ಸಂಭ್ರಮದ ಹೋಳಿ ಹಬ್ಬ: ಬಣ್ಣ ಬೀಳದಂತೆ ಮಸೀದಿಗಳಿಗೆ ಪ್ಲಾಸ್ಟಿಕ್ ಹೊದಿಕೆ

Published : Mar 11, 2020, 12:31 PM IST
ಸಂಭ್ರಮದ ಹೋಳಿ ಹಬ್ಬ: ಬಣ್ಣ ಬೀಳದಂತೆ ಮಸೀದಿಗಳಿಗೆ ಪ್ಲಾಸ್ಟಿಕ್ ಹೊದಿಕೆ

ಸಾರಾಂಶ

ಬಣ್ಣ ಬೀಳದಿರಲು ಮಸೀದಿಗಳಿಗೆ ಪ್ಲಾಸ್ಟಿಕ್ ಹೊದಿಕೆ| ಬೀದರ್ ಜಿಲ್ಲೆಯ ಹುಮನಾಬಾದ್ ಪಟ್ಟಣದಲ್ಲಿ ನಡೆದ ಘಟನೆ| ಜನನಿಬಿಡ ಪ್ರದೇಶದಲ್ಲಿನ 3 ಮಸೀದಿಗಳಿಗೆ ಪ್ಲಾಸ್ಟಿಕ್ ಹೊದಿಕೆ| 

ಹುಮನಾಬಾದ್(ಮಾ.11): ರಂಗಿನಾಟ ಧಾರ್ಮಿಕ ಆಚರಣೆಗಳ ಮೇಲೆ ದುಷ್ಪರಿಣಾಮ ಬೀಳದಿರಲಿ ಎಂದು ಯಾದಗಿರಿ ಜಿಲ್ಲೆಯ ಹುಮನಾಬಾದ್ ಪಟ್ಟಣದ ಜನನಿಬಿಡ ಪ್ರದೇಶದಲ್ಲಿನ ಮಸೀದಿಗಳಿಗೆ ಪ್ಲಾಸ್ಟಿಕ್ ಹೊದಿಕೆಗಳನ್ನ ಅಳವಡಿಸಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಈ ಹಿಂದೆ ಜಿಲ್ಲೆಯಲ್ಲಿ ಮಸೀದಿಗೆ ಬಣ್ಣ ಬಡಿದಿರುವ ಪರಿಣಾಮವಾಗಿ ಭಾರಿ ಗದ್ದಲವಾಗಿದ್ದನ್ನು ಪರಿಗಣಿಸಿ ಕಳೆದೆರಡು ವರ್ಷಗಳಿಂದ ಪ್ಲಾಸ್ಟಿಕ್ ಹೊದಿಕೆಯಿಂದ ಮಸೀದಿಗಳ ಗೋಡೆಗಳನ್ನು ಮುಚ್ಚಲಾಗುತ್ತಿದ್ದು ಅದರಂತೆ ಈ ವರ್ಷವೂ ಅದು ಮುಂದುವರೆಸಲಾಗಿದೆ. 

ಇಲ್ಲಿನ ಜನನಿಬಿಡ ಪ್ರದೇಶದಲ್ಲಿನ 3 ಮಸೀದಿಗಳಿಗೆ ಪ್ಲಾಸ್ಟಿಕ್ ಹೊಚ್ಚಲಾಗಿದ್ದು ಈ ಪೈಕಿ ನೂರ್ ಮಸೀದಿ, ಜಾಮಾ ಮಸೀದಿ ಹಾಗೂ ಹುಸೇನ್ ಮಸೀದಿಗಳಿಗೆ ಪ್ಲಾಸ್ಟಿಕ್ ಹೊದಿಕೆಗಳನ್ನು ಹಾಕಲಾಗಿದೆ. ಇದೇ ರೀತಿಯಾಗಿ ಜಿಲ್ಲೆಯ ಭಾಲ್ಕಿಯಲ್ಲಿಯೂ ಮಸೀದಿಗಳಿಗೆ ಪ್ಲಾಸ್ಟಿಕ್ ಹೊದಿಕೆಗಳಿಂದ ಗೋಡೆ ಮುಚ್ಚುವ ಮೂಲಕ ಯಾವುದೇ ಗಲಭೆಯಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.
 

PREV
click me!

Recommended Stories

ಕಾಂಗ್ರೆಸ್ ಮುಖಂಡ ಗಣೇಶ್ ಗೌಡ ಕೊಲೆ ರಹಸ್ಯ ರಿವೀಲ್: ಪೊಲೀಸರ ಬಲೆಗೆ ಬಿದ್ದ ಮೂವರು!
ರಾಮನಗರದ ರೇವಣಸಿದ್ದೇಶ್ವರ ಬೆಟ್ಟದಲ್ಲಿ ದುರಂತ: ದೇವರ ದರ್ಶನಕ್ಕೂ ಮುನ್ನವೇ ಕಂದಕ ಸೇರಿದ ಭಕ್ತ!