ಪುತ್ತೂರಿನಲ್ಲಿ ತೀರಾ ಸಮೀಪ ಹಾರಾಡಿ ಜನರಲ್ಲಿ ಆತಂಕ ಸೃಷ್ಟಿಸಿದ ವಿಮಾನ; ಇಲ್ಲಿದೆ ಕಾರಣ

Published : Mar 04, 2026, 08:06 AM IST
Puttur

ಸಾರಾಂಶ

ಪುತ್ತೂರು ನಗರದಲ್ಲಿ ಮಂಗಳವಾರ ತೀರಾ ಸಮೀಪದಲ್ಲಿ ಹಾರಾಡಿದ ವಿಮಾನ ಜನರಲ್ಲಿ ಆತಂಕ ಸೃಷ್ಟಿಸಿತ್ತು. ಬಳಿಕ ಇದು ಭೂ ಭೌತಿಕ ಸಮೀಕ್ಷೆ ನಡೆಸುವ ಸೆಸ್ನಾ ವಿಮಾನವಾಗಿದ್ದು, ಖನಿಜ ಮತ್ತು ಜಲ ಸಂಪನ್ಮೂಲಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದೆ ಎಂದು ತಿಳಿದುಬಂದಿದೆ.

ಪುತ್ತೂರು: ನಗರದಲ್ಲಿ ಮಂಗಳವಾರ ಅಪರಾಹ್ನ ವಿಮಾನವೊಂದು ಹಲವು ಬಾರಿ ಭೂಮಿ ಮಟ್ಟಕ್ಕೆ ಅತೀ ಸಮೀಪದಲ್ಲಿ ಹಾರಾಡುತ್ತಾ ಸುತ್ತಾಟ ನಡೆಸುತ್ತಿದ್ದ ದೃಶ್ಯ ಕಂಡು ಬಂದಿದ್ದು, ಕೆಲ ಕಾಲ ಜನರಲ್ಲಿ ಆತಂಕ ಮೂಡಿಸಿತ್ತು. ಅದರ ಬೆನ್ನಲ್ಲೇ ಇದೊಂದು ಭೂ ವಿಜ್ಞಾನಕ್ಕೆ ಸಂಬಂಧಿಸಿದ ಸಮೀಕ್ಷೆ ನಡೆಸುವ ಕಾರ್ಯ ನಡೆಸುತ್ತಿದೆ ಎಂಬ ಮಾಹಿತಿ ತಿಳಿದು ಜನರು ನಿಟ್ಟುಸಿರು ಬಿಟ್ಟರು.

ಸುಮಾರು 10 ರಿಂದ 15 ಸುತ್ತು ಹಾರಾಟ

ಪುತ್ತೂರು ನಗರದ ಸುತ್ತ ಮುತ್ತ ಮೇಲ್ಬಾಗದಲ್ಲಿ ನೆಲ ಮಟ್ಟಕ್ಕೆ ಅತಿ ಸಮೀಪದಲ್ಲಿ ವಿಮಾನ ಹಾರಾಡುತ್ತಿದ್ದ ದೃಶ್ಯವನ್ನು ಜನರು ನೋಡಿದ್ದು, ಪದೇ ಪದೇ ನಗರದ ವಿವಿಧ ಭಾಗದಲ್ಲಿ ಹಾರಾಟ ನಡೆಸಿದೆ. ಸುಮಾರು 10 ರಿಂದ 15 ಸುತ್ತು ಹಾರಾಟ ನಡೆಸಿದೆ.

ಇದು ಯಾರದ್ದು, ಯಾಕೆ ಹಾರಾಟ ನಡೆಸಿದೆ ಎನ್ನುವ ಮಾಹಿತಿ ಲಭ್ಯವಾಗಿರಲಿಲ್ಲ. ಏಕಾಏಕಿ ಡ್ರೋಣ್ ಮಾದರಿಯಲ್ಲಿ ಹಾರಾಟ ನಡೆಸುತ್ತಿದ್ದ ದೃಶ್ಯ ಜನರಲ್ಲಿ ಆತಂಕ ಮೂಡಿಸಿತು. ಕೊನೆಗೂ ಇದು ಭೂಮಿಯ ರಚನೆ, ಅಧ್ಯಯನಕ್ಕೆ ಸಂಬಂಧಿಸಿದಂತೆ ನಡೆ ಸರ್ವೆಯಾಗಿದೆ ಎಂಬ ಮಾಹಿತಿ ಲಭಿಸಿದೆ.

ಲಿಬರ್ ಏರ್ ಬೋನ್ ಜಿಯೋ ಫಿಸಿಕ್ಸ್ ವಿಮಾನ

ಈ ವಿಮಾನ ಭೂ ಭೌತಿಕ ಸಮೀಕ್ಷೆ ಪಶ್ವಿಮ ಘಟ್ಟ ಪ್ರದೇಶಗಳಲ್ಲಿ ಸಮೀಕ್ಷೆ ಮಾಡುತ್ತಿದ್ದು. ವಿಮಾನವು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹಾರಾಟ ನಡೆಸಿತ್ತು. ಖನಿಜ ಸಂಪತ್ತು, ಭೂಗರ್ಭ ಜಲಸಂಪನ್ಮೂಲ ಚುಂಬಕ ಕ್ಷೇತ್ರದ ಬದಲಾವಣೆಗಳು ಬಗ್ಗೆ ಮಾಹಿತಿ ಸಂಗ್ರಹಿಸಲಿದೆ. ಇದು ಕ್ಯಾಲಿಬರ್ ಏರ್ ಬೋನ್ ಜಿಯೋ ಫಿಸಿಕ್ಸ್ (ಭೂಮಿಯ ಅಡಿ ಭಾಗವನ್ನು ಗಾಳಿಯಿಂದ ಮ್ಯಾಪಿಂಗ್ ಮಾಡುವ ಕಂಪನಿ)ಗೆ ಸೇರಿದ ವಿಮಾನವಾಗಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: Hassan: ನಿಧಾನವಾಗಿ ಚಲಿಸು ಎಂದಿದ್ದಕ್ಕೆ ಕಾರ್ ಗುದ್ದಿಸಿ ಯುವಕನ ಭೀಕರ ಹತ್ಯೆ; ಮೂವರು ಪಾರು

ಈ ಬಗ್ಗೆ ಸ್ಪಷ್ಟನೆ ನೀಡಿರುವ ಪೊಲೀಸ್ ಇಲಾಖೆ ಇದು ಸೆಸ್ನಾ ವಿಮಾನವಾಗಿದ್ದು, ಸಮೀಕ್ಷೆ ನಡೆಸುತ್ತಿದೆ. ಜ.16 ರಿಂದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹಾರಾಟ ನಡೆಸುತ್ತಿದೆ. ಕರ್ನಾಟಕದ ಕರಾವಳಿ, ಉತ್ತರ ಮತ್ತು ದಕ್ಷಿಣ ಒಳನಾಡಿನಲ್ಲಿ ಅಪರೂಪದ ಮಣ್ಣಿನ ಲೋಹಗಳ ಸಮೀಕ್ಷೆ ಎರಡು ತಿಂಗಳ ಕಾಲ ನಡೆಯುವ ನಿರೀಕ್ಷೆಯಿದೆ ಎಂದು ತಿಳಿಸಿದೆ.

ಇದನ್ನೂ ಓದಿ: ಬಾಣಂತನಕ್ಕೆ ಹೋದ ಹೆಂಡ್ತಿ: ಊಟಕ್ಕೆಂದು ಹೊಟೇಲ್‌ಗೆ ಹೋದಾಗ ಆಕಸ್ಮಿಕವಾಗಿ ಕಾಲ್ತುಳಿದಿದ್ದಕ್ಕೆ ಯುವಕನ ಕೊಲೆ

PREV
Read more Articles on
click me!

Recommended Stories

Hassan: ನಿಧಾನವಾಗಿ ಚಲಿಸು ಎಂದಿದ್ದಕ್ಕೆ ಕಾರ್ ಗುದ್ದಿಸಿ ಯುವಕನ ಭೀಕರ ಹತ್ಯೆ; ಮೂವರು ಪಾರು
ಬಾಣಂತನಕ್ಕೆ ಹೋದ ಹೆಂಡ್ತಿ: ಊಟಕ್ಕೆಂದು ಹೊಟೇಲ್‌ಗೆ ಹೋದಾಗ ಆಕಸ್ಮಿಕವಾಗಿ ಕಾಲ್ತುಳಿದಿದ್ದಕ್ಕೆ ಯುವಕನ ಕೊಲೆ