ಶಂಕಿತನ ಮೃತದೇಹಕ್ಕೆ ಗೌರವದ ಮೋಕ್ಷ ಕೊಟ್ಟ ಪಿಎಫ್‌ಐ ಕಾರ್ಯಕರ್ತರು

Suvarna News   | Asianet News
Published : Jul 19, 2020, 01:37 PM ISTUpdated : Jul 19, 2020, 01:48 PM IST
ಶಂಕಿತನ ಮೃತದೇಹಕ್ಕೆ ಗೌರವದ ಮೋಕ್ಷ ಕೊಟ್ಟ ಪಿಎಫ್‌ಐ ಕಾರ್ಯಕರ್ತರು

ಸಾರಾಂಶ

ಸೋಂಕಿತರ ಅಂತ್ಯಸಂಸ್ಕಾರಕ್ಕೆ ಹೆಗಲು‌ ಕೊಟ್ಟ ಪಿಎಫ್‌ಐ ಸಂಘಟನೆ ಶಂಕಿತನ ಮೃತದೇಹಕ್ಕೆ ಗೌರವದ ಮೋಕ್ಷ ಕೊಟ್ಟು ಮಾನವೀಯತೆ ಮೆರೆದಿದ್ದಾರೆ. ಮಂಡ್ಯದ ಕೆ. ಆರ್. ಪೇಟೆಯಲ್ಲಿ ಪಿಎಫ್‌ಐ ಕಾರ್ಯಕರ್ತರ ಮಾನವೀಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಮಂಡ್ಯ(ಜು.19): ಸೋಂಕಿತರ ಅಂತ್ಯಸಂಸ್ಕಾರಕ್ಕೆ ಹೆಗಲು‌ ಕೊಟ್ಟ ಪಿಎಫ್‌ಐ ಸಂಘಟನೆ ಶಂಕಿತನ ಮೃತದೇಹಕ್ಕೆ ಗೌರವದ ಮೋಕ್ಷ ಕೊಟ್ಟು ಮಾನವೀಯತೆ ಮೆರೆದಿದ್ದಾರೆ. ಮಂಡ್ಯದ ಕೆ. ಆರ್. ಪೇಟೆಯಲ್ಲಿ ಪಿಎಫ್‌ಐ ಕಾರ್ಯಕರ್ತರ ಮಾನವೀಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

"

ಮೊನ್ನೆ ಬೆಂಗಳೂರಿನಿಂದ ಬಂದಿದ್ದ ವ್ಯಕ್ತಿ ಉಸಿರಾಟದ ಸಮಸ್ಯೆಯಿಂದ ಸಾವನ್ನಪಿದ್ದರು. ಕೆಆರ್ ಪೇಟೆ ಕೃಷ್ಣಾಪುರ ಗ್ರಾಮದ 40 ವರ್ಷದ ವ್ಯಕ್ತಿ ಮೃತರು. ಕೊರೊನಾ ಶಂಕೆಯಿಂದ ಕೊವಿಡ್ ನಿಯಮಾನುಸಾರ ಅಂತ್ಯಕ್ರಿಯೆ ನಡೆಸಲಾಗಿದೆ.

28ರಿಂದ ಕೆಆರ್‌ಎಸ್‌, ಕಬಿನಿ ನಾಲೆಗಳಿಗೆ ನೀರು

ಅಂತ್ಯಕ್ರಿಯೆ ನಡೆಸಲು ತಾಲೂಕು ಆಡಳಿತ ಜೊತೆ ಕೈಜೋಡಿಸಿದ ಪಿಎಫ್‌ಐ ಪಿಪಿಇ ಕಿಟ್ ಧರಿಸಿ ಗೌರವಯುತ ಅಂತ್ಯಕ್ರಿಯೆ ನಡೆಸಿದ್ದಾರೆ. ಅಧಿಕಾರಿಗಳು, ಕಾರ್ಯಕರ್ತರು ಅಂತ್ಯಕ್ರಿಯೆ ಮುನ್ನ ಪಿಪಿಇ ಕಿಟ್ ಧರಿಸಿ ಅಂತ್ಯಕ್ರಿಯೆ ನೆರವೇರಿಸುವ ಬಗ್ಗೆ ತರಬೇತಿ ನೀಡಿದ್ದರು.

ವೈದ್ಯರಿಂದ ಪಿಎಫ್‌ಐ ಕಾರ್ಯಕರ್ತರಿಗೆ ತರಬೇತಿ ನೀಡಿದ್ದು, ಯಾವುದೇ ಧರ್ಮದ ವ್ಯಕ್ತಿ ಕೋವಿಡ್‌ನಿಂದ ಮೃತಪಟ್ಟರೇ ಆ ವ್ಯಕ್ತಿಯ ಅಂತ್ಯಕ್ರಿಯೆಯಲ್ಲಿ ಭಾಗಿಯಾಗುವುದಾಗಿ ಕಾರ್ಯಕರ್ತರು ನಿರ್ಧರಿಸಿದ್ದಾರೆ. ಪಿಎಫ್‌ಐ ಕಾರ್ಯಕರ್ತರ ಕಾರ್ಯಕ್ಕೆ ತಾಲೂಕಿನಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ.

PREV
click me!

Recommended Stories

ಕಡಿಮೆ ಬಿಯರ್ ಉತ್ಪಾದನೆಗೆ ಯುಬಿ ಕಂಪನಿಗೆ ವಿಧಿಸಿದ್ದ 29 ಕೋಟಿ ರೂ. ದಂಡ ರದ್ದು!
SSLC ಫಲಿತಾಂಶ ಪ್ರಗತಿ: ಮಧ್ಯರಾತ್ರಿ ವಿದ್ಯಾರ್ಥಿಗಳ ಮನೆ ಬಾಗಿಲಿಗೆ ಬಂದ BEO!