ಭೂಪರಿವರ್ತನೆ ಆಗದ ಸೈಟ್‌ಗಳಲ್ಲಿ ಮನೆ ಕಟ್ಟಲು ನಕ್ಷೆ ಮಂಜೂರು ಆಗಲ್ಲ: ಬಿಬಿಎಂಪಿ

By Kannadaprabha NewsFirst Published Oct 10, 2024, 11:43 AM IST
Highlights

ಬೆಂಗಳೂರು ನಗರ ಸ್ಥಳೀಯ ಯೋಜನಾ ಪ್ರದೇಶದ ವ್ಯಾಪ್ತಿಯಲ್ಲಿ ಭೂ ಪರಿವರ್ತನೆಯಾದ ಪ್ರದೇಶಕ್ಕೆ ಕೆಟಿಸಿಪಿ ಕಾಯ್ದೆಯಡಿ ಅನುಮೋದನೆ ಪಡೆಯಬೇಕು. ಆದರೆ, ಬಿಬಿಎಂಪಿಯಿಂದ 20 ಸಾವಿರ ಚದರ ಮೀಟರ್ ಗಿಂತ ಕಡಿಮೆ ವಿಸ್ತೀರ್ಣದ ಪ್ರದೇಶಗಳಿಗೆ ನೇರವಾಗಿ ಖಾತಾ ನೀಡಿ, ಕಟ್ಟಡ ನಿರ್ಮಾಣಕ್ಕೆ ನಕ್ಷೆ ಮಂಜೂರಾತಿ ನೀಡಲಾಗುತ್ತಿದೆ. ಇದು ಕರ್ನಾಟಕ ನಗರ ಮತ್ತು ಗ್ರಾಮಾಂತರ ಕಾಯ್ದೆಯ ಉಲ್ಲಂಘನೆಯಾಗಿದೆ. 

ಬೆಂಗಳೂರು(ಅ.10): ನಗರದಲ್ಲಿ ಭೂಪರಿವರ್ತನೆ ಮಾಡದ ಪ್ರದೇಶದ ನಿವೇಶನಗಳಿಗೆ ಈಗಾಗಲೇ ಖಾತಾ ಮಾಡಿ ಕೊಟ್ಟಿದರೂ ಸಹ ಕಟ್ಟಡ ನಿರ್ಮಾಣಕ್ಕೆ ನಕ್ಷೆ ಮಂಜೂರಾತಿ ನೀಡದಂತೆ ಮುಖ್ಯ ಆಯುಕ್ತರು ಆದೇಶಿಸಿರುವ ಹಿನ್ನೆಲೆಯಲ್ಲಿ ಕಟ್ಟಡ ನಕ್ಷೆ ಮಂಜೂರಾತಿಗೆ ಸಲ್ಲಿಕೆಯಾಗಿದ್ದ ಸುಮಾರು ಎರಡು ಸಾವಿರಕ್ಕೂ ಅರ್ಜಿಗಳನ್ನು ತಡೆ ಹಿಡಿಯಲಾಗಿದೆ. 

ಬೆಂಗಳೂರು ನಗರ ಸ್ಥಳೀಯ ಯೋಜನಾ ಪ್ರದೇಶದ ವ್ಯಾಪ್ತಿಯಲ್ಲಿ ಭೂ ಪರಿವರ್ತನೆಯಾದ ಪ್ರದೇಶಕ್ಕೆ ಕೆಟಿಸಿಪಿ ಕಾಯ್ದೆಯಡಿ ಅನುಮೋದನೆ ಪಡೆಯಬೇಕು. ಆದರೆ, ಬಿಬಿಎಂಪಿಯಿಂದ 20 ಸಾವಿರ ಚದರ ಮೀಟರ್ ಗಿಂತ ಕಡಿಮೆ ವಿಸ್ತೀರ್ಣದ ಪ್ರದೇಶಗಳಿಗೆ ನೇರವಾಗಿ ಖಾತಾ ನೀಡಿ, ಕಟ್ಟಡ ನಿರ್ಮಾಣಕ್ಕೆ ನಕ್ಷೆ ಮಂಜೂರಾತಿ ನೀಡಲಾಗುತ್ತಿದೆ. ಇದು ಕರ್ನಾಟಕ ನಗರ ಮತ್ತು ಗ್ರಾಮಾಂತರ ಕಾಯ್ದೆಯ ಉಲ್ಲಂಘನೆಯಾಗಿದೆ. 

Latest Videos

ಇ- ಖಾತಾ ಗೊಂದಲ ಪರಿಹರಿಸಲು ಎಆರ್‌ಒ ಕಚೇರಿಗಳಲ್ಲಿ ಹೆಲ್ಪ್‌ಡೆಸ್ಕ್‌: ಸಚಿವ ಕೃಷ್ಣ ಬೈರೇಗೌಡ

ಭೂ ಪರಿವರ್ತನೆಯಾದ ಜಮೀನುಗಳಿಗೆ ಬಿಡಿಎಯಿಂದ ವಿನ್ಯಾಸ ನಕ್ಷೆ ಅನುಮೋದ ನೆಯಾಗದೇ ನಿದೇಶನಗಳಿಗೆ ಖಾತಾ ಮತ್ತು ನಕ್ಷೆ ಮಂಜೂರಾಯಿ ನೀಡಬಾರದು ಎಂದು ಬಿಡಿಎ ತಿಳಿಸಿತ್ತು. ಹಾಗಾಗಿ ಭೂ ಪರಿವರ್ತನೆ ಆಗದ ಪ್ರದೇಶದ ನಿವೇಶನಗಳಿಗೆ ಖಾತಾ ಮತ್ತು ನಕ್ಷೆ ಮಂಜೂರಾತಿ ನೀಡಬಾರದೆಂದು ಬಿಬಿಎಂಪಿಯ ನಗರ ಯೋಜನಾ ವಿಭಾಗದ ಅಧಿಕಾರಿಗಳಿಗೆ ಸೂಚಿಸಿ ಆದೇಶಿಸಿದರು. ಈ ಹಿನ್ನೆಲೆಯಲ್ಲಿ ಕಟ್ಟಡ ನಕ್ಷೆ ಮಂಜೂರಾತಿಗೆ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ತಡೆ ಹಿಡಿಯಲಾಗಿದೆ. ಬಿಡಿಎನಿಂದ ಏಕ ನಿವೇಶನ ನಕ್ಷೆ ಮಂಜೂರಾತಿ ಹೊಂದಿದ್ದರೆ ಮಾತ್ರ ನಕ್ಷೆ ಮಂಜೂರಾತಿ ನೀಡುವುದಾಗಿ ಬಿಬಿಎಂಪಿಯ ಅಧಿಕಾರಿಗಳು ತಿಳಿಸುತ್ತಿದ್ದಾರೆ.

ಎ ಖಾತಾ ಸೈಟ್ ಆಗಿದ್ದರೂ ನಕ್ಷೆ ಮಂಜೂರಾತಿ ಆಗಲ್ಲ 

ನಗರದಲ್ಲಿ ಎ ಖಾತಾ ನಿವೇಶನವನ್ನು ಹೊಂದಿದ್ದರೂ ಏಕ ನಿವೇಶನ ನಕ್ಷೆ ಮಂಜೂರಾತಿಯನ್ನು ಬಿಡಿಎನಿಂದ ಪಡೆದು ಕೊಂಡಿಲ್ಲ ಎಂದರೆ ಬಿಬಿಎಂಪಿಯಿಂದ ನಕ್ಷೆ ಮಂಜೂರಾತಿ ನೀಡುವುದಿಲ್ಲ. ಪಾಲಿಕೆಗೆ ಆದಾಯ ನಷ್ಟ?: ಬಿಬಿಎಂಪಿ ವ್ಯಾಪ್ತಿಯಲ್ಲಿ ಒಂದು ವರ್ಷಕ್ಕೆ ಕನಿಷ್ಠ 10 ಸಾವಿರಕ್ಕೂ ಅಧಿಕ ಕಟ್ಟಡಗಳಿಗೆ ನಕ್ಷೆ ಮಂಜೂರಾತಿ ನೀಡಲಾಗುವುದರಿಂದ ಸಾಕಷ್ಟು ಪ್ರಮಾಣದ ಆದಾಯ ಬಿಬಿಎಂಪಿಗೆ ಬರುತ್ತದೆ. ಆದರೆ ಇದೀಗ ಏಕ ನಿವೇ ಶನ ನಕ್ಷೆ ಇಲ್ಲದಿರುವ ಬಡಾವಣೆಗಳಲ್ಲಿ ಕಟ್ಟಡ ನಿರ್ಮಾಣಕ್ಕೆ ತಿ ತಡೆ ಹಿಡಿದಿರುವ ಹಿನ್ನೆಲೆಯಲ್ಲಿ ಬಿಬಿಎಂ ಪಿಗೆ ಆದಾಯ ನಷ್ಟ ಉಂಟಾಗುತ್ತಿದೆ.

ಇ ಖಾತೆ ಮಾಡಿಕೊಡುವಲ್ಲಿ ಗ್ರಾ.ಪಂ ಪಿಡಿಒ ಮೀನಾಮೇಷ : ವ್ಯಕ್ತಿ ಅಳಲು

ವಾಸ್ತುಶಿಲ್ಪಿಗಳ ಮನವಿ 

ಏಕ ನಿವೇಶನ ನಕ್ಷೆ ಮಂಜೂರಾತಿ ಇಲ್ಲದ ನಿವೇಶನಗಳಲ್ಲಿ ಕಟ್ಟಡ ನಿರ್ಮಾಣಕ್ಕೆ ನಕ್ಷೆ ಮಂಜೂರಾತಿ ನೀಡದಿರುವ ಆದೇಶ ದಿಂದ ಜನರಿಗೆ ಸಾಕಷ್ಟು ತೊಂದರೆ ಉಂಟಾಗಿದೆ ಎಂದು ನೋಂದಾಯಿತ ವಾಸ್ತುಶಿಲ್ಪಿ ಎಂಜಿನಿಯರ್‌ಗಳು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಮನವಿ ಸಲ್ಲಿಸಿ ಸಾರ್ವಜನಿಕರ ಪರವಾಗಿ ಆದೇಶವನ್ನು ಮರು ಪರಿಶೀಲನೆ ನಡೆಸುವಂತೆ ಕೋರಿದ್ದಾರೆ. 

ಮನವಿಯಲ್ಲಿ ಪೂರ್ವ, ಪಶ್ಚಿಮ ಮತ್ತು ದಕ್ಷಿಣ ವಲಯದ ಈ ಆದೇಶದಿಂದ ಹೆಚ್ಚಿನ ಪರಿಣಾಮ ಉಂಟಾಗುವು ದಿಲ್ಲ, ಆದರೆ, ಬೊಮ್ಮನಹಳ್ಳಿ, ಮಹದೇವಪುರ, ಆರ್‌ಆರ್ ನಗರ, ದಾಸರಹಳ್ಳಿ ಮತ್ತು ಯಲಹಂಕ ವಲಯದ ಶೇ.60ಕ್ಕೂ ಹೆಚ್ಚು ಆಸ್ತಿದಾರರು ತೊಂದರೆಗೆ ಒಳಗಾಗಲಿದ್ದು, ಇತ್ತೀಚಿನ ಬಿಬಿಎಂಪಿ ಆದೇಶದಂತೆ ಕಟ್ಟಡದ ನಕ್ಷೆ ಮಂಜೂರಾತಿ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಉಲ್ಲೇಖಿಸಿದ್ದಾರೆ.

click me!