ಗ್ರಾಮೀಣ ಪ್ರದೇಶಗಳಲ್ಲಿ ರೈತರು ತಮ್ಮ ಜಮೀನುಗಳಲ್ಲಿ ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ಟ್ರ್ಯಾಕ್ಟರ್ ಅಥವಾ ಇತರೆ ಯಂತ್ರಗಳಿಗೆ ಡೀಸೆಲ್ ಪೆಟ್ರೋಲ್ ಖಾಲಿಯಾದರೆ ರೈತರು ಇರುವ ಜಾಗಕ್ಕೆ ಪೆಟ್ರೋಲ್ ಡೀಸಲ್ ಸರಬರಾಜು ಮಾಡಲಾಗುವುದು
ಶಿರಾ: ಗ್ರಾಮೀಣ ಪ್ರದೇಶಗಳಲ್ಲಿ ರೈತರು ತಮ್ಮ ಜಮೀನುಗಳಲ್ಲಿ ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ಟ್ರ್ಯಾಕ್ಟರ್ ಅಥವಾ ಇತರೆ ಯಂತ್ರಗಳಿಗೆ ಡೀಸೆಲ್ ಪೆಟ್ರೋಲ್ ಖಾಲಿಯಾದರೆ ರೈತರು ಇರುವ ಜಾಗಕ್ಕೆ ಪೆಟ್ರೋಲ್ ಡೀಸಲ್ ಸರಬರಾಜು ಮಾಡಲಾಗುವುದು ಎಂದು ಜಿಎ ಜೋಹರ್ ಫ್ಯೂಯಲ್ಸ್ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಪೆಟ್ರೋಲ್ ಬಂಕ್ ಮಾಲೀಕರಾದ ಸೈಯದ್ ಇಮ್ರಾನ್ ಹೇಳಿದರು.
ಶಿರಾ ನಗರದ ಮಧುಗಿರಿ ರಸ್ತೆಯಲ್ಲಿ ಜಿಎ ಜೋಹರ್ ಫ್ಯೂಯಲ್ಸ್ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್‌ಬಂಕ್ ಉದ್ಘಾಟಿಸಿ ಮಾತನಾಡಿದರು. ಶಿರಾ ಮಧುಗಿರಿ ರಸ್ತೆಯಲ್ಲಿ ಶಿರಾದಿಂದ ಬಡವನಹಳ್ಳಿಯವರೆಗೆ ಯಾವುದೇ ಪೆಟ್ರೋಲ್ ಬಂಕ್ ಇಲ್ಲ. ಈ ರಸ್ತೆಯಲ್ಲಿ ದಿನ ನಿತ್ಯ ಸಾವಿರಾರು ವಾಹನಗಳು ಓಡಾಡುತ್ತವೆ. ಆದರೆ, ಕೆಲವು ಸಮಯದಲ್ಲಿ ಪೆಟ್ರೊಲ್ ಡೀಸೆಲ್ ಖಾಲಿಯಾದರೆ ತಕ್ಷಣ ಸಿಗದೆ ಸಾರ್ವಜನಿಕರು ಪರದಾಡುತ್ತಿದ್ದರು. ಇದನ್ನು ಮನಗಂಡು ಈ ಪ್ರದೇಶದಲ್ಲಿ ಪೆಟ್ರೋಲ್ ಬಂಕ್ ತೆರೆಯಬೇಕೆಂದು ಮನಸ್ಸು ಮಾಡಿ. ಶಿರಾ ಮಧುಗಿರಿ ರಸ್ತೆಯಲ್ಲಿ ನೂತನ ಪೆಟ್ರೊಲ್ ಬಂಕ್ ಸ್ಥಾಪನೆ ಮಾಡಲಾಗಿದೆ ಎಂದರು.
ಸಲ್ಮಾನ್ ಮಹಮೂದ್, ಡಾ.ಅಬ್ಜಲ್ ರೆಹಮಾನ್, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಆರ್.ಉಗ್ರೇಶ್, ನಗರಸಭಾ ಸದಸ್ಯ ಜಿಶಾನ್ ಮಹಮೂದ್, ಬುರ್ಹಾನ್ ಮಹಮೂದ್, ಫಯಾಜ್, ಮೊಹಮ್ಮದ್ ಜಾಫರ್, ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ರೆಹಮತ್ ಉಲ್ಲಾ ಖಾನ್ ಸೇರಿದಂತೆ ಅನೇಕ ಮುಖಂಡರುಗಳು ಭಾಗವಹಿಸಿದ್ದರು.
ಶೀಘ್ರದಲ್ಲೇ ಇಳಿಯಲಿದೆ ಪೆಟ್ರೋಲ್ ಬೆಲೆ
ನವದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ (Crude Oil Price) ಇಳಿಕೆಯಾದ ಹಿನ್ನೆಲೆಯಲ್ಲಿ ದೇಶಾದ್ಯಂತ ಪೆಟ್ರೋಲ್ (Petrol) ಮತ್ತು ಡೀಸೆಲ್ (Diesel) ಬೆಲೆಯನ್ನು 40 ಪೈಸೆ ಕಡಿಮೆ ಮಾಡಲಾಗುತ್ತದೆ ಎಂದು ವರದಿಯಾಗಿತ್ತು. ಆದರೆ, ಇಮದು ಬೆಲೆ ಇಳಿಕೆಯಾಗಿಲ್ಲ. ಅಂತರಾಷ್ಟ್ರೀಯ (Global) ಕಚ್ಚಾ ತೈಲ ಬೆಲೆ ಇಳಿಕೆಯಾಗಿರುವುದರಿಂದ ಮತ್ತು ಸ್ವಲ್ಪ ಸಮಯದವರೆಗೆ ಸ್ಥಿರವಾಗಿರುವ ಕಾರಣ ಬೆಲೆಯಲ್ಲಿ ಇಳಿಕೆ ನಿರೀಕ್ಷಿಸಲಾಗಿತ್ತು. ಕಚ್ಚಾತೈಲ ಬೆಲೆ ಸುಮಾರು 95 ಡಾಲರ್‌ಗೆ ಇಳಿಕೆಯಾಗಿದೆ. ಬ್ರೆಂಟ್ ಕಚ್ಚಾ ತೈಲ ಸೋಮವಾರ ಬ್ಯಾರಲ್‌ಗೆ 95 ಡಾಲರ್‌ಗೆ ಬಿಕರಿಯಾಗಿದೆ. ಈ ಹಿನ್ನೆಲೆಯಲ್ಲಿ ಇಂಧನ ದರವನ್ನು ಕಡಿಮೆ ಮಾಡಲಾಗುತ್ತದೆ ಎಮದು ಹೇಳಲಾಗಿದೆ.
ರಷ್ಯಾ ಉಕ್ರೇನ್ ಯುದ್ಧದ (Russia - Ukraine War) ಪರಿಣಾಮವಾಗಿ ಕಚ್ಚಾ ತೈಲ ಬೆಲೆ ಬ್ಯಾರಲ್‌ಗೆ 139 ಡಾಲರ್‌ಗೆ ಏರಿಕೆಯಾಗಿತ್ತು. ಒಟ್ಟಾರೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ 2 ರೂ. ವರೆಗೆ ಇಳಿಕೆಯಾಗಬಹುದು ಎಂದು ಹೇಳಲಾಗುತ್ತಿದೆ. ಇದಕ್ಕೂ ಮೊದಲು ಏಪ್ರಿಲ್ 7ರಂದು ಮೊದಲ ಬಾರಿ ಪೆಟ್ರೋಲ್, ಡೀಸೆಲ್ ಬೆಲೆ ಇಳಿಸಲಾಗಿತ್ತು.
ಸಾಮಾನ್ಯ ಜನರಿಗೆ ಪರಿಹಾರ ನೀಡುವ ಉದ್ದೇಶದಿಂದ, ಭಾರತದಾದ್ಯಂತ ಇಂಧನ ಬೆಲೆಗಳು (Fuel Price) ಕಡಿಮೆಯಾಗುವ ಸಾಧ್ಯತೆಯಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಹಬ್ಬದ ಋತುವಿನಿಂದಾಗಿ ಆರ್ಥಿಕ ಚಟುವಟಿಕೆಗಳು ಚುರುಕುಗೊಳ್ಳುವ ಹಿನ್ನೆಲೆಯಲ್ಲಿ ಅಕ್ಟೋಬರ್ ಮೊದಲಾರ್ಧದಲ್ಲಿ ಭಾರತದ ಇಂಧನ ಮಾರಾಟ ಹೆಚ್ಚಾಗಿದೆ ಎಂದು ಪಿಟಿಐ ವರದಿ ಮಾಡಿದೆ. ಅಕ್ಟೋಬರ್ 2022 ರ ಮೊದಲಾರ್ಧದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟವು ವರ್ಷದಿಂದ ವರ್ಷಕ್ಕೆ (YoY) ಶೇಕಡಾ 22-26 ರಷ್ಟು ಜಿಗಿದಿದೆ ಮತ್ತು ತಿಂಗಳಿನಿಂದ ತಿಂಗಳಿಗೆ ಏರುತ್ತಿದೆ ಎಂದು ಪಿಟಿಐ ವರದಿ ತಿಳಿಸಿದೆ.
ಅಕ್ಟೋಬರ್ 1 ರಿಂದ 15, 2022 ರ ಅವಧಿಯಲ್ಲಿ ಪೆಟ್ರೋಲ್ ಮಾರಾಟವು ಶೇಕಡಾ 22.7 ರಿಂದ 1.28 ಮಿಲಿಯನ್ ಟನ್‌ಗಳಿಗೆ ಏರಿದೆ. 2021 ರಲ್ಲಿ 1.05 ಮಿಲಿಯನ್ ಟನ್ ಬಳಕೆಗೆ ಹೋಲಿಸಿದರೆ ಈ ಏರಿಕೆಯಾಗಿದೆ. ಇಂಧನ ಮಾರಾಟವು ಅಕ್ಟೋಬರ್ 2020ರ ಮೊದಲಾರ್ಧಕ್ಕಿಂತ ಶೇಕಡಾ 31ರಷ್ಟು ಹೆಚ್ಚಾಗಿದೆ ಮತ್ತು ಸಾಂಕ್ರಾಮಿಕ ಪೂರ್ವ ಅಕ್ಟೋಬರ್ 1 ರಿಂದ 15, 2019 ಕ್ಕಿಂತ ಶೇಕಡಾ 33.4 ಹೆಚ್ಚಾಗಿದೆ ಎಂದು ಪಿಟಿಐ ವರದಿ ಮಾಡಿದೆ. ಮಾರಾಟದ ಜೊತೆಗೆ, ಬೇಡಿಕೆಯು ಸೆಪ್ಟೆಂಬರ್ 2022 ರ ಮೊದಲಾರ್ಧಕ್ಕಿಂತ ಶೇಕಡಾ 1.3 ಹೆಚ್ಚಾಗಿದೆ.
ವರದಿಯ ಪ್ರಕಾರ, ಮುಂದಿನ ಐದು ದಿನಗಳವರೆಗೆ ತೈಲ ಬೆಲೆಯಲ್ಲಿ ಪ್ರತಿದಿನ 40 ಪೈಸೆ ಇಳಿಕೆಯಾಗುವ ಸಾಧ್ಯತೆಯಿದೆ. ಆ ಮೂಲಕ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಒಟ್ಟು 2 ರೂಪಾಯಿ ಇಳಿಕೆಯಾಗಲಿದೆ.
ಈ ಮಧ್ಯೆ, ಇಂಡಿಯನ್ ಆಯಿಲ್, ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಮತ್ತು ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್‌ನಂತಹ ಒಎಂಸಿಗಳು ಮಂಗಳವಾರದಿಂದ 5 ದಿನಗಳ ಕಾಲ ಬೆಲೆ ಇಳಿಕೆಯಾಗಲಿದೆ ಎಂದು ಹೇಳಲಾಗುತ್ತಿದೆ.