ಮದ್ಯಪ್ರಿಯರಿಗೆ ಸಿಗುತ್ತಾ ಸಿಹಿಸುದ್ದಿ: ಮಾರಾಟಕ್ಕೆ ತಯಾರಿ...?

By Suvarna News  |  First Published Apr 14, 2020, 11:57 AM IST
ಕೊರೋನಾ ವೈರಸ್ ತಡೆಗಟ್ಟುನ ನಿಟ್ಟಿನಲ್ಲಿ ಲಾಕ್‌ಡೌನ್ ಮಾಡಲಾಗಿದ್ದು, ಈ ನಡುವೆ ಮದ್ಯ ಪ್ರಿಯರಿಗೆ ಸಿಹಿ ಸುದ್ದಿ ಸಿಗುವ ಲಕ್ಷಣಗಲೂ ಕಂಡು ಬರುತ್ತಿವೆ. ಹಾಸನದ ಬಳಿ ಪೊಲೀಸರು ಮದ್ಯದಂಗಡಿ ಮುಂದೆ ಬ್ಯಾರಿಕೇಡ್ ಅಳವಡಿಸುತ್ತಿದ್ದಾರೆ.

 

ಹಾಸನ(ಏ.14): ಕೊರೋನಾ ವೈರಸ್ ತಡೆಗಟ್ಟುನ ನಿಟ್ಟಿನಲ್ಲಿ ಲಾಕ್‌ಡೌನ್ ಮಾಡಲಾಗಿದ್ದು, ಈ ನಡುವೆ ಮದ್ಯ ಪ್ರಿಯರಿಗೆ ಸಿಹಿ ಸುದ್ದಿ ಸಿಗುವ ಲಕ್ಷಣಗಲೂ ಕಂಡು ಬರುತ್ತಿವೆ. ಹಾಸನದ ಬಳಿ ಪೊಲೀಸರು ಮದ್ಯದಂಗಡಿ ಮುಂದೆ ಬ್ಯಾರಿಕೇಡ್ ಅಳವಡಿಸುತ್ತಿದ್ದಾರೆ.

ಈಗಾಗಲೇ ರಾಜ್ಯದಲ್ಲಿ ಮದ್ಯದಂಗಡಿಗಳು ಬಂದ್ ಆಗಿ ಮದ್ಯ ಪ್ರಿಯರು ಕಷ್ಟ ಅನುಭವಿಸುತ್ತಿದ್ದಾರೆ. ಆತ್ಮಹತ್ಯೆಗಳೂ ನಡೆದಿವೆ. ಈ ಮಧ್ಯೆ ಎಂಎಸ್‌ಐಎಲ್ ಬಳಿ ಸದ್ದಿಲ್ಲದೇ ಮದ್ಯ ಮಾರಾಟಕ್ಕೆ ನಡೆದಿದೆ ತಯಾರಿ ನಡೆದಿದೆ.

ಸ್ವತಃ ಗರ್ಭಿಣಿಯಾಗಿ ನೂರಾರು ಹೆರಿಗೆ ಮಾಡಿಸಿದ ವೈದ್ಯೆ

ಮದ್ಯ ಮಾರಾಟ ಮಳಿಗೆ ಮುಂದೆ ಬ್ಯಾರಿಕೇಡ್ ಅಳವಡಿಸಲಾಗುತ್ತಿರುವುದು ಮದ್ಯ ಮಾರಾಟ ನಡೆಯಲಿದೆಯಾ ಎಂಬ ಸಂಶಯಕ್ಕೆ ಎಡೆ ಮಾಡಿದೆ. ಹಾಸನದ ಎಂಎಸ್ ಐಎಲ್ ಗಳ ಮುಂದೆ ಬ್ಯಾರಿಕೇಡ್ ನಿರ್ಮಾಣ ಮಾಡಲಾಗುತ್ತಿದೆ. ಮದ್ಯ ಖರೀದಿಗೆ ನೂಕು ನುಗ್ಗಲು ಆಗದಂತೆ ಕ್ರಮ ವಹಿಸಲಾಗುತ್ತಿದೆ.

ಸೀಲ್ ಆಗಿರೋ ಮದ್ಯದಂಗಡಿ ತೆರೆಯಲು ತಯಾರಿ ನಡೆದಿದ್ದು, ಮದ್ಯಪ್ರಿಯರ ಒತ್ತಡಕ್ಕೆ ಮಣಿದು ನಿಗದಿತ ಸಮಯದಲ್ಲಿ ಮದ್ಯ ಮಾರಾಟಕ್ಕೆ ಸರ್ಕಾರ ಚಿಂತನೆ ನಡೆಸಿದೆ. ಈ ಸಂಬಂಧ ಅಬಕಾರಿ ಇಲಾಖೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಅಂಗಡಿ ಮಾಲೀಕರು ಸರ್ಕಾರ ನಿರ್ಧಾರ ಪ್ರಕಟಿಸುವ ಮುನ್ನ ಮದ್ಯ ಮಾರಾಟಕ್ಕೆ ಸಿದ್ದತೆ ಮಾಡಿಕೊಂಡಿದ್ದಾರೆ. ಸಾಲಗಾಮೆ ರಸ್ತೆಯಲ್ಲಿರುವ ಎಂಎಸ್‌ಐಎಲ್ ಮದ್ಯ ಮಾರಾಟ ಮಳಿಗೆ ಬಳಿ ಸಿದ್ಧತೆ ನಡೆದಿದೆ.
click me!