ನಗರದಲ್ಲಿ ರಾತ್ರೋರಾತ್ರಿ ಖಾಕಿ ಹೈ ಅಲರ್ಟ್‌!

By Web DeskFirst Published Jul 28, 2019, 9:07 AM IST
Highlights

ಬೆಂಗಳೂರು ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ರಾತ್ರೋ ರಾತ್ರಿ ನಗರದಲ್ಲಿ ಕಾರ್ಯಾಚರಣೆ ನಡೆಸಿದರು. ಅಪರಾಧ ಪ್ರಕರಣಗಳು ಹೆಚ್ಚುತ್ತಿರುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ರೌಂಡ್ಸ್ ಹಾಕಿದೆ. 

ಬೆಂಗಳೂರು [ಜು.28]:  ನಗರದಲ್ಲಿ ಕಳ್ಳತನ, ಗೂಂಡಾ ವರ್ತನೆ, ಡಕಾಯಿತಿ ಸೇರಿದಂತೆ ಅಪರಾಧ ಪ್ರಕರಣಗಳನ್ನು ತಡೆಗಟ್ಟಲು ನಗರದ ಇತಿಹಾಸದಲ್ಲೇ ಪ್ರಥಮ ಬಾರಿಗೆ ಇಡೀ ನಗರ ಪೊಲೀಸರು ವಿಶೇಷ ಕಾರಾರ‍ಯಚರಣೆ ನಡೆಸಿದ್ದಾರೆ.

ನಗರದಲ್ಲಿ ಶನಿವಾರ ರಾತ್ರಿ ಹೈ ಅಲರ್ಟ್‌ನಲ್ಲಿದ್ದು, ವಿಶೇಷ ಕಾರಾರ‍ಯಚರಣೆ ನಡೆಸಿದ್ದಾರೆ. ಪೊಲೀಸ್‌ ಆಯುಕ್ತ ಅಲೋಕ್‌ ಕುಮಾರ್‌, 8 ವಲಯಗಳ ಡಿಸಿಪಿಗಳು, ಎಲ್ಲ ಠಾಣೆಗಳ ಇನ್‌ಸ್ಟೆಕ್ಟರ್‌ಗಳು ನಗರದಲ್ಲಿ ರೌಂಡ್ಸ್‌ ಮಾಡಿದ್ದಾರೆ. ಅಲ್ಲದೆ ನಗರದ ಹೆಚ್ಚು ಕಡಿಮೆ ಎಲ್ಲ ಪ್ರಮುಖ ರಸ್ತೆಗಳು, ಜಂಕ್ಷನ್‌ಗಳಲ್ಲಿಯೂ ಪೊಲೀಸರು ಬ್ಯಾರಿಕೇಡ್‌ ಹಾಕಿ ವಾಹನಗಳನ್ನು ತಪಾಸಣೆ ನಡೆಸಿದರು. ವಿಶೇಷವಾಗಿ ಆ್ಯಕ್ಟೀವಾ, ಪಲ್ಸರ್‌ ಬೈಕ್‌ಗಳನ್ನು ತಡೆದು ತಪಾಸಣೆ ನಡೆಸಿದರು. ದಾಖಲೆಗಳನ್ನು ಪರಿಶೀಲಿಸಿದರು. ಅಲ್ಲದೆ ಅವರು ಎಲ್ಲಿಗೆ ತೆರಳುತ್ತಿದ್ದಾರೆ, ಎಲ್ಲಿಂದ ಬಂದಿದ್ದಾರೆ ಎನ್ನುವ ಮಾಹಿತಿಗಳನ್ನು ಖಚಿತ ಪಡಿಸಿಕೊಳ್ಳುತ್ತಿದ್ದರು.

ಪ್ರತಿ 100ರಿಂದ 200 ಮೀಟರ್‌ ವ್ಯಾಪ್ತಿಯಲ್ಲಿ ಹೊಯ್ಸಳ, ಚೀತಾ, ಅಧಿಕಾರಿಗಳ ವಾಹನಗಳು ಸಂಚರಿಸುತ್ತಿದ್ದವು. ಕೆಲವರು ಹೆದರಿ ದಾರಿ ಬದಲಿಸಿ ಹೋಗುತ್ತಿದ್ದ ದೃಶ್ಯ ಕಂಡು ಬಂದಿತು. ಇನ್ನು ಅನುಮಾನಾಸ್ಪದವಾಗಿ ಓಡಾಡುತ್ತಿದ್ದ 300ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ನಡೆಸಿದ್ದಾರೆ.

ಇಡೀ ವ್ಯವಸ್ಥೆಯೇ ಭಾಗಿ:  ನಗರದಲ್ಲಿ ಸಾಧಾರಣವಾಗಿ ಕ್ರೈಂ ಪೊಲೀಸರು ರಾತ್ರಿ ವೇಳೆ ಗಸ್ತು ತಿರುಗುತ್ತಾರೆ. ಬ್ಯಾರಿಕೇಡ್‌ ಹಾಕಿ ವಾಹನ ತಪಾಸಣೆ ಮಾಡುತ್ತಾರೆ. ಅಪಘಾತದ ಹೊರತಾಗಿ ಟ್ರಾಪಿಕ್‌ ಪೊಲೀಸರು ರಾತ್ರಿ ಗಸ್ತು ತಿರುಗುವುದು ಅಪರೂಪ, ಇನ್ನು ಸಿಟಿ ಕ್ರೈಂ ಬ್ರಾಂಚ್‌ ಪೊಲೀಸರು (ಸಿಸಿಬಿ) ಗಸ್ತು ತಿರುಗುವುದಿಲ್ಲ. ಆದರೆ ಇದೇ ಮೊದಲ ಬಾರಿಗೆ ಇಡೀ ಪೊಲೀಸ್‌ ವ್ಯವಸ್ಥೆಯ ಕ್ರೈಂ, ಸಂಚಾರ, ಸಿಸಿಬಿ ಪೊಲೀಸರೂ ಕೂಡ ಶನಿವಾರ ರಾತ್ರಿ ಗಸ್ತು ಕಾರಾರ‍ಯಚರಣೆಯಲ್ಲಿ ಭಾಗಿಯಾಗಿದ್ದರು.

ಸಿಸಿಬಿ ಡಿಸಿಪಿ ಗಿರೀಶ್‌ ಪಶ್ಚಿಮ ವಿಭಾಗದ ಮಾಗಡಿ ರಸ್ತೆ ಸೇರಿದಂತೆ ಕೇಂದ್ರ ವಿಭಾಗದ ಕೆಲವೆಡೆ ಸಂಚರಿಸಿ, ಮೇಲುಸ್ತುವಾರಿ ವೀಕ್ಷಿಸಿದರು. 60ಕ್ಕೂ ಹೆಚ್ಚು ಅನುಮಾನಾಸ್ಪದ ವ್ಯಕ್ತಿಗಳನ್ನು ವಶಕ್ಕೆ ಪಡೆದಿದ್ದೇವೆ ಎಂದು ಗಿರೀಶ್‌ ತಿಳಿಸಿದ್ದಾರೆ.

ನಗರದಲ್ಲಿ ರಾತ್ರಿ ವೇಳೆ ನಡೆಯುವ ಸುಲಿಗೆ, ದರೋಡೆ ಸೇರಿದಂತೆ ಒಟ್ಟಾರೆ ಅಪರಾಧ ಕೃತ್ಯಗಳಿಗೆ ತಡೆ ಹಾಕುವ ನಿಟ್ಟಿನಲ್ಲಿ ನಗರದ ಎಲ್ಲ 8 ವಲಯಗಳ ಡಿಸಿಪಿ ನೇತೃತ್ವದಲ್ಲಿ ಬೆಳಗಿನ ಜಾವ 3 ಗಂಟೆವರೆಗೂ ಕಾರಾರ‍ಯಚರಣೆ ನಡೆಸಲಾಗಿದೆ. ಅನುಮಾನಾಸ್ಪದ ವ್ಯಕ್ತಿಗಳನ್ನು ವಶಕ್ಕೆ ಪಡೆಯಲಾಗಿದೆ. ಇನ್ನು ಜನರದಲ್ಲಿ ನಿರ್ಭೀತ ವಾತಾವರಣ ಸೃಷ್ಟಿಮಾಡುವ ಉದ್ದೇಶದಿಂದ ಈ ಕಾರಾರ‍ಯಚರಣೆ ಮಾಡಲಾಗಿದೆ. ಸಿಸಿಬಿ ಪೊಲೀಸರು ಸೇರಿದಂತೆ ಎಲ್ಲ ಠಾಣೆಗಳ, ಸಂಚಾರ ಠಾಣೆಯ ಇನ್ಸ್‌ಪೆಕ್ಟರ್‌ಗಳು ಭಾಗಿಯಾಗಿದ್ದರು.

-ಅಲೋಕ್‌ ಕುಮಾರ್‌, ಪೊಲೀಸ್‌ ಆಯುಕ್ತ.

click me!