ಮೈಸೂರು: ಅಕ್ರಮವಾಗಿ ಸಾಗಿಸುತ್ತಿದ್ದ ಮೂರು ಹಸು, 25 ಕರುಗಳ ವಶ

Kannadaprabha News   | Asianet News
Published : Jun 22, 2020, 01:44 PM IST
ಮೈಸೂರು: ಅಕ್ರಮವಾಗಿ ಸಾಗಿಸುತ್ತಿದ್ದ ಮೂರು ಹಸು, 25 ಕರುಗಳ ವಶ

ಸಾರಾಂಶ

ವಾಹನವೊಂದರಲ್ಲಿ ಅಕ್ರಮವಾಗಿ ಹಸುಗಳ ಸಾಗಾಟ| ಮೈಸೂರು ಜಿಲ್ಲೆಯ ಅತ್ತಿಗೋಡು ಗ್ರಾಮದಲ್ಲಿ ನಡೆದ ಘಟನೆ| ಖದೀಮರನ್ನ ಬಂಧಿಸಿದ ಬೆಟ್ಟದಪುರ ಪೊಲೀಸರು|

ಬೆಟ್ಟದಪುರ(ಜೂ.22): ವಾಹನವೊಂದರಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಮೂರು ಹಸು ಹಾಗೂ 25 ಕರುಗಳನ್ನು ವಶಪಡಿಸಿಕೊಂಡ ಘಟನೆ ಅತ್ತಿಗೋಡು ಗ್ರಾಮದಲ್ಲಿ ನಡೆದಿದೆ. ಖಚಿತ ಮಾಹಿತಿ ಮೇರೆ ಬೆಟ್ಟದಪುರ ಪೊಲೀಸರು  ದಾಳಿ ನಡೆಸಿ ಖದೀಮರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ಹುಣಸೂರು ತಾಲೂಕಿನ ದರ್ಗಾ ನಿವಾಸಿ, ವಾಹನ ಚಾಲಕ ರೋಷನ್‌ ಷರೀಫ್‌, ಹಾಗೂ ಹಲಗನಹಳ್ಳಿ ಗ್ರಾಮದ ಅಹ್ಮದ್‌ ಹುಸೇನ್‌ ಬಂಧಿತ ಆರೋಪಿಗಳಾಗಿದ್ದಾರೆ. 

ಮೈಸೂರು: ಹೊಟ್ಟೆ ನೋವು ತಾಳಲಾರದೆ ಆತ್ಮಹತ್ಯೆಗೆ ಶರಣಾದ ಯುವತಿ

ಕಾರ್ಯಾಚರಣೆಯಲ್ಲಿ ಎಸ್‌ಐ ಪುಟ್ಟರಾಜು, ಸಿಬ್ಬಂದಿಗಳಾದ ದಿಲೀಪ್‌, ಮಂಜುನಾಥ್‌, ಶೇಖರ್‌, ರಘು, ರವೀಶ್‌ ಭಾಗವಹಿಸಿದ್ದರು.
 

PREV
click me!

Recommended Stories

'ಅಫಿಡವಿಟ್‌ನಲ್ಲಿ ಡಿಕ್ಲೇರ್ ಮಾಡಿದ್ದರೂ ಟೀಕೆ 'ಚಿಲ್ಲರ್ ಕೆಲಸ': ಸಿಎಂ ಡಿಸಿಎಂ ದುಬಾರಿ ವಾಚ್ ಬಗ್ಗೆ ಬಿಜೆಪಿ ಹೇಳಿಕೆಗೆ ಕಾಶೆಪ್ಪನವರು ಕಿಡಿ
ಮೈಸೂರಿನ ಪುಟ್ಟ ರಾಜಕುಮಾರನ ಹುಟ್ಟುಹಬ್ಬ: ವಿಶೇಷ ಫೋಟೊಗಳನ್ನು ಶೇರ್ ಮಾಡಿದ ಮಹಾರಾಣಿ