ಸಚಿವ ಶ್ರೀ ರಾಮುಲು ಅವರ ಮಗಳ ಮದುವೆ| ಪ್ರಧಾನಿ ನರೇಂದ್ರ ಮೋದಿ ಆಹ್ವಾನಿಸಿದ ಶ್ರೀರಾಮುಲು|ಮಾರ್ಚ್ 05 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಮದುವೆ| ಮದುವೆಗೆ ಆಹ್ವಾನಿಸಿದ್ದಕ್ಕಾಗಿ ಧನ್ಯವಾದ ತಿಳಿಸಿದ ಪ್ರಧಾನಿ|
ಬಳ್ಳಾರಿ(ಫೆ.21): ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವ ಶ್ರೀ ರಾಮುಲು ಅವರ ಮಗಳ ಮದುವೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅಭಿನಂದನ ಪತ್ರ ಕಳುಹಿಸಿದ್ದಾರೆ.
ಇದೇ ಮಾರ್ಚ್ 05 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಮದುವೆ ಕಾರ್ಯಕ್ರಮ ನಡೆಯಲಿದ್ದು, ಮದುವೆಯಲ್ಲಿ ಭಾಗಿಯಾಗುವಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಚಿವ ರಾಮುಲು ಆಹ್ವಾನಿಸಿದ್ದರು.
ಇದಕ್ಕೆ ಪತ್ರ ಬರೆದಿರುವ ಪ್ರಧಾನಿ ನರೇಂದ್ರ ಮೋದಿ ಅವರು, ತಮ್ಮನ್ನು ಆಹ್ವಾನಿಸಿದ್ದಕ್ಕಾಗಿ ಧನ್ಯವಾದಗಳು ಎಂದು ಹೇಳಿದ್ದಾರೆ. ಮದುವೆಯಲ್ಲಿ ಸಂಭ್ರಮ, ಸಂತೋಷ ಮನೆ ಮಾಡಿದೆ. ಅದರಲ್ಲಿ ನಾನು ಪಾಲ್ಗೊಳ್ಳಬೇಕೆಂದು ನಾನು ಬಯಸುತ್ತೇನೆ. ನವ ಜೋಡಿಗಳ ಹೊಸ ಜೀವನ ಸಂತೋಷದಿಂದ ಮುಂದುವರಿಯಬೇಕೆಂದು ನಾನು ಪ್ರಾರ್ಥಿಸುತ್ತೇನೆ. ರಕ್ಷಿತಾ ಹಾಗೂ ಸಂಜೀವ ರೆಡ್ಡಿ ಮತ್ತು ಕುಟುಂಬ, ಸ್ನೇಹಿತರು ಪ್ರೀತಿ ಪಾತ್ರರನ್ನು ಮತ್ತೊಮ್ಮೆ ಅಭಿನಂದಿಸುತ್ತೇನೆ ಎಂದು ಪತ್ರ ಬರೆದಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ