ಹೊಸದುರ್ಗದಲ್ಲಿದೆ ಪ್ಲೇಗಮ್ಮನ ದೇಗುಲ

By Kannadaprabha News  |  First Published Apr 16, 2020, 9:49 AM IST

ಹೊಸದುರ್ಗ ಪಟ್ಟಣದ ಕೋಟೆ ಪ್ರದೇಶÜದಲ್ಲಿ ಪ್ಲೇಗಮ್ಮ ದೇವಾಲಯವಿದ್ದು ಅನಾದಿಕಾಲದಿಂದಲೂ ಎಲ್ಲಾ ವರ್ಗದ ಜನರು ಪೂಜೆ ಸಲ್ಲಿಸಿಕೊಂಡು ಬರುತ್ತಿದ್ದಾರೆ.


ಚಿತ್ರದುರ್ಗ(ಏ.16): ಹೊಸದುರ್ಗ ಪಟ್ಟಣದ ಕೋಟೆ ಪ್ರದೇಶÜದಲ್ಲಿ ಪ್ಲೇಗಮ್ಮ ದೇವಾಲಯವಿದ್ದು ಅನಾದಿಕಾಲದಿಂದಲೂ ಎಲ್ಲಾ ವರ್ಗದ ಜನರು ಪೂಜೆ ಸಲ್ಲಿಸಿಕೊಂಡು ಬರುತ್ತಿದ್ದಾರೆ.

ಶತಮಾನದ ಹಿಂದೆ ಈಗಿನ ಕೊರೋನಾ ರೀತಿಯಲ್ಲಿಯೇ ಪ್ಲೇಗ್‌ ಬಂದಾಗ ಜನರು ವಿಪರೀತವಾಗಿ ಸಾಯುವುದ ಕಂಡು ಪ್ಲೇಗ್‌ ಮಾರಿಯನ್ನು ಗ್ರಾಮದಿಂದ ಕಳಿಸುವ ಸಲುವಾಗಿ ಈ ದೇವರನ್ನು ಪ್ರತಿಷ್ಠಾಪಿಸಿ ಆರಾಧಿಸಿಕೊಂಡು ಬರಲಾಗುತ್ತಿದೆ ಎನ್ನಲಾಗಿದೆ.

ಕೊರೋನವ್ವ ದೇವರು: ಹೋಳಿಗೆ, ಬೇವಿನ ಸೊಪ್ಪಿಟ್ಟು ಪೂಜೆ

Tap to resize

Latest Videos

ಈ ದೇವಾಲಯ ಯಾವಾಗ ನಿರ್ಮಾಣಗೊಂಡಿತೆಂಬ ಬಗ್ಗೆ ಯಾವುದೇ ನಿರ್ದಿಷ್ಟದಾಖಲೆಗಳಿಲ್ಲ. ಸದ್ಯ ನಾಯಕ ಸಮುದಾಯದವರು ಅರ್ಚಕರಾಗಿ ಪೂಜೆ ಸಲ್ಲಿಸುತ್ತಿದ್ದು ಕಾರ್ತಿಕ ಮಾಸದ ಕಡೆ ಅಮವಾಸ್ಯೆ ದಿನ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.

click me!