Mic Controversy: ಬೆಂಗ್ಳೂರಿನ ಮಸೀದಿಗಳಿಗೆ ನೋಟಿಸ್..!

Published : Apr 05, 2022, 10:12 AM ISTUpdated : Apr 05, 2022, 10:21 AM IST
Mic Controversy: ಬೆಂಗ್ಳೂರಿನ ಮಸೀದಿಗಳಿಗೆ ನೋಟಿಸ್..!

ಸಾರಾಂಶ

*  ಧಾರ್ಮಿಕ ಕೇಂದ್ರಗಳಲ್ಲಿ ಧ್ವನಿವರ್ಧಕಗಳ ಬಳಕೆ‌ಯ ನಿಯಮವನ್ನ ಮೀರಿರುವುದಕ್ಕೆ ನೋಟಿಸ್  *  ಮಸೀದಿಗಳಲ್ಲೇ ಹೆಚ್ಚು ರೂಲ್ಸ್ ಬ್ರೇಕ್ *  2021 ರಿಂದ ಫೆ. 2022 ತನಕ ಒಟ್ಟು 301, ಇದರಲ್ಲಿ 125 ಮಸೀದಿಗಳಿಗೆ ನೋಟಿಸ್   

ವರದಿ: ಮಾರುತೇಶ್ ಹುಣಸನಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್

ಬೆಂಗಳೂರು(ಏ.05): ರಾಜ್ಯದಲ್ಲಿ(Kanataka) ಸದ್ಯ ಮಸೀದಿಗಳ(Masjid) ಮೇಲೆ ಅಳವಡಿಸಿರುವ ಲೌಡ್ ಸ್ಪೀಕರ್ ತೆರವಿಗೆ ಆಗ್ರಹ ಜೋರಾಗಿದೆ. ಇದರ ನಡುವೆ ಮಸೀದಿಗಳೇ ಹೆಚ್ಚು ರೂಲ್ಸ್ ಬ್ರೇಕ್ ಮಾಡಿರೋದು ಕಂಡುಬಂದಿದೆ. ಇದನ್ನ ನಾವು ಹೇಳ್ತಿಲ್ಲ. ಪೊಲೀಸ್‌(Police) ಇಲಾಖೆ ಹೈಕೋರ್ಟ್‌ಗೆ(High Court) ಸಲ್ಲಿಸಿರುವ ದಾಖಲೆಗಳೇ ಇದನ್ನ ಖಚಿತಪಡಿಸಿದೆ. 

"

ಧಾರ್ಮಿಕ ಕೇಂದ್ರಗಳಲ್ಲಿ ಧ್ವನಿವರ್ಧಕಗಳ ಬಳಕೆ‌ಯ ನಿಯಮವನ್ನ ಮೀರಿರುವುದಕ್ಕೆ ಪೊಲೀಸರು ನೋಟಿಸ್ ನೀಡಿದ್ದಾರೆ. 2021 ರಿಂದ ಫೆಬ್ರವರಿ 2022 ತನಕ ಒಟ್ಟು 301 ನೋಟಿಸ್ ಪೊಲೀಸರು ನೀಡಿದ್ದಾರೆ. ಇದರಲ್ಲಿ 125 ನೋಟಿಸ್ ಮಸೀದಿಗಳಿಗೆ ನೀಡಲಾಗಿದೆ. 

Azaan Row: 'ಪೈಗಂಬರ್‌ ಕಾಲದಲ್ಲಿ ಮೈಕ್‌ ಇರಲಿಲ್ಲ'  ಮೈಕ್‌ ಬ್ಯಾನ್‌ ಪರ ಸಿ.ಟಿ. ರವಿ ಬ್ಯಾಟಿಂಗ್

ವಿಶ್ವ ಹಿಂದೂ ಪರಿಷತ್‌ನ(Vishwa Hindu Parishad) ಗಿರೀಶ್ ಭಾರದ್ವಾಜ್ ಎಲ್ಲಾ ಧಾರ್ಮಿಕ ಕೇಂದ್ರಗಳ ಧ್ವನಿವರ್ಧಕಗಳನ್ನ ನಿಷೇಧಿಸುವಂತೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ವಿಚಾರಣೆ ವೇಳೆ ಹೈಕೋರ್ಟ್ ಕೇಳಿದ ಮಾಹಿತಿಯನ್ನ ಪೊಲೀಸ್ ಇಲಾಖೆ ಒದಗಿಸಿದೆ. ಈ ದಾಖಲೆಗಳಲ್ಲಿ ಬೆಂಗಳೂರಿನ(Bengaluru) ಏಳು ವಲಯಗಳಲ್ಲಿ ಪೊಲೀಸರು ಬಾರ್ ಅಂಡ್ ರೆಸ್ಟೊರೆಂಟ್, ಪಬ್, ಕ್ಲಬ್, ಕೈಗಾರಿಕೆಗಳು, ಮಸೀದಿ, ದೇವಾಲಯ, ಚರ್ಚ್‌ಗಳಿಗೆ ಎಷ್ಟು ನೋಟಿಸ್ ನೀಡಿದ್ದಾರೆ ಎಂಬುದನ್ನ ಕೋರ್ಟ್‌ಗೆ ತಿಳಿಸಲಾಗಿದೆ. 

ಪೊಲೀಸ್ ದಾಖಲೆಗಳಲ್ಲಿ ಮಸೀದಿಗಳಲ್ಲಿ ಬಳಸುವ ಧ್ವನಿವರ್ಧಕಗಳಿಂದ(Mic) ಹೆಚ್ಚು ದೂರುಗಳು ಬಂದಿದ್ದು ಹಚ್ಚು ನೋಟಿಸ್ ಕೂಡ ಮಸೀದಿಗಳಿಗೆ ನೀಡಲಾಗಿದೆ. ದೇವಸ್ಥಾನ(Temple) ಹಾಗೂ ಚರ್ಚ್(Church) ಗಳಿಗೆ ಹೋಲಿಸಿದ್ರೆ ಮಸೀದಿಗಳಲ್ಲೆ ಹೆಚ್ಚು ಶಬ್ದ ಮಾಲಿನ್ಯದ ನಿಯಮ ಮೀರಿರುವುದು ಕಂಡುಬಂದಿದೆ. ಒಟ್ಟಾರೆ 7 ವಲಯದಲ್ಲಿ ದೇವಸ್ಥಾನಗಳಿಗೆ 83 ನೋಟಿಸ್, ಚರ್ಚ್ ಗಳಿಗೆ 22 ನೋಟಿಸ್‌ ಪೊಲೀಸರು ನೀಡಿದ್ದಾರೆ. ಪಬ್, ಬಾರ್ ಅಂಡ್ ರೆಸ್ಟೋರೆಂಟ್ ಗಳು ಕೂಡ ಶಬ್ದ ಮಾಲಿನ್ಯದ(Noise Pollution) ನಿಯಮ ಮೀರಿದ್ದು ಒಟ್ಟು 59 ನೋಟಿಸ್ ನೀಡಲಾಗಿದೆ. ಅಲ್ಲದೇ 12 ನೋಟಿಸ್‌ಗಳನ್ನ ಕೈಗಾರಿಕೆಗಳಿಗೂ ನೀಡಲಾಗಿದೆ. 

ಹಿಜಾಬ್‌, ಹಲಾಲ್ ಆಯ್ತು, ಈಗ ಹೊಸ ಅಸ್ತ್ರ; ಮಸೀದಿ ಮೈಕ್‌ಗಳ ನಿಷೇಧಕ್ಕೆ ಒತ್ತಾಯ

ವಲಯವಾರು ನೀಡಿರುವ ನೋಟಿಸ್ ವಿವರ ಹೀಗಿದೆ

ಸೌಂಡ್ ಕಿರಿಕ್..!   

ವಲಯ          ನೋಟಿಸ್ 
                      ಮಸೀದಿ  ದೇಗುಲ  ಚರ್ಚ್ 
   ಪೂರ್ವ             14        8           3
   ಪಶ್ಚಿಮ             24        2           1
   ಉತ್ತರ              32        7           5
   ದಕ್ಷಿಣ                17       34          4
   ಈಶಾನ್ಯ             21       12          4
   ಆಗ್ನೇಯ             17      20         5
   ಒಟ್ಟು              125      83        22
 

PREV
Read more Articles on
click me!

Recommended Stories

ಪಬ್ಬಲ್ಲಿ ಮೊಬೈಲ್‌ ತರಲುಹೋದ ಕನ್ನಡಿಗ ಬಲಿ, ಗೋವಾ ಪಬ್ ದುರಂತಕ್ಕೆ ಕಾರಣವೇನು?
ಬೆಂಗಳೂರಿನ ಗುಲಾಬಿ ಮೆಟ್ರೋ ಮಾರ್ಗಕ್ಕೆ ಶೀಘ್ರ ಪ್ರೊಟೊಟೈಪ್‌ ರೈಲು