ದಾವಣಗೆರೆ ಸ್ಮಾರ್ಟ್ ಸಿಟಿ ನಿರ್ಮಾಣಕ್ಕೆ ಹಂದಿಗಳ ಹಾವಳಿಯೇ ಕಪ್ಪು ಚುಕ್ಕೆ!

By Gowthami K  |  First Published May 24, 2023, 7:35 PM IST

ದಾವಣಗೆರೆ ನಗರ ಸ್ಮಾರ್ಟ್ ಸಿಟಿ ಎಂದು ಘೋಷಣೆಯಾಗುತ್ತಲೇ ಮೊದಲು ಚರ್ಚೆ ಆಗಿದ್ದು ದಾವಣಗೆರೆ ನಗರದಲ್ಲಿರುವ ಹಂದಿಗಳನ್ನು ಹೇಗೆ ಶಿಪ್ಟ್ ಮಾಡುತ್ತೀರೆಂದು. ಇದಕ್ಕಾಗಿ ವರಹಾ ಶಾಲೆ ನಿರ್ಮಾಣವಾದರೂ ಖಾಲಿ ಬಿದ್ದಿದೆ.


ವರದಿ : ವರದರಾಜ್, ಏಷ್ಯಾನೆಟ್ ಸುವರ್ಣನ್ಯೂಸ್

ದಾವಣಗೆರೆ (ಮೇ.24): ರಾಜ್ಯದಲ್ಲಿ ಜಿಲ್ಲೆಗೊಂದು ಗೋಶಾಲೆ ಇದೆ.  ಅಲ್ಲಿ ಗೋವುಗಳ ಅರೈಕೆ ಮಾಡಲಾಗುತ್ತದೆ. ಅದರೆ ದಾವಣಗೆರೆ ಜಿಲ್ಲೆಯಲ್ಲಿ ಗೋಶಾಲೆ ಜೊತೆ ವರಹಾ ಶಾಲೆಯು ಸಹ ಇದೆ. ಒಂದು ಕೋಟಿ ವೆಚ್ಚದಲ್ಲಿ  ವರಹಾ ಶಾಲೆ ನಿರ್ಮಾಣವಾಗಿದ್ದು ಅಲ್ಲಿ ಮಾತ್ರ ವರಹಗಳ ( ಹಂದಿಗಳ )  ಸುಳಿವೇ ಇಲ್ಲ.  ಸ್ಮಾರ್ಟ್ ಸಿಟಿಗೆ ಸವಾಲ್ ಆಗಿರುವ ಹಂದಿಗಳನ್ನು ದಾವಣಗೆರೆ  ನಗರದಿಂದ  ವರಹಾ ಶಾಲೆಗೆ  ಶಿಪ್ಟ್ ಮಾಡುವುದೇ ದೊಡ್ಡ  ಸವಾಲ್ ಆಗಿದೆ.  ದಾವಣಗೆರೆ ನಗರ ಸ್ಮಾರ್ಟ್ ಸಿಟಿ ಎಂದು ಘೋಷಣೆಯಾಗುತ್ತಲೇ ಮೊದಲು ಚರ್ಚೆ ಆಗಿದ್ದು ದಾವಣಗೆರೆ ನಗರದಲ್ಲಿರುವ ಹಂದಿಗಳನ್ನು ಹೇಗೆ ಶಿಪ್ಟ್  ಮಾಡುತ್ತೀರೆಂದು. ಅಧಿಕಾರಿಗಳು ಜನಪ್ರತಿನಿಧಿಗಳ ಪರಿಶ್ರಮದಿಂದ ಒಂದು ಕೋಟಿ ವೆಚ್ಚದಲ್ಲಿ  ಹೆಬ್ಬಾಳ ಬಳಿಯಲ್ಲಿ 7  ಎಕರೆ ಪ್ರದೇಶದಲ್ಲಿ  ವರಹಾ ಶಾಲೆ ನಿರ್ಮಾಣಕ್ಕೆ ದಾವಣಗೆರೆ ಮಹಾನಗರ ಪಾಲಿಕೆ ಮುಂದಾಯಿತು. ಅದರಂತೆ 7 ಎಕರೆ  ಸರ್ಕಾರಿ ಜಾಗವನ್ನು ನೋಡಿ ಒಂದು ಕೋಟಿ ವೆಚ್ಚದಲ್ಲಿ ವರಹಾ ಕೊಠಡಿ ಸುತ್ತಲು 13 ಕಾಂಪೋಂಡ್ ಗೋಡೆ ನಿರ್ಮಾಣವಾಯಿತು. ಆದ್ರೆ  ವರಹಾ ಶಾಲೆ ನಿರ್ಮಾಣವಾದ್ರು ನಗರದಲ್ಲಿರುವ ಹಂದಿಗಳನ್ನು ಸ್ಥಳಾಂತರ ಮಾಡಲು ಹಂದಿ ಮಾಲೀಕರು ಒಪ್ಪುತ್ತಿಲ್ಲ. ಸಭೆ ಕರೆದ್ರು ಬಂದು ಸಭೆಗಳಿಗೆ ಕೂರುತ್ತಿಲ್ಲ.
 
ದಾವಣಗೆರೆ ನಗರ  ಸ್ಮಾರ್ಟ್ ಸಿಟಿ ಆಗಿ ಅಭಿವೃದ್ಧಿ  ಹೊಂದಿದೆ.  ಹಂದಿ ಸ್ಥಳಾಂತರ ಮಾಡದಂತೆ ಹಂದಿ ಸಾಕಾಣಿಕೆದಾರರು ಹಾಗು ಪಾಲಿಕೆ ನಡುವೆ ಸಾಕಷ್ಟು ಹಗ್ಗ ಜಗ್ಗಾಟಕ್ಕೆ ನಡೆದಿತ್ತು.  ಈ  ಸಂಬಂಧ ಹಂದಿ ಸಾಕಾಣಿಕೆದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು, ಕೋರ್ಟ್ ಕೂಡ ಹಂದಿಗಳನ್ನು ಸ್ಥಳಾಂತರ ಮಾಡದಂತೆ ಸ್ಟೇ ನೀಡಿತ್ತು.  ಅದ್ರೇ ಇದೀಗ ಪಟ್ಟು ಬಿಡದೆ ಪಾಲಿಕೆ ಈ  ವರಹಾ ಶಾಲೆ ನಿರ್ಮಾಣ ಮಾಡಿದೆ. ಕೆಲವೆ ದಿನಗಳಲ್ಲಿ ಸಭೆ ಕರೆದು ಹಂದಿಗಳನ್ನು ಸ್ಥಳಾಂತರ ಮಾಡಲು ಮುಂದಾಗಿದೆ. ಕುಡಿಯುವ ನೀರಿನ‌ ವ್ಯವಸ್ಥೆ, ಹಂದಿ ಮಾಲೀಕರು ಅಲ್ಲಿಗೆ ತೆರಳಲು ರಸ್ತೆ, ಉಳಿದುಕೊಳ್ಳಲು ವಸತಿ, ಹಂದಿಗಳಿಗೆ ಹಸಿ ತರಕಾರಿ ತ್ಯಾಜ್ಯ  ಸೇರಿ ಅಗತ್ಯ ಸೌಲಭ್ಯ ಕಲ್ಪಿಸಲು ಕೊಡುವುದಾಗಿ ಪಾಲಿಕೆ  ಕಮಿಷನರ್  ರೇಣುಕಾ ತಿಳಿಸಿದ್ದಾರೆ.

Tap to resize

Latest Videos

ಮನುಷ್ಯರಾಗಿ ಹುಟ್ಟಿದ ನಮ್ಮದದೆಷ್ಟು ಬೇಜವಾಬ್ದಾರಿತನದ ವರ್ತನೆ ನೋಡಿ.. ವೈರಲ್ ವೀಡಿಯೋ

ಈ   ವರಹಾ ಶಾಲೆಗೆ  ಹೊಸಹಳ್ಳಿ ಗ್ರಾಮಸ್ಥರಿಂದ  ಭಾರೀ ವಿರೋಧ ವ್ಯಕ್ತವಾಗಿದೆ.  ಹಂದಿಗಳನ್ನು ಸಾಕಾಣಿಕೆ ಮಾಡುವುದರಿಂದ  ರೋಗರುಜುನೆಗಳು ಸೃಷ್ಢಿಯಾಗಲಿವೆ ಹಳ್ಳೀಗಳ ನೈರ್ಮಲ್ಯ ಹಾಳಾಗಲಿದೆ.  ರೈತರು ಜಮೀನಿನಲ್ಲಿ ಕೆಲಸ ಮಾಡುವುದು ಕಷ್ಟವಾಗಲಿದೆ   ಹತ್ತಿರದಲ್ಲಿ ಇರುವ ಆಶ್ರಯ ಕಾಲೋನಿ ಕೂಡ ಇದ್ದು ಮಕ್ಕಳು ಭಯದಲ್ಲೇ ಜೀವನ ಮಾಡ್ಬೇಕಾಗುತ್ತದೆ ಎಂದು ಅಪಸ್ವರ ತೆಗೆದಿದ್ದಾರೆ.

ಕುನೋದಿಂದ ಮತ್ತೊಂದು ಕೆಟ್ಟ ಸುದ್ದಿ, ಎರಡು ತಿಂಗಳ ಹೆಣ್ಣು ಚೀತಾ ಸಾವು!

ಪಾಲಿಕೆ ಹಂದಿ ಮಾಲೀಕರಿಗೆ ತರಬೇತಿ ನೀಡ್ಬೇಕೆಂದು ಕೋರ್ಟ್ ಆದೇಶಿಸಿದೆ ಆದ್ರೆ ಅಧಿಕಾರಿಗಳು ಕರೆದ ಸಭೆಗೆ  ಯಾರು ಕೂಡ ಹಾಜರಾಗಿಲ್ಲ.  ವರಹ ಶಾಲೆಯ ಕೆಲ ಕಾಮಗಾರಿ ಮುಗಿದಿದ್ದು, ಅನುದಾನ ಕಡಿಮೆ ಆಗಿದ್ದರಿಂದ ಕೆಲ ಕಾಮಗಾರಿ ನಿಂತಿದೆ. ಈ ಮಧ್ಯೆ ದಾವಣಗೆರೆ ಸ್ಮಾರ್ಟ್ ಸಿಟಿ ಹಂದಿಗಳ ಹಾವಳಿ ಕಪ್ಪು ಚುಕ್ಕೆಯಾಗಿದೆ. ನಗರದಲ್ಲಿ ಹಂದಿಗಳಿಂದ ಅಪಘಾತ ಸೇರಿದಂತೆ ಬೇರೆ ಬೇರೆ ರೀತಿಯ ಸಮಸ್ಯೆಗಳಿವೆ.  ಆದಷ್ಟು ಬೇಗ  ಹಂದಿಗಳ  ಕಿರಿಕಿರಿ ತಪ್ಪಿಸಬೇಕೆಂದು ಸಾರ್ವಜನಿಕರು ಮನವಿ ಮಾಡುತ್ತಿರುವುದು  ಮಾತ್ರ ಅರಣ್ಯರೋಧನವಾಗಿದೆ.

click me!