
ಹಾಸನ(ಆ.15): ಸರಳತೆ ಸಿದ್ಧಾಂತದಡಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಹುಟ್ಟಿಕೊಂಡಿದೆ. ಸಮಾನ ಮನಸ್ಕರಿಂದ ಕೂಡಿದ ಅಪ್ಪಟ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘಟನೆಯಾಗಿದೆ ಎಂದು ವೇದಿಕೆಯ ರಾಜ್ಯಾಧ್ಯಕ್ಷ ಕೊಟ್ರೇಶ್ ಎಸ್.ಉಪ್ಪಾರ್ ಹೇಳಿದರು.
ಹಾಸನ ಜಿಲ್ಲಾ ಘಟಕ ಮೈಸೂರು-ಯಶ್ವಂತಪುರ ಪ್ಯಾಸೆಂಜರ್ ರೈಲಿನಲ್ಲಿ ಹಾಸನದಿಂದ ಶ್ರವಣಬೆಳಗೊಳದವರೆಗೆ ನಡೆಸಿದ ಟ್ರೈನ್ ಸಂಚಾರಿ ಕವಿಗೋಷ್ಠಿ ಕುರಿತು ಮಾತನಾಡಿದ ಅವರು, ಜಿಲ್ಲಾ ಘಟಕದಿಂದ ವಿನೂತನವಾದ ಟ್ರೈನ್ ಕವಿಗೋಷ್ಠಿ ಹಮ್ಮಿಕೊಂಡಿರುವುದು ಹೊಸ ಹೆಜ್ಜೆಯಾಗಿದೆ ಎಂದರು.
ಪ್ರಯಾಣಿಕರಿಗೂ ರಂಜನೆ:
ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಹೀಗೆ ವಿನೂತನವಾದ ಸಾಹಿತ್ಯ ಕಾರ್ಯಕ್ರಮ ಹಮ್ಮಿಕೊಳ್ಳುವುದರ ಮೂಲಕ ಕವಿಗಳಲ್ಲಿ ಹೊಸ ತೇಜಸ್ಸನ್ನುಂಟು ಮಾಡಲಿ ಎಂದರು. ಜಿಲ್ಲಾ ಸಮಿತಿ ಗೌರವಾಧ್ಯಕ್ಷ ಕುಮಾರ್ ಛಲವಾದಿ ರಂಗಭೂಮಿ ಅಭಿನಯಗಳ ಮೂಲಕ ಕವಿಗಳಲ್ಲದೇ ರೈಲಿನಲ್ಲಿದ್ದ ಪ್ರಯಾಣಿಕರನ್ನು ರಂಜಿಸಿದರು.
ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಜಿಲ್ಲಾ ಸಂಚಾಲಕಿ ಎಚ್.ವೇದಶ್ರೀರಾಜ್ ಸಂಚಾಲಕತ್ವದಲ್ಲಿ ನಡೆದ ಕವಿಗೋಷ್ಠಿಯಲ್ಲಿ ಎಚ್.ಬಿ.ಚೂಡಾಮಣಿ, ಸಿ.ಎನ್.ನೀಲಾವತಿ, ಪಲ್ಲವಿ ಬೇಲೂರು, ನಾಗರಾಜ್ ದೊಡ್ಡಮನಿ, ಮಾರುತಿ ಬೇಲೂರು, ವಾಸು ಸಮುದ್ರವಳ್ಳಿ, ಎಚ್.ಎಸ್.ಬಸವರಾಜ್, ಎಚ್.ಶಿವಾಗ್ನಿರಾಜ್, ಕುಮಾರ್ ಛಲವಾದಿ, ಗೀತಾ ಕೆ.ವೈ. ಹೇಮರಾಗ, ಎಚ್.ವೇದಶ್ರೀರಾಜ್ ಕಾವ್ಯ ವಾಚಿಸಿದರು. ಕಾರ್ಯಕ್ರಮದಲ್ಲಿ ಅನಿತಾ ನಾಗರಾಜ್, ಭವ್ಯ ವಾಸು, ಗಿರಿಜಾ, ಪಾಥ್‌ರ್‍ರಾಜ್ ಇತರರು ಇದ್ದರು