ಹಾಸನ (ಸೆ.29): ವೇಶ್ಯಾವಾಟಿಕೆ (Prostitution) ಆರೋಪದಡಿಯಲ್ಲಿ ಮನೆಯೊಂದರ ಮೇಲೆ ಪೊಲೀಸರು ದಾಳಿ (Police Raid) ಮಾಡಿರುವ ಘಟನೆ ಹಾಸನದಲ್ಲಿ (Hassan) ನಡೆದಿದೆ.
ಖಚಿತ ಮಾಹಿತಿ ಮೇರೆಗೆ ಇಂದು ದಾಳಿ ನಡೆಸಿದ ಹಾಸನ ನಗರ ಹಾಗೂ ಮಹಿಳಾ ಠಾಣೆ ಪೊಲೀಸರು ಇಬ್ಬರು ಮಹಿಳೆಯರು ಸೇರಿ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ದಾಳಿ ವೇಳೆ ಇಬ್ಬರು ಮಹಿಳೆಯರ ರಕ್ಷಣೆ ಮಾಡಲಾಗಿದೆ.
undefined
ನಗರದ ಎರಡು ಕಡೆ ಏಕ ಕಾಲದಲ್ಲಿ ದಾಳಿ ನಡೆದಿದ್ದು, ಚೇತನ್,ಅಕ್ಬರ್ ಸತೀಶ್ ಎಂಬ ಮೂವರು ಪುರುಷರು ಹಾಗೂ ಇಬ್ಬರು ಮಹಿಳೆಯರ ಬಂಧನವಾಗಿದೆ.
ರಾಣಿಬೆನ್ನೂರಲ್ಲಿ ವೇಶ್ಯಾವಾಟಿಕೆ ದಂಧೆ: ಮಹಿಳೆ ಬಂಧನ
ವೇಶ್ಯಾವಾಟಿಕೆ ಆರೋಪದ ಮೇಲೆ ದಾಳಿ ನಡೆಸಿದಾಗ ಆರೋಪಿಗಳು ಬಲೆಗೆ ಬಿದ್ದಿದ್ದು ಈ ಸಂಬಂಧ ಹಾಸನ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಅಲ್ಲದೇ ವೇಶ್ಯಾವಾಟಿಕೆ ನಡೆಸುತ್ತಿರುವ ಸಂಬಂಧ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ.
ತುಮಕೂರಲ್ಲಿ ಬಯಲಾಗಿತ್ತು ಭಾರೀ ದಂಧೆ
ಭಾರೀ ಚರ್ಚೆಗೆ ಕಾರಣವಾಗಿದ್ದ ತುಮಕೂರಿನ(Tumakuru) ಹೆದ್ದಾರಿ ರಸ್ತೆಯಲ್ಲಿ ಕಿಲೋಮೀಟರ್ ಗಟ್ಟಲೆ ರಾಶಿ ರಾಶಿ ಕಾಂಡೋಮ್‌ಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಘಟನೆಗೆ ಹೊಸ ತಿರುವು ಸಿಕ್ಕಿತ್ತು.
ಕಾಂಡೋಮ್‌ಗಳು ಪತ್ತೆಯಾದ ಸ್ಥಳದ ಸಮೀಪದ ಲಾಡ್ಜ್‌ವೊಂದರಲ್ಲಿ ವೇಶ್ಯಾವಾಟಿಕೆ(Prostitute) ನಡೆಯುತ್ತಿದ್ದ ವಿಚಾರ ಬಯಲಾಗಿತ್ತು. ಜತೆಗೆ, ಪೊಲೀಸರ ದಾಳಿ ವೇಳೆ ಆರೋಪಿಗಳು ಬಚ್ಚಿಟ್ಟುಕೊಳ್ಳಲು ಹೋಟೆಲ್ ರೂಂನಲ್ಲೇ ಗುಪ್ತ ಸುರಂಗ ಕೋಣೆಯನ್ನೂ ನಿರ್ಮಿಸಿರುವುದು ಬೆಳಕಿಗೆ ಬಂದಿತ್ತು.
ಫುಲ್ ನೈಟ್ 5 ಸಾವಿರ... ತಾಸಿಗೆ ಎರಡು ಸಾವಿರ! ಬೆಂಗಳೂರಿನ ನಶೆ ರಾಣಿಯರು
ಮೈಸೂರಿನ ಒಡನಾಡಿ ಸಂಸ್ಥೆ, ಪೊಲೀಸರ(Police) ನೇತೃತ್ವದಲ್ಲಿ ತುಮಕೂರಿನ ರಿಂಗ್ ರಸ್ತೆಯ ಲಾಡ್ಜ್‌ವೊಂದರ ಮೇಲೆ ಸೋಮವಾರ ರಾತ್ರಿ ಪೊಲೀಸರು ದಾಳಿ ನಡೆಸಿದ್ದು, ಈ ವೇಳೆ ಇಬ್ಬರು ಪಿಂಪ್‌ಗಳನ್ನು ಬಂಧಿಸಿ, ಐದು ಮಂದಿ ಕೋಲ್ಕತಾ ಮೂಲದ ಯುವತಿಯರನ್ನು ರಕ್ಷಿಸಿದ್ದು, ಮೂರು ವಾರಗಳ ಹಿಂದೆ ಲಾಡ್ಜ್ ಸನಿಹದಲ್ಲೇ ಇದ್ದ ಹೆದ್ದಾರಿಯಲ್ಲಿ ಕಿ.ಮೀ. ಗಟ್ಟಲೆ ಕಾಂಡೋಮ್‌ಗಳು ಪತ್ತೆಯಾಗಿತ್ತು. ಈ ಸಂಬಂಧ ಆರೋಗ್ಯ ಇಲಾಖೆ ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಕಾಂಡೋಮ್‌ಗಳು ಪತ್ತೆಯಾದ ಜಾಗದಲ್ಲೇ ಇದ್ದ ಲಾಡ್ಜ್ ಬಳಿ ಹಲವು ವಾಹನಗಳನ್ನು ಪಾರ್ಕ್ ಮಾಡುತ್ತಿದ್ದ ವಿಷಯ ಪೊಲೀಸರ ಗಮನಕ್ಕೂ ಬಂದಿತ್ತು. ಹೀಗಾಗಿ ಕೆಲ ದಿನಗಳಿಂದ ಲಾಡ್ಜ್ ಮೇಲೆ ಕಣ್ಣಿಡಲಾಗಿತ್ತು. ಈ ಮಧ್ಯೆ, ಮೈಸೂರಿನ ಒಡನಾಡಿ ಸಂಸ್ಥೆ ಸ್ಟ್ಯಾನಿ ಪರಶುರಾಮ್ ಅವರನ್ನೊಳಗೊಂಡ ತಂಡ ತುಮಕೂರಿಗೆ ಆಗಮಿಸಿ ಮಾಹಿತಿ ಕಲೆ ಹಾಕುತ್ತಿತ್ತು.