Puneeth Rajkumar Layout : ಪುನೀತ್ ಹೆಸರಿಟ್ಟಿದ್ದ ಬಡಾವಣೆ ನಾಮಫಲಕ ತೆರವು : ಆಕ್ರೋಶ

By Suvarna News  |  First Published Dec 20, 2021, 3:22 PM IST
  • ನೀತ್ ಹೆಸರಿಟ್ಟಿದ್ದ ಬಡಾವಣೆ ನಾಮಫಲ ತೆರವು : ಆಕ್ರೋಶ
  •  ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ದೇಶಿಹಳ್ಳಿ ಗ್ರಾಮದಲ್ಲಿ ಕಳೆದ ರಾತ್ರಿ ಘಟನೆ 

 ಕೋಲಾರ  (ಡಿ.20):  ನಟ ಪುನೀತ್ (Puneeth Rajkumar) ಹೆಸರಿಟ್ಟಿದ್ದ ಬಡಾವಣೆ ನಾಮ ಫಲಕ ಜೆಸಿಬಿಯಿಂದ (JCB) ಧ್ವಂಸ ಮಾಡಲಾಗಿದ್ದು, ಸ್ಥಳೀಯರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.   ಕೋಲಾರ (Kolar) ಜಿಲ್ಲೆ ಬಂಗಾರಪೇಟೆ (Bangarapete) ತಾಲೂಕಿನ ದೇಶಿಹಳ್ಳಿ ಗ್ರಾಮದಲ್ಲಿ ಕಳೆದ ಭಾನುವಾರ ರಾತ್ರಿ ಘಟನೆ ನಡೆದಿದೆ.  ಬಡಾವಣೆ ನಿವಾಸಿಗಳು ಕೆಸರನಹಳ್ಳಿ ಪಂಚಾಯತಿಗೆ ಪುನೀತ್ ರಾಜ್ ಕುಮಾರ್ (Puneeth Rajkumar) ಅವರ ಹೆಸರು ಇಡಲು ಅನುಮತಿ ಕೋರಿದ್ದರು. ಪಂಚಾಯತಿ ಅಧಿಕಾರಿಗಳ ಮೌಖಿಕ ಒಪ್ಪಿಗೆ ಹಾಗೂ ಆಶ್ವಾಸನೆ ಮೇರೆಗೆ ನಾಮಫಲಕ ಅಳವಡಿಸಿದ್ದರು.  ಆದರೆ ಇದೀಗ ಏಕಾ ಏಕಿ ತೆರವು ಮಾಡಲಾಗಿದೆ. 

ಬಡಾವಣೆ ನಿವಾಸಿಗಳು ರಾತ್ರಿಯೇ ನಾಮಫಲಕವನ್ನು ತೆರವು ಮಾಡದಂತೆ ಪ್ರತಿರೋಧ ಮಾಡಿದರು. ಆದರೂ ಪ್ರತಿರೋದ ಗಮನಕ್ಕೆ ತೆಗೆದುಕೊಳ್ಳದೆ ತೆರವು ಮಾಡಲಾಗುತಿತ್ತು. ಇದಕ್ಕೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.   ಸ್ಥಳಕ್ಕೆ ಬಂದ ಬಂಗಾರಪೇಟೆ (Bangarapete Police) ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿ, ಜೆಸಿಬಿ (JCB) ಹಾಗೂ ಚಾಲಕನನ್ನು ವಶಕ್ಕೆ ಪಡೆದು ದೂರು ದಾಖಲು ಮಾಡಿದ್ದಾರೆ. ಬಡಾವಣೆ ನಿವಾಸಿಗಳು ಬಡಾವಣೆಗೆ ಮತ್ತೆ ಪುನೀತ್ ​ ಹೆಸರು ಇಡಲು ಮನವಿ ಮಾಡಿದ್ದಾರೆ. 

  • ಪುನೀತ್ ಹೆಸರಿಟ್ಟಿದ್ದ ಬಡಾವಣೆ ನಾಮಫಲ ತೆರವು : ಆಕ್ರೋಶ
  • ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ದೇಶಿಹಳ್ಳಿ ಗ್ರಾಮದಲ್ಲಿ ಕಳೆದ ರಾತ್ರಿ ಘಟನೆ 

Tap to resize

Latest Videos

ಮದುವೆ ಪತ್ರಿಕೆಯಲ್ಲಿ ಅಪ್ಪು ಭಾವಚಿತ್ರ :  ಸ್ಯಾಂಡಲ್‌ವುಡ್‌ನ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ಅಗಲಿ ಒಂದುವರೆ ತಿಂಗಳು ಕಳೆದರೂ ಅವರ ನೆನಪು ಅಭಿಮಾನಿಗಳ ಮನದಲ್ಲಿ ಸದಾ ಹಸಿರಾಗಿದೆ. ಅಪ್ಪು ಹೆಸರಲ್ಲಿ ರಕ್ತದಾನ, ನೇತ್ರದಾನ ಎಲ್ಲವನ್ನೂ ಮಾಡಿ ಅಭಿಮಾನಿಗಳು ಸಾರ್ಥಕ ಅಭಿಮಾನ‌ ಮೆರೆದಿದ್ದಾರೆ.  ಇದೀಗ ಯುವ ಜೋಡಿಯೊಂದು ತಮ್ಮ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಅಪ್ಪು ಭಾವಚಿತ್ರ ಪ್ರಕಟಿಸಿ 'ಜೊತೆಗಿರುವ ಜೀವ ಎಂದೆಂದಿಗೂ ಜೀವಂತ, ಅಪ್ಪು ಅಮರ' ಎಂಬ ಸಾಲುಗಳನ್ನು ಪ್ರಕಟಿಸಿ ಅಭಿಮಾನ ಮೆರೆದಿದ್ದಾರೆ. 

ಬಾಗಲಕೋಟೆ (Bagalkote) ಜಿಲ್ಲೆ ಬಾದಾಮಿ ತಾಲ್ಲೂಕಿನ ಹೊಸೂರು ಗ್ರಾಮದ ಯುವಕ ಶ್ರೀಧರ ಇಸರನಾಳ ಹಾಗೂ ಬಾಗಲಕೋಟೆ ತಾಲ್ಲೂಕಿನ ಕಿರಸೂರು ಗ್ರಾಮದ ಸವಿತಾ ಎಂಬ ಜೋಡಿ ಮದುವೆಯಲ್ಲೂ (Marriage) ಅಪ್ಪುವನ್ನು ನೆನೆದು ಅಭಿಮಾನ ಮೆರೆದಿದ್ದಾರೆ‌. 

ಶ್ರೀಧರ ಹಾಗೂ ಸವಿತಾ ಅವರ ಮದುವೆ 27-12-21 ರಂದು ಬಾದಾಮಿ (Badami) ತಾಲ್ಲೂಕಿನ ಹೊಸೂರು ಗ್ರಾಮದ ಸಿದ್ದೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿದ್ದು, ವರ ಶ್ರೀಧರ ಮತ್ತು ವಧು ಸವಿತಾ ಇಬ್ಬರೂ ಸಹ ಪುನೀತ್ ರಾಜ್‌ಕುಮಾರ್ (Puneeth Rajkumar) ಅಭಿಮಾನಿಗಳು.

ಮದುವೆಗೆ ಬಂಧು ಬಾಂದವರು, ಆಪ್ತರು, ಸ್ನೇಹಿತರಿಗೆ ಆಹ್ವಾನ ನೀಡಿರುವ ಜೋಡಿ ಲಗ್ನ ಪತ್ರಿಕೆಯಲ್ಲಿ (Invitation) ಅಪ್ಪು ಭಾವಚಿತ್ರ (Photo) ಪ್ರಕಟಿಸೋದರ ಜೊತೆಗೆ 'ಜೊತೆಗಿರುವ ಜೀವ ಎಂದೆಂದಿಗೂ ಜೀವಂತ ಅಪ್ಪು ಅಮರ' ಎಂದು ಪ್ರಕಟಿಸಿದ್ದಾರೆ.

ನಾನು ಮದುವೆಯಾಗುತ್ತಿರುವ ಯುವತಿ ಸವಿತಾ ಹಾಗೂ ನಮ್ಮ ಇಬ್ಬರ ಮನೆಯವರು ಪುನೀತ್ ಅಭಿಮಾನಿಗಳು. ಅಪ್ಪು ಅವರ ನಿಧನ ನಮಗೆ ಬಾರಿ ನೋವು ತಂದಿದೆ, ಅವರ ಅಗಲಿಕೆ ತುಂಬಲಾರದ ನಷ್ಟವಾಗಿದೆ.

ಪುನೀತ್ ಅವರು ಮಾಡಿದ ಸಾಮಾಜಿಕ ಕಾರ್ಯ, ಬಡ‌ವರಿಗೆ, ಮಕ್ಕಳ ಶಿಕ್ಷಣಕ್ಕೆ ಅವರು ಮಾಡಿದ ಸಹಾಯ, ಅವರ ಚಿತ್ರಗಳು ಎಲ್ಲವೂ ನಮಗೆ ಸ್ಪೂರ್ತಿ. ಮದುವೆಯಾಗುವ ನಾವು ಆಮಂತ್ರಣದಲ್ಲಿ ಪುನೀತ್ ಅವರ ಭಾವಚಿತ್ರ ಪ್ರಕಟಿಸುವ ಮೂಲಕ ಅವರಿಗೆ ಗೌರವ ಶ್ರದ್ದಾಂಜಲಿ ಸಲ್ಲಿಸುತ್ತಿದ್ದೇವೆ ಎಂದಿದ್ದಾರೆ ಮದುವೆ ಗಂಡು ಶ್ರೀಧರ.

click me!