ಪೊಗರು ದೃಶ್ಯ, ಸೆನ್ಸಾರ್‌ ಮಂಡಳಿಗೆ ಮಂತ್ರಾಲಯ ಸ್ವಾಮೀಜಿ ಸಲಹೆ

By Suvarna News  |  First Published Feb 23, 2021, 6:26 PM IST

ಪೊಗರು ಸಿನಿಮಾದಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಅವಹೇಳ ಹಿನ್ನೆಲೆ/ ಮಂತ್ರಾಲಯ ಶ್ರೀ ಸುಬುಧೇಂದ್ರ ತೀರ್ಥರಿಂದ ಖಂಡನೆ/ ಚಲನಚಿತ್ರ, ಕಿರುತೆರೆಯಲ್ಲಿ ಒಂದು ಸಮುದಾಯಕ್ಕೆ ಅವಹೇಳ, ನಿಂದನೆ ಮಾಡುವುದು ಸರಿಯಲ್ಲ/ ಆ ತರಹದ ಚಿತ್ರೀಕರಣ ಮಾಡುವುದು ‌ಚಲನಚಿತ್ರ ವಾಣಿಜ್ಯ ಮಂಡಳಿಯ ನೀತಿಯೂ ಅಲ್ಲ


ರಾಯಚೂರು (ಫೆ. 23)  ಪೊಗರು ಸಿನಿಮಾದಲ್ಲಿ ಬ್ರಾಹ್ಮಣರನ್ನು ಅವಹೇಳನಕಾರಿಯಾಗಿ ಚಿತ್ರಿಸಲಾಗಿದೆ ಎಂಬುದು ಸದ್ಯದ ದೊಡ್ಡ ಚರ್ಚಾ ವಿಷಯ .  ಪೊಗರು ಸಿನಿಮಾದಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಅವಹೇಳನ ವಿಚಾರವನ್ನು ಮಂತ್ರಾಲಯ ಶ್ರೀ ಸುಬುಧೇಂದ್ರ ತೀರ್ಥರು ಖಂಡಿಸಿದ್ದಾರೆ.

ಚಲನಚಿತ್ರ, ಕಿರುತೆರೆಯಲ್ಲಿ ಒಂದು ಸಮುದಾಯಕ್ಕೆ ಅವಹೇಳನ, ನಿಂದನೆ ಮಾಡುವುದು ಸರಿಯಲ್ಲ. ಆ ತರಹದ ಚಿತ್ರೀಕರಣ ಮಾಡುವುದು ‌ಚಲನಚಿತ್ರ ವಾಣಿಜ್ಯ ಮಂಡಳಿಯ ನೀತಿಯೂ ಅಲ್ಲ. ಇನ್ನೂ ಮುಂದೆ ಈ ತರಹದ ದೃಶ್ಯಗಳು ಬಾರದಂತೆ ಸೆನ್ಸಾರ್ ‌ಮಂಡಳಿ ನೋಡಿಕೊಳ್ಳಬೇಕು ಎಂದಿದ್ದಾರೆ.

Tap to resize

Latest Videos

ಬ್ರಾಹ್ಮಣರ ಕ್ಷಮೆ ಕೇಳಿದ ಪೊಗರು ನಿರ್ದೇಶಕ

ನಾವು ಈ ಬಗ್ಗೆ ಸೆನ್ಸಾರ್ ಮಂಡಳಿಗೆ ಆ ದೃಶ್ಯ ಕಟ್ ಮಾಡಲು ಸೂಚಿಸುತ್ತೇವೆ. ಈಗಾಗಲೇ ವಾಣಿಜ್ಯ ಮಂಡಳಿಯ ಮುಖ್ಯಸ್ಥರೊಂದಿಗೆ 
ಮಾತುಕತೆ ಆಗಿದೆ. ವಾಣಿಜ್ಯ ಮಂಡಳಿಯವರು ಕ್ಷಮೆಯಾಚಿಸಿದ್ದಾರೆ. ಅಷ್ಟೇ ಅಲ್ಲದೆ ಪೊಗರು ಸಿನಿಮಾದಲ್ಲಿ ಇದ್ದ ಆ ದೃಶ್ಯ ರದ್ದು ಮಾಡುವುದಾಗಿ ಭರವಸೆ ನೀಡಿದ್ದಾರೆ. ಹೀಗಾಗಿ ಬ್ರಾಹ್ಮಣ ಸಮುದಾಯ ಯಾವುದೇ ಆವೇಶಕ್ಕೆ ಒಳಗಾಗಬಾರದು ಎಂದು ಮನವಿ ಮಾಡಿಕೊಂಡಿದ್ದಾರೆ.

ನಾವು ಇನ್ನೊಂದು ಸಮುದಾಯದ ಜೊತೆಗೆ ಪ್ರೀತಿ,ಸ್ನೇಹದಿಂದ ವರ್ತಿಸುವುದು ನಮ್ಮ ಕರ್ತವ್ಯ. ಈ  ರೀತಿ ಸಮಾಜದಲ್ಲಿ ಎಲ್ಲರೂ ನಡೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ.

ವಿವಾದಕ್ಕೆ ಸಂಬಂಧಿಸಿ ವಾಣಿಜ್ಯ ಮಂಡಳಿಯಲ್ಲಿ ಮಾತುಕೆತೂ ನಡೆದಿದೆ. ದೃಶ್ಯವನ್ನು ತೆಗೆದು ಹಾಕಲಾಗುವುದು ಎಂದು ನಿರ್ದೇಶಕ ನಂದ ಕಿಶೋರ್ ಈ ಮೊದಲೇ ಹೇಳಿಕೆ ನೀಡಿದ್ದರು. 

click me!