ಪ್ರಧಾನಿ ಮೋದಿ ಚಿತ್ರ ವಿಕೃತಗೊಳಿಸಿ ವಾಟ್ಸಪ್‌ನಲ್ಲಿ ಪೋಸ್ಟ್

By Kannadaprabha News  |  First Published Jun 5, 2020, 3:21 PM IST

ಕಲಬುರಗಿ ಜಿಲ್ಲೆಯ ಸೇಡಂ ಠಾಣೆಯಲ್ಲಿ ದೂರು ದಾಖಲು| ಪ್ರಧಾನಿ ಮೋದಿ ಚಿತ್ರ ವಿಕೃತಗೊಳಿಸಿ ವಾಟ್ಸಪ್‌ನಲ್ಲಿ ಪೋಸ್ಟ್‌| ಮೋದಿ ಫೋಟೋ ವಿಕೃತಗೊಳಿಸಿದವರ ವಿರುದ್ಧ ಕ್ರಮಕ್ಕೆ ಆಡಕಿ ಆಗ್ರಹ| ಜನನಾಯಕರು- ಅಧಿಕಾರಿಗಳಿರುವ ವಾಟ್ಸಪ್‌ ಗ್ರೂಪ್‌ನಲ್ಲಿ ಬಂದ ಪೋಸ್ಟ್‌|


ಸೇಡಂ(ಜೂ.05): ಇಡೀ ದೇಶವನ್ನೇ ಕೊರೋನಾ ಸೋಂಕಿನ ಮಹಾಮಾರಿಯಿಂದ ಹೇಗೆ ಉಳಿಸಬೇಕೆಂದು ಹಗಲಿರುಳು ಶ್ರಮಿಸುತ್ತಿರುವ ಪ್ರದಾನಿ ನರೇಂದ್ರ ಮೋದಿಯವರ ಕಾರ್ಯಕ್ಕೆ ಇಡೀ ವಿಶ್ವವೇ ಶಹಬಾಸ್‌ ಗಿರಿ ಕೊಡುತ್ತಿದ್ದರೆ ಕಲಬುರಗಿ ಜಿಲ್ಲೆಯ ವಾಟ್ಸಪ್‌ ಸಾಮಾಜಿಕ ಜಾಲತಾಣದ ಒಂದು ಗ್ರೂಪ್‌ನಲ್ಲಿ ಮೋದಿಯವರ ಚಿತ್ರವನ್ನು ಅಶ್ಲೀಲವಾಗಿ ಬಳಸಿ ಅಪಲೋಡ್‌ ಮಾಡಲಾಗಿದೆ. ಇದೀಗ ಈ ಪ್ರಕರಣದ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿದೆ.
ಮೋದಿಗೆ ಇಡೀ ವಿಶ್ವವೇ ಹೊಗಳುತ್ತಿರುವಾಗ ಅವರ ಫೋಟೋ ವಿಕೃತಗೊಳಿಸೋದು ಅಪರಾಧ. ಇದು ಸಹಿಸಲು ಸಾಧ್ಯವಿಲ್ಲ ಎಂದು ಈ ಪ್ರಕರಣದ ಬಗ್ಗೆ ಪೊಲೀಸರಿಗೆ ಲಿಖಿತ ದೂರು ನೀಡಿರುವ ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ವಿಜಯಕುಮಾರ ಆಡಕಿ ಹೇಳಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಕಲಬುರಗಿ ಜಿಲ್ಲೆಯ ಬಹುತೇಕ ಎಲ್ಲಾ ಜನಪ್ರತಿನಿಧಿ ಹಾಗು ಅಧಿಕಾರಿಗಳನ್ನೊಳಗೊಂಡ ಒಂದು ವಾಟ್ಸಪ್‌ ಗ್ರೂಪ್‌ ನಲ್ಲಿ ಪ್ರಧಾನಿ ಮೋದಿಯವರ ಭಾವಚಿತ್ರವನ್ನು ವಿಕೃತಗೊಳಿಸಿ ಅಶ್ಲೀಲವಾಗಿ ಬಳಸಿದ ಗ್ರೂಪ್‌ ಸದಸ್ಯನ ಮೋಬೈಲ್‌ ಸಂಖ್ಯೆ ಸಮೇತ ತಾವು ದೂರು ನೀಡಿದ್ದಾಗಿ ಹೇಳಿದ್ದಾರೆ. ಗ್ರುಪ್‌ ಅಡ್ಮಿನ್‌ ಹಾಗೆಯೇ ಇದನ್ನು ಹಂಚಿಕೊಂಡು ಇತರರಿಗೆ ಕಳುಹಿಸಿದ ಎಲ್ಲರ ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

Latest Videos

undefined

ಸುವರ್ಣ ಚ್ಯಾನಲ್‌ನಲ್ಲಿ ಸಿದ್ದರಾಮಯ್ಯ: ಟಿವಿಗೇ ಪೂಜೆ ಸಲ್ಲಿಸಿದ ಕಟ್ಟಾ ಅಭಿಮಾನಿ..!

ದೇಶದ ಅತ್ಯಂತ ಉನ್ನತ ಸಂವಿಧಾಾನಾತ್ಮಕ ಸ್ಥಾನದಲ್ಲಿರುವ ಪ್ರಧಾನಿ ಮೋದಿಯವರ ಚಿತ್ರವನ್ನು ಅಶ್ಲೀಲ ಹಾಗು ಅವಹೇಳನಕಾರಿಯಾಗಿ ಬಳಸಿದ್ದಲ್ಲದೇ ಬಿಜೆಪಿಯ ಚಿಹ್ನೆಯನ್ನು ಸಹ ಆಕ್ಷೇಪಾರ್ಹ ರೀತಿಯಲ್ಲಿ ಬಳಸಿದ್ದು ಅಕ್ಷಮ್ಯ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತದಲ್ಲಿರುವವರ ವಿರುದ್ಧ ಆಡಳಿತಾತ್ಮಕವಾಗಿ ಏನಾದರೂ ತಪ್ಪು ಮಾಡಿದ್ದರೆ ಎತ್ತಿ ತೋರಿಸುವ ಅಧಿಕಾರ ಎಲ್ಲರಿಗೂ ಇದೆ ಆದರೆ ಆ ವ್ಯಕ್ತಿಯ ವೈಯುಕ್ತಿಕ ಘನತೆಗೆ ದಕ್ಕೆ ತರುವಂತೆ ನಡೆದುಕೊಳ್ಳುವುದು ಖಂಡನೀಯ ಹಾಗು ಇಂತಹವರ ವಿರುದ್ಧ ತಕ್ಷಣಕ್ಕೆ ಸೂಕ್ತ ಕ್ರಮವಾಗಲೇಬೇಕು ಎಂದು ಅವರು ಒತ್ತಾಯಿಸಿದ ಅವರು ಈಗಾಗಲೇ ಸೇಡಂ ಠಾಣೆಯಲ್ಲಿ ಕ್ರಿಮಿನಲ್‌ ಪ್ರಕರಣ ದಾಖಲಿಸುವಂತೆ ದೂರು ನೀಡಲಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಪಕ್ಷದ ನಗರಾಧ್ಯಕ್ಷ ಅನೀಲ ಕುಮಾರ ಐನಾಪೂರ, ಮಹೇಶ ಪಾಟೀಲ ತರ್ನಳ್ಳಿ, ಶ್ರೀಮಂತ ಆವಂಟಿ, ನಾಗರಾಜ ಹಾಬಾಳ, ಅನೀಲ ರನ್ನೇಟ್ಲಾ ಇದ್ದರು.
 

click me!