ಕೊಪ್ಪಳದಲ್ಲಿ ಕರ್ನಾಟಕವೇ ಬೆಚ್ಚಿಬೀಳಿಸೋ ಕೃತ್ಯ: ಲವ್‌ ಹೆಸರಲ್ಲಿ ಬಾಲಕಿಯ ಮೇಲೆ ಬಲತ್ಕಾರ ಮಾಡಿ ವಿಡಿಯೋ ಮಾಡಿದ ಪಾಪಿ, ಮಾಡಿದ್ದೇನು?

Kannadaprabha News   | Kannada Prabha
Published : Aug 21, 2026, 06:08 AM IST
POCSO case registered over assault a minor girl in Koppal

ಸಾರಾಂಶ

ಕೊಪ್ಪಳದಲ್ಲಿ ಪ್ರೀತಿಯ ನಾಟಕವಾಡಿ ಅಪ್ರಾಪ್ತೆಯ ಮೇಲೆ ಅತ್ಯಾ೧ಚಾರವೆಸಗಿದ ಯುವಕ, ಅದರ ವಿಡಿಯೋವನ್ನು ಸ್ನೇಹಿತರಿಗೆ ಹಂಚಿಕೊಂಡಿದ್ದಾನೆ. ನಂತರ, ಆ ವಿಡಿಯೋ ತೋರಿಸಿ ಬಾಲಕಿಯನ್ನು ಬ್ಲ್ಯಾಕ್‌ಮೇಲ್‌ ಮಾಡಿ, ಆತನ ಸ್ನೇಹಿತರು ಎರಡು ವರ್ಷಗಳಿಂದ ನಿರಂತರ ದೌರ್ಜನ್ಯ. ಪೊಕ್ಸೊ ಕೇಸ್ ದಾಕಲು ಏಳು ಆರೋಪಿಗಳ ಬಂಧನ.

 ಕೊಪ್ಪಳ (ಆ.21): ಪ್ರೀತಿಸುವ ನಾಟಕವಾಡಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾ೧ಚಾರ ಮಾಡಿದ ಕಿಚಕನೊಬ್ಬ ರೇಪ್‌ ವಿಡಿಯೋ ಚಿತ್ರಿಸಿಕೊಂಡಿದ್ದು, ಅದನ್ನು ತೋರಿಸಿ ಆತನ ಸ್ನೇಹಿತರೂ ಬಾಲಕಿಯನ್ನು ಬ್ಲಾಕ್‌ಮೇಲ್‌ ಮಾಡಿ ಸರಣಿ ಅತ್ಯಾ೧ಚಾರಿಂದ ಗರ್ಭಿಣಿ ಮಾಡಿದ ಅಮಾನವೀಯ ಘಟನೆ ಕೊಪ್ಪಳ ಜಿಲ್ಲೆ ಕುಟುಗನಳ್ಳಿ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

- 2 ವರ್ಷದಿಂದ ಬಾಲಕಿಗೆ ನರಕ । 7 ಜನರ ಬಂಧನ

ಸಂತ್ರಸ್ತ ಬಾಲಕಿಯ ಪಾಲಕರು ನೀಡಿದ ದೂರಿನ ಮೇರೆಗೆ ಪೋಕ್ಸೋ ಕೇಸ್ ದಾಖಲಿಕೊಂಡಿರುವ ಕೊಪ್ಪಳ ಗ್ರಾಮೀಣ ಠಾಣೆ ಪೊಲೀಸರು 7 ಆರೋಪಿಗಳನ್ನು ಬಂಧಿಸಿದ್ದಾರೆ. ಕಳೆದ 2 ವರ್ಷದ ಹಿಂದೆ ಬಾಲಕಿ 9ನೇ ತರಗತಿಯಲ್ಲಿದ್ದಾಗ ಅದೇ ಗ್ರಾಮದ ಯುವಕನೊಬ್ಬ ಪ್ರೀತಿಸುವ ನಾಟಕವಾಡಿ ದೈಹಿಕ ಸಂಬಂಧ ಬೆಳೆಸಿದ್ದು, ಅದನ್ನು ತನ್ನ ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದಾನೆ. ಬಳಿಕ ಆ ದೃಶ್ಯವನ್ನು ಸ್ನೇಹಿತರಿಗೆ ಶೇರ್ ಸಹ ಮಾಡಿದ್ದು, ಆತನ ಸಹಚರರು ಬಾಲಕಿಗೆ ದೃಶ್ಯಾವಳಿ ತೋರಿಸಿ ಅತ್ಯಾ೧ಚಾರ ಎಸಗಿದ್ದಾರೆ. ಅಲ್ಲದೇ, ರೇಪ್‌ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿ ಬಿಡುವುದಾಗಿ ಬೆದರಿಸಿದ್ದಾರೆ. ಕಿಚಕರ ಅಟ್ಟಹಾಸದಿಂದಾಗಿ ಪ್ರತಿಭಾವಂತ ವಿದ್ಯಾರ್ಥಿನಿ ಶಿಕ್ಷಣ ಮೊಟಕುಗೊಳಿಸಿ ನರಕಯಾತನೆ ಅನುಭವಿಸುತ್ತಿದ್ದು, ಬಾಲಕಿಯನ್ನು ಕೊಪ್ಪಳ ಬಾಲ ಮಂದಿರದಲ್ಲಿ ಇರಿಸಲಾಗಿದೆ.

\Bಬಂಧಿತರು: \Bಪ್ರಕರಣದಲ್ಲಿ ಕಿರಣ್ ಕುಮಾರ್ ತೊಂಡಿಹಾಳ, ಹರ್ಷ ಪೊಲೀಸ್ ಪಾಟೀಲ್, ರಮೇಶ್ ಚಿಪ್ಪವರ, ಮಲ್ಲಪ್ಪ ಹರಿಜನ, ಸಿದ್ದಲಿಂಗಪ್ಪ ವಾಲ್ಮೀಕಿ, ಕಿರಣ ಕುಮಾರ ಆಧೋನಿ ಹಾಗೂ ಫಕೀರಪ್ಪ ಧರ್ಮಾಪುರ ಎನ್ನುವರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ.

PREV
Read more Articles on
click me!

Recommended Stories

ಹಸು ಕಟ್ಟುವ ವಿಚಾರಕ್ಕೆ ಅಪ್ಪನ ಹಿಡಿದು ಹಿಗ್ಗಾಮುಗ್ಗಾ ಥಳಿಸಿದ ದುಷ್ಟರು.. ಹೆದರಿದ ಅಪ್ರಾಪ್ತ ಪುತ್ರ, ದುರಂತ ಅಂತ್ಯ
ಶ್ರೀರಂಗನಾಥನಿಗೆ ಬಂಗಾರದ ಕಳಸ ನೀಡಿದ TVS ಉದ್ಯಮಿ.. ಅಷ್ಟಲಕ್ಷ್ಮಿ ಕತೆಯುಳ್ಳ ಗಿಫ್ಟ್ ಸಮರ್ಪಣೆ