊಂದು ಹಣ ಹೊಂದಿಸಲಾಗದೆ ವ್ಯಕ್ತಿ ತನ್ನ ಬಳಿಯಿದ್ದ 4 ಸಾವಿರ ಮತ್ತು ಸಾಲ ಮಾಡಿ ಇನ್ನೂ 3,500ನ್ನು ಹೊಂದಿಸಿ ಕೊಟ್ಟಿದ್ದ. ಉಳಿದ ಹಣವನ್ನು ಗುರುವಾರವೇ ನೀಡಬೇಕೆಂದು ತಾಕೀತು ಮಾಡಿದ್ದ ಪೊಲೀಸು, ತಪ್ಪಿದರೆ ವಾಹನ ಸೀಸ್ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಆದರೆ, ತನ್ನಲ್ಲಿ ಅಷ್ಟೊಂದು ಹಣವಿಲ್ಲ ಎಂದು ಗೋಗರೆದ ವ್ಯಕ್ತಿ 10 ಸಾವಿರ ನೀಡುವುದಾಗಿ ಒಪ್ಪಿದ್ದರು. ಗುಟ್ಟು ಬಯಲಾಗದಂತೆ ಎಚ್ಚರ ವಹಿಸಿದ್ದ ಪೊಲೀಸರು, ಮಡಿಕೇರಿಯ ಹಳೆ ಬಸ್ ನಿಲ್ದಾಣ ಸಮೀಪದ ಹಮೀದ್ ಎಂಬವರ ಬೀಡಾ ಸ್ಟಾಲ್‌ನಲ್ಲಿ ಹಣವನ್ನು ನೀಡುವಂತೆ ತಿಳಿಸಿದ್ದರು. ಪೊಲಿಸರ ಈ ವರ್ತನೆಯಿಂದ ನೊಂದ ಆ ವ್ಯಕ್ತಿ, ಈ ಬಗ್ಗೆ ಲೋಕಾಯುಕ್ತರಿಗೆ ದೂರು ನೀಡಿದ್ದರು.

Chikkamagaluru: ಬಿಜೆಪಿಗೆ ಸೇರ್ಪಡೆಯಾಗಿದ್ದಕ್ಕೆ ಯುವಕನ ಕೈ ಮುರಿದ ಕಾಂಗ್ರೆಸ್

10 ಸಾವಿರ ರೂಪಾಯಿ ಹೊಂದಿಸಿದ ವ್ಯಕ್ತಿ, ಗುರುವಾರ ಹಮೀದ್ ಎಂಬವರ ಬೀಡಾ ಸ್ಟಾಲ್‌ನಲ್ಲಿ ಹಣ ನೀಡಿದ್ದರು. ಈವೇಳೆ ಹೊಂಚು ಹಾಕಿದ್ದ ಲೋಕಾಯುಕ್ತ ಪೊಲೀಸರು, ಸಜನ್ ಎಂಬ ಪೊಲೀಸ್ ಪೇದೆ ಬೀಡಾ ಸ್ಟಾಲ್‌ನಿಂದ ಹಣ ಪಡೆಯುವ ವೇಳೆ ಬಂಧಿಸಿದ್ದಾರೆ. ಬೀಡಾ ಸ್ಟಾಲ್ ಮಾಲೀಕ ಹಮೀದ್ ನ ವಿಚಾರಣೆ ನಡೆಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಮಡಿಕೇರಿ ಇನ್ಸ್‌ಪೆಕ್ಟರ್ ಲೋಕೇಶ್, ಮೈಸೂರು ಇನ್ಸ್ಪೆಕ್ಟರ್ ಜಯರತ್ನ, ಹೆಡ್ ಕಾನ್ಸೆಟಬಲ್ ಮಂಜುನಾಥ್, ಸಿಬ್ಬಂದಿ ಪ್ರಥ್ವೀಶ್, ಸಲಾವುದ್ದೀನ್, ಮಹಿಳಾ ಸಿಬ್ಬಂದಿ ದೀಪಿಕಾ, ಚಾಲಕ ಶಶಿಕುಮಾರ್, ಮೈಸೂರಿನ ಹೆಡ್ ಕಾನ್ಸ್ಟೆಬಲ್ ಗೋಪಿ, ಪ್ರಕಾಶ್, ಪ್ರತೀಪ್ ಹಾಗೂ ಚಾಲಕ ಪ್ರದೀಪ್ ಪಾಲ್ಗೊಂಡಿದ್ದರು.

click me!