
ಮಂಗಳೂರು(ಫೆ.09): ಉಪ್ಪಿನಂಗಡಿಯ ಕಡಬ ಠಾಣಾ ವ್ಯಾಪ್ತಿಯ ಕೋಡಿಂಬಾಳದಲ್ಲಿ ಮಹಿಳೆ ಮತ್ತು ಮಗುವಿನ ಮೇಲೆ ಆ್ಯಸಿಡ್ ಎರಚಿದ ಪ್ರಕರಣದಲ್ಲಿ ಕರ್ತವ್ಯ ಲೋಪವೆಸಗಿದ ಕಡಬ ಪೊಲೀಸ್ ಠಾಣೆಯ ಎಎಸೈ ಚಂದ್ರಶೇಖರ್ ಅವರನ್ನು ಅಮಾನಸುಗೊಳಿಸಿ ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ. ಲಕ್ಷ್ಮೀಪ್ರಸಾದ್ ಆದೇಶಿಸಿದ್ದಾರೆ.
ಕೋಡಿಂಬಾಳ ಗ್ರಾಮದ ಕೊಠಾರಿ ಮನೆ ನಿವಾಸಿ, ಎಲ್‌ಐಸಿ ಏಜೆಂಟ್ ಆಗಿರುವ ಜಯಾನಂದ ಕೊಠಾರಿ (55) ಎಂಬಾತ ತನ್ನ ತಮ್ಮನ ಪತ್ನಿ ವಿಧವೆ ಮತ್ತಾಕೆಯ ಕೈಯಲ್ಲಿದ್ದ ಹೆಣ್ಣು ಮಗುವಿನ ಮೇಲೆ ರಬ್ಬರ್ ಶೀಟ್ ತಯಾರಿಕೆಗೆ ಬಳಸಲಾಗುವ ಆ್ಯಸಿಡ್ ಎರಚಿ ಗಾಯಗೊಳಿಸಿರುವುದಾಗಿ ಪೊಲೀಸರಿಗೆ ದೂರು ಸಲ್ಲಿಸಲಾಗಿತ್ತು.
ತಾಯಿ, 3 ವರ್ಷದ ಮಗುವಿನ ಮೇಲೆ ಆ್ಯಸಿಡ್ ದಾಳಿ
ಈ ಬಗ್ಗೆ ಪೊಲೀಸರಿಗೆ ದೂರು ನೀಡಲು ಮುಂದಾದಾಗ ಪೊಲೀಸರು ಆರೋಪಿಯನ್ನು ರಕ್ಷಿಸಲು ಪ್ರಯತ್ನಿಸಿದರೆಂದು ಆಪಾದನೆ ಕೇಳಿ ಬಂದಿತ್ತು. ಈ ಸಂಬಂಧ ಡಿವೈಎಸ್ಪಿ ದಿನಕರ ಶೆಟ್ಟಿಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸಿದ್ದು, ವರದಿಯ ಆಧಾರದಲ್ಲಿ ಎಎಸ್‌ಐ ಚಂದ್ರಶೇಖರ್ ಅಮಾನತುಗೊಳಿಸಲಾಗಿದೆ.