Nandi Hill Rope way ನಂದಿಗಿರಿಗೆ ರೋಪ್‌ ವೇ ನಿರ್ಮಾಣಕ್ಕೆ ರೂಪು ರೇಷೆ

By Kannadaprabha NewsFirst Published Dec 21, 2021, 7:20 AM IST
Highlights
  • ನಂದಿಗಿರಿಗೆ ರೋಪ್‌ ವೇ ನಿರ್ಮಾಣಕ್ಕೆ ರೂಪು ರೇಷೆ
  •  ತಾಂತ್ರಿಕ ಸಲಹಾ ಸಂಸ್ಥೆ ಜತೆ ನಡೆದ ಸಭೆ
  • ಪ್ರವಾಸೋದ್ಯಮ, ತೊಟಗಾರಿಕೆ, ಅರಣ್ಯಾಧಿಕಾರಿಗಳು ಭಾಗಿ
     

 ಚಿಕ್ಕಬಳ್ಳಾಪುರ (ಡಿ.21):   ಜಿಲ್ಲೆಯ ವಿಶ್ವ ವಿಖ್ಯಾತ ನಂದಿ ಗಿರಿಧಾಮಕ್ಕೆ (Nandi Hill) ಬಹುದಿನಗಳ ಕನಸಾಗಿರುವ ಮಹತ್ವಕಾಂಕ್ಷಿ ರೋಪ್‌ ವೇ (ಕೇಬಲ್‌ ಕಾರ್‌ Cable Car)) ನಿರ್ಮಾಣಕ್ಕೆ ಕಾಲ ಸನ್ನಿತವಾಗಿದ್ದು ಸೋಮವಾರ ರಾಜ್ಯ ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕಿ ಸಿಂಧು ಬಿ. ರೂಪೇಶ್‌ ಜಿಲ್ಲಾಡಳಿತದೊಂದಿಗೆ ಮಹತ್ವದ ಚರ್ಚೆ ನಡೆಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿಯ ನ್ಯಾಯಾಂಗ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ನಂದಿ ಗಿರಿಧಾಮದಲ್ಲಿ (Nandi Hill)  ಪ್ರವಾಸಿಗರಿಗೆ ಕಲ್ಪಿಸಲು ಕೈಗೊಳ್ಳಬೇಕಾದ ಮೂಲ ಸೌಕರ್ಯಗಳ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಚರ್ಚೆ ನಡೆಸಿದ್ದು ವಿಶೇಷವಾಗಿ ಸಭೆಯಲ್ಲಿ ಗಿರಿಧಾಮಕ್ಕೆ ರೋಪ್‌ ವೇ ನಿರ್ಮಾಣದ ಕಾಮಗಾರಿಯ ರೂಪರೇಷಗಳ ಬಗ್ಗೆ ತಾಂತ್ರಿಕ ಸಲಹಾ ಸಂಸ್ಥೆಯೊಂದಿಗೆ ವಿವರವಾಗಿ ಮಾಹಿತಿ ಪಡೆದು ಚರ್ಚೆ ನಡೆಸಿದರು.

ಇಲಾಖೆ ಮುಖ್ಯಸ್ಥರು ಭಾಗಿ:  ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಜಿಲ್ಲಾಧಿಕಾರಿ ಆರ್‌.ಲತಾ, ಲತಾ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ರೋಪ್‌ ವೇ (Cable Car) ನಿರ್ಮಾಣ ಕಾಮಗಾರಿ ಯೋಜನೆಯ ಸಂಬಂಧ ಕೈಗೊಳ್ಳಬೇಕಾದ ಅಗತ್ಯ ಕಾರ್ಯಗಳ ಬಗ್ಗೆ ಪ್ರವಾಸೋದ್ಯಮ ಇಲಾಖೆ, ತೋಟಗಾರಿಕೆ ಇಲಾಖೆ ಮತ್ತು ಅರಣ್ಯ, ಬೆಸ್ಕಾಂ ಸೇರಿದಂತೆ ಸಂಬಂದಪಟ್ಟಇತರೆ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದು ಅವರಿಗೆ ಸೂಕ್ತ ನಿರ್ದೇಶನ ನೀಡಲಾಯಿತು.

ಈ ವೇಳೆ ತಾಂತ್ರಿಕ ಸಲಹಾ ಸಂಸ್ಥೆಯಾದ ಮೂಲಭೂತ ಅಭಿವೃದ್ಧಿ ನಿಗಮ (ಕರ್ನಾಟಕ) ಲಿಮಿಟೆಡ್‌ ನ ಉಪ ಅಧ್ಯಕ್ಷರಾದ ನಿಶಿತ್‌, ನಂದಿ ಬೆಟ್ಟದಲ್ಲಿ ನಿರ್ಮಾಣವಾಗಲಿರುವ ರೋಪ್‌ ವೇ ನಿರ್ಮಾಣ ಯೋಜನೆಗೆ ಸಂಬಂಧಿಸಿದಂತೆ ರೂಪ್‌ ವೇ ನಿರ್ಮಾಣ ಜಾಗ, ವಾಹನಗಳ ಪಾರ್ಕಿಂಗ್‌ ಸ್ಥಳ, ಯೋಜನೆಯ ನೀಲನಕ್ಷೆ ಸೇರಿದಂತೆ ಯೋಜನೆಯ ಸಮಗ್ರ ಪಡೆದು ಪಡೆದು ಅಗತ್ಯ ಸಲಹೆ ಸೂಚನೆಗಳನ್ನು ಸಭೆಯಲ್ಲಿ ಅಧಿಕಾರಿಗಳಿಗೆ ನೀಡಿದರು. ಸಭೆಯಲ್ಲಿ ಪಾಲ್ಗೊಂಡಿದ್ದ ಅಧಿಕಾರಿಗಳು ಕೂಡ ಕೇಬಲ್ ಕಾರ್‌ ಯೋಜನೆ ಅನುಷ್ಟಾನ ಸಂಬಂದ ತಮ್ಮ ತಮ್ನ ಇಲಾಖೆಗಳ ಸಾಧಕಭಾದಕಗಳ ಬಗ್ಗೆ ವಿವರವಾದ ಮಾಹಿತಿಯನ್ನು ಸಭೆಯಲ್ಲಿ ಮಂಡಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ  (Karnataka) ರಾಜ್ಯ ಪ್ರವಾಸೋದ್ಯಮ ಅಭಿವೃದ್ದಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ವಿಜಯ್‌ ಶರ್ಮ, ನಂದಿ ಗಿರಿಧಾಮದ ವಿಶೇಷ ಅಧಿಕಾರಿ ಗೋಪಾಲ…, ಐಡೆಕ್‌ ಸಂಸ್ಥೆಯ ವ್ಯವಸ್ಥಾಪಕರಾದ ನಿಜಾಮುದ್ದೀನ, ಎಂ.ಎ,ರಾಜೇಶ್‌ ರಂಜನ್‌, ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಅರ್ಸಲನ್‌, ಚಿಕ್ಕಬಳ್ಳಾಪುರ ಉಪ ವಿಭಾಗದ ಆರಕ್ಷಕ ಉಪಾಧೀಕ್ಷಕ ವಿ.ಕೆ.ವಾಸುದೇವ್‌ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಜರಿದ್ದರು.

 ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ರಾಜ್ಯ ಪ್ರವಾಸೋದ್ಯಮ ಇಲಾಖೆ ನಿರ್ದೇಶಕಿ ಸಿಂಧು ಬಿ.ರೂಪೇಶ್‌, ನಂದಿಗಿರಿಧಾಮದಲ್ಲಿ ರೋಪ್‌ ವೇ ನಿರ್ಮಾಣ ಸಂಬಂಧ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದರು.

  • ಜಿಲ್ಲೆಯ ವಿಶ್ವ ವಿಖ್ಯಾತ ನಂದಿ ಗಿರಿಧಾಮಕ್ಕೆ ಬಹುದಿನಗಳ ಕನಸಾಗಿರುವ ಮಹತ್ವಕಾಂಕ್ಷಿ ರೋಪ್‌ ವೇ
  • ನಿರ್ಮಾಣಕ್ಕೆ ಕಾಲ ಸನ್ನಿತವಾಗಿದ್ದು ಸೋಮವಾರ ರಾಜ್ಯ ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕಿ ಸಿಂಧು ಬಿ. ರೂಪೇಶ್‌ ಜಿಲ್ಲಾಡಳಿತದೊಂದಿಗೆ ಮಹತ್ವದ ಚರ್ಚೆ
  • ನಂದಿ ಗಿರಿಧಾಮದಲ್ಲಿ ಪ್ರವಾಸಿಗರಿಗೆ ಕಲ್ಪಿಸಲು ಕೈಗೊಳ್ಳಬೇಕಾದ ಮೂಲ ಸೌಕರ್ಯಗಳ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಚರ್ಚೆ
  • ವಿಶೇಷವಾಗಿ ಸಭೆಯಲ್ಲಿ ಗಿರಿಧಾಮಕ್ಕೆ ರೋಪ್‌ ವೇ ನಿರ್ಮಾಣದ ಕಾಮಗಾರಿಯ ರೂಪರೇಷಗಳ ಬಗ್ಗೆ ತಾಂತ್ರಿಕ ಸಲಹಾ ಸಂಸ್ಥೆಯೊಂದಿಗೆ ವಿವರವಾಗಿ ಮಾಹಿತಿ
  • ರೋಪ್‌ ವೇ ನಿರ್ಮಾಣ ಯೋಜನೆಗೆ ಸಂಬಂಧಿಸಿದಂತೆ ರೂಪ್‌ ವೇ ನಿರ್ಮಾಣ ಜಾಗ, ವಾಹನಗಳ ಪಾರ್ಕಿಂಗ್‌ ಸ್ಥಳ, ಯೋಜನೆಯ ನೀಲನಕ್ಷೆ ಸೇರಿದಂತೆ ಯೋಜನೆಯ ಸಮಗ್ರ ಮಾಹಿತಿ ಪಡೆದರು
click me!