ಸರ್ಕಾರದ ಸಾಧನೆ ಬೂತ್‌ ಮಟ್ಟದಲ್ಲಿ ಮೆಚ್ಚಿಗೆ: ಮಂಜುನಾಥ್‌

By Kannadaprabha News  |  First Published Jan 28, 2023, 6:22 AM IST

ಜನಪರ ಅಭಿವೃದ್ಧಿಯಲ್ಲಿ ಹೆಚ್ಚು ಆಸಕ್ತಿವಹಿಸಿದ್ದು ಸರ್ಕಾರದ ಸಾಧನೆ ಮನೆಮನೆಗೆ ತಿಳಿಸುವ ಮೂಲಕ ಬೂತ್‌ ಮಟ್ಟದಲ್ಲಿ ಪಕ್ಷ ಸಂಘಟನೆಗೆ ಕೈಗೊಂಡಿರುವುದಾಗಿ ಮಧುಗಿರಿ ವಿಭಾಗದ ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಕೆ.ಮಂಜುನಾಥ್‌ ಹೇಳಿದರು. ಜಿಲ್ಲಾ ಹಾಗೂ ತಾಲೂಕು ಬಿಜೆಪಿಯಿಂದ ವಳ್ಳೂರು, ರಾಯಚರ್ಲು ಗ್ರಾಮದಲ್ಲಿ ಹಮಿಕೊಂಡಿದ್ದ ಬೂತ್‌ ಮಟ್ಟದ ವಿಜಯ ಸಂಕಲ್ಪ ಅಭಿಯಾನದಲ್ಲಿ ಭಾಗವಹಿಸಿ ಮಾತನಾಡಿದರು.


 , ವಳ್ಳೂರು:  ಜನಪರ ಅಭಿವೃದ್ಧಿಯಲ್ಲಿ ಹೆಚ್ಚು ಆಸಕ್ತಿವಹಿಸಿದ್ದು ಸರ್ಕಾರದ ಸಾಧನೆ ಮನೆಮನೆಗೆ ತಿಳಿಸುವ ಮೂಲಕ ಬೂತ್‌ ಮಟ್ಟದಲ್ಲಿ ಪಕ್ಷ ಸಂಘಟನೆಗೆ ಕೈಗೊಂಡಿರುವುದಾಗಿ ಮಧುಗಿರಿ ವಿಭಾಗದ ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಕೆ.ಮಂಜುನಾಥ್‌ ಹೇಳಿದರು. ಜಿಲ್ಲಾ ಹಾಗೂ ತಾಲೂಕು ಬಿಜೆಪಿಯಿಂದ ವಳ್ಳೂರು, ರಾಯಚರ್ಲು ಗ್ರಾಮದಲ್ಲಿ ಹಮಿಕೊಂಡಿದ್ದ ಬೂತ್‌ ಮಟ್ಟದ ವಿಜಯ ಸಂಕಲ್ಪ ಅಭಿಯಾನದಲ್ಲಿ ಭಾಗವಹಿಸಿ ಮಾತನಾಡಿದರು.

ಗ್ರಾಮೀಣ ಭಾಗದ ಬೂತ್‌ ಮಟ್ಟದಲ್ಲಿ ಪಕ್ಷ ಸಂಘಟನೆ ಕೈಗೊಂಡಿದ್ದು ಬಿಜೆಪಿ ಜನಪರ ಪ್ರಗತಿಯಲ್ಲಿ ಮುಂಚೂಣಿವಹಿಸಿದೆ. ಈ ಹಿನ್ನಲೆ ಬಿಜೆಪಿಯತ್ತ ಮತ ಪರಿವರ್ತನೆ ಜವಾಬ್ದಾರಿಯ ಹೊಣೆಹೊತ್ತಿದ್ದು ಮನೆ ಮನೆಗೆ ತೆರಳಿ ಗೋಡೆಗಳಿಗೆ ಸ್ಟಿಕ್ಕರ್‌ ಹಚ್ಚಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಸಾಧನೆ ವಿವರಿಸುವ ಮೂಲಕ ಮತ ಸಳೆಯುವತ್ತ ಹೆಜ್ಜೆ ಹಾಕಿರುವುದಾಗಿ ಹೇಳಿದರು.

Tap to resize

Latest Videos

ಈಗಾಗಲೇ ಕಳೆದ ಹಲವು ದಿನಗಳಿಂದ ತಾಲೂಕಿನ ಗ್ರಾಮೀಣ ಪ್ರದೇಶಗಳಿಗೆ ತೆರಳಿ ಬೂತ್‌ ಮಟ್ಟದ ಅಭಿಯಾನ ನಡೆಯುತ್ತಿದೆ. ತಾಲೂಕಿನ 246ಮತ ಘಟ್ಟೆಗಳ ಪೈಕಿ, ಈಗಾಗಲೇ 40ಮತಗಟ್ಟೆಗಳಲ್ಲಿ ವಿಜಯ ಸಂಕಲ್ಪ ಅಭಿಯಾನ ಪೂರೈಸಿದ್ದೇವೆ, ಯಶಸ್ವಿಯತ್ತ ಸಾಗುತ್ತಿದ್ದು ಇನ್ನೂ 31ರವರೆಗೆ ಈ ಅಭಿಯಾನ ಮಂದುವರೆಯಲಿದೆ. ಸರ್ಕಾರದ ಸಾಧನೆ ಬಗ್ಗೆ ಗ್ರಾಮೀಣ ಜನತೆಯಲ್ಲಿ ಅಪಾರ ಮೆಚ್ಚಿಗೆ ವ್ಯಕ್ತವಾಗಿದ್ದು ವಿಧಾನ ಸಭೆ ಚುನಾವಣೆಯಲ್ಲಿ ತಾಲೂಕಿನ ಬಿಜೆಪಿ ಜಯಭೇರಿ ಸಾಧಿಸುವುದು ಶತಸಿದ್ದ, ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದರು.

ತಾಲೂಕು ಬಿಜೆಪಿ ಹಿಂದುಳಿದ ವರ್ಗಗಳ ಪ್ರಧಾನ ಕಾರ್ಯದರ್ಶಿ ದೊಡ್ಡಹಳ್ಳಿ ಆಶೋಕ್‌ ಮಾತನಾಡಿ, ಸರ್ಕಾರದ ಜನಪರ ಸಾಧನೆಗಳ ಹಿನ್ನಲೆ ತಾಲೂಕಿನಲ್ಲಿ ಬಿಜೆಪಿ ಸಂಘಟನೆ ಪ್ರಬಲವಾಗಿದೆ.

ವಿಧಾನ ಸಭೆ ಟಿಕೆಟ್‌ ಸ್ಥಳೀಯರಿಗೆ ಸಿಗಲಿದ್ದು, ಜನಾಶೀರ್ವಾದ ಮೇರೆಗೆ, ಈ ಭಾರಿ ತಾಲೂಕಿನಲ್ಲಿ ಬಿಜೆಪಿ ಖಾತೆ ತೆರೆಯುವುದು ಖಚಿತ ಎಂದರು.

ತಾಲೂಕು ಬಿಜೆಪಿ ಅಧ್ಯಕ್ಷ ರವಿಶಂಕರನಾಯಕ್‌, ಹಿರಿಯ ಮುಖಂಡರಾದ ಡಾ. ಜಿ.ವೆಂಕಟರಾಮಯ್ಯ ಪಕ್ಷ ಸಂಘಟನೆ ಕುರಿತು ಮಾತನಾಡಿದ್ದು, ಎಸ್‌ಸಿ ಘಟಕದ ಜಿಲ್ಲಾ ಬಿಜೆಪಿ ಎಸ್‌ಸಿ ಘಟಕದ ಅಧ್ಯಕ್ಷ ಮಾರುತಿ ಗಂಗಹನುಮಯ್ಯ, ಜಿಲ್ಲಾ ಕಾರ್ಯದರ್ಶಿ ಪಾವಗಡ ರವಿ, ಸ್ಥಳೀಯ ಬಿಜೆಪಿ ಪ್ರಬಲ ಅಭ್ಯರ್ಥಿ ಆಕಾಂಕ್ಷಿಗಳಾದ ಕೃಷ್ಣನಾಯಕ್‌, ಕೊತ್ತೂರು ಹನುಮಂತರಾಯಪ್ಪ ಹಾಗೂ ಜಿಲ್ಲಾ ಕಚೇರಿ ಕಾರ್ಯದರ್ಶಿ ಸುರೇಶ್‌ ಸ್ಥಳೀಯ ಮುಖಂಡರಾದ ಮದ್ದಿಬಂಡೆ ಕೃಷ್ಣಮೂರ್ತಿ, ಕೋಟೇಶ್ವರೆಡ್ಡಿ, ಕ್ಯಾತಗಾನಕರೆ ಶ್ರೀನಿವಾಸ್‌, ವಕ್ತಾರ ಕಡಪಲಕರೆ ನವೀನ್‌, ಕಡಮಲಕುಂಟೆ ರಾಮಾಂಜಿನಪ್ಪ,ಯುವಮೊರ್ಚಾ ಅಧ್ಯಕ್ಷ ಮಧುಪಾಳೇಗಾರ, ಬುಗಡೂರು ಗಿರೀಶ್‌, ಜಾಲೋಡು ಮಹಲಿಂಗಪ್ಪ ಗಜೇಂದ್ರ, ಬೂತ್‌ ಕಮಿಟಿ ಅಧ್ಯಕ್ಷ ಪಾತನ್ನ ಹಾಗೂ ಇತರೆ ಆನೇಕ ಮಂದಿ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.

click me!