ಕರ್ತವ್ಯದ ಮೇಲೆ ಬೈಕ್ ಮೂಲಕ ತೆರಳುತ್ತಿದ್ದ ಕೆಂಭಾವಿ ಠಾಣೆಯ ಪೊಲೀಸ್ ಹೆಡ್ ಕಾನ್‌ಸ್ಟೆಬಲ್ ತಿರುಪತಿಗೌಡ ಆನೇಸೂರ (ಭಂಟನೂರ) ಅವರಿಗೆ ರಸ್ತೆಯಲ್ಲಿ ಬಿದ್ದಿದ್ದ ಮಹಿಳೆಯ ಪರ್ಸ್ ಸಿಕ್ಕಿತ್ತು. ಅವರು ಪರ್ಸ್‌ನಲ್ಲಿದ್ದ ಆಧಾರ್ ಕಾರ್ಡ್ ಮೂಲಕ ಕಸ್ತೂರಿಬಾಯಿ ಅವರ ಕುಟುಂಬದವರನ್ನು ಸಂಪರ್ಕಿಸಿ, ತಮಗೆ ಸಿಕ್ಕಿದ್ದ ಮಹಿಳೆಯ ಪರ್ಸ್ ಅನ್ನು, ಅದರಲ್ಲಿದ್ದ ಹಣ, ಆಧಾರ್ ಕಾರ್ಡ್, ಮತ್ತಿತರ ದಾಖಲಾತಿಗಳನ್ನು ಅವರಿಗೆ ಮರಳಿಸಿದ್ದಾರೆ.
ತಾಳಿಕೋಟೆ(ಜೂ.24): ಪೊಲೀಸ್ ಹೆಡ್ ಕಾನ್‌ಸ್ಟೆಬಲ್ ಒಬ್ಬರು ತಮಗೆ ಸಿಕ್ಕ ಮಹಿಳೆಯೊಬ್ಬರ ಪರ್ಸ್ ಅನ್ನು ಅವರಿಗೆ ಪ್ರಾಮಾಣಿಕವಾಗಿ ಮರಳಿಸಿ ಕರ್ತವ್ಯನಿಷ್ಠೆ ತೋರಿದ್ದಾರೆ.
ಮುದ್ದೇಬಿಹಾಳ ತಾಲೂಕಿನ ಚೀರಲದಿನ್ನಿ ಗ್ರಾಮದ ಮಹಿಳೆ ಕಸ್ತೂರಿಬಾಯಿ ಪಾಟೀಲ ಕೆಂಭಾವಿ ಪಟ್ಟಣದ ಖಾಸಗಿ ಶಾಲೆಯಲ್ಲಿ ಮಗಳ ಪ್ರವೇಶಾತಿಗೆ ತೆರಳಿದ್ದಾಗ ಶುಲ್ಕ ಕಟ್ಟಲು ತಂದಿದ್ದ 10 ಸಾವಿರ, ಆಧಾರ್ ಕಾರ್ಡ್ ಮತ್ತು ಇನ್ನುಳಿದ ಶಾಲಾ ದಾಖಲಾತಿಗಳಿದ್ದ ತಮ್ಮ ಪರ್ಸ್‌ನ್ನು ಪಟ್ಟಣದ ಜನಜಂಗುಳಿ ಇರುವ ಪ್ರದೇಶದ ರಸ್ತೆಯಲ್ಲಿ ಕಳೆದುಕೊಂಡಿದ್ದರು. ನಂತರ ಮಹಿಳೆಯು ಪರ್ಸ್‌ಗಾಗಿ ಸಾಕಷ್ಟು ಹುಡುಕಾಟ ನಡೆಸಿ, ಅದು ಸಿಗದೇ ಇದ್ದಾಗ ಬೇಸರಗೊಂಡು ತಮ್ಮ ಸ್ವಗ್ರಾಮ ಚೀರಲದಿನ್ನಿಗೆ ಮರಳಿದ್ದರು.
ಮುದ್ದೇಬಿಹಾಳ: ಮಳೆ ಹನಿ ಕಾಣದೆ ಕಂಗಾಲಾದ ರೈತ..!
ಈ ಸಂದರ್ಭದಲ್ಲಿ ಕರ್ತವ್ಯದ ಮೇಲೆ ಬೈಕ್ ಮೂಲಕ ತೆರಳುತ್ತಿದ್ದ ಕೆಂಭಾವಿ ಠಾಣೆಯ ಪೊಲೀಸ್ ಹೆಡ್ ಕಾನ್‌ಸ್ಟೆಬಲ್ ತಿರುಪತಿಗೌಡ ಆನೇಸೂರ (ಭಂಟನೂರ) ಅವರಿಗೆ ರಸ್ತೆಯಲ್ಲಿ ಬಿದ್ದಿದ್ದ ಮಹಿಳೆಯ ಪರ್ಸ್ ಸಿಕ್ಕಿತ್ತು. ಅವರು ಪರ್ಸ್‌ನಲ್ಲಿದ್ದ ಆಧಾರ್ ಕಾರ್ಡ್ ಮೂಲಕ ಕಸ್ತೂರಿಬಾಯಿ ಅವರ ಕುಟುಂಬದವರನ್ನು ಸಂಪರ್ಕಿಸಿ, ತಮಗೆ ಸಿಕ್ಕಿದ್ದ ಮಹಿಳೆಯ ಪರ್ಸ್ ಅನ್ನು, ಅದರಲ್ಲಿದ್ದ ಹಣ, ಆಧಾರ್ ಕಾರ್ಡ್, ಮತ್ತಿತರ ದಾಖಲಾತಿಗಳನ್ನು ಅವರಿಗೆ ಮರಳಿಸಿದ್ದಾರೆ.
ಕಸ್ತೂರಿಬಾಯಿ ಪಾಟೀಲ ಹಾಗೂ ಕುಟುಂಬಸ್ಥರು ಹೆಡ್ ಕಾನ್‌ಸ್ಟೆಬಲ್ ತಿರುಪತಿಗೌಡ ಅವರಿಗೆ ಕೃತಜ್ಞತೆ ಸಲ್ಲಿಸಿದ್ದು, ಹೆಡ್ ಕಾನ್‌ಸ್ಟೆಬಲ್ ಪ್ರಾಮಾಣಿಕತೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.