ಭಾರೀ ದುಬಾರಿಯಾದ ಬೆನ್ನಲ್ಲೇ 5ಲೀ. ಪೆಟ್ರೋಲ್‌ ಗಿಫ್ಟ್

Kannadaprabha News   | Asianet News
Published : Feb 22, 2021, 07:50 AM IST
ಭಾರೀ ದುಬಾರಿಯಾದ ಬೆನ್ನಲ್ಲೇ 5ಲೀ. ಪೆಟ್ರೋಲ್‌ ಗಿಫ್ಟ್

ಸಾರಾಂಶ

ಪೆಟ್ರೋಲ್ ಡೀಸೆಲ್ ದರ ದಿನದಿನವೂ ಗಗನಕ್ಕೆ ಏರುತ್ತಿದೆ. ಕೊಳ್ಳುವುದು ಭಾರೀ ದುಬಾರಿಯಾಗಿದ್ದು ಗ್ರಾಹನ ಜೇಬು ಕಾಲಿಯಾಗುತ್ತಿದೆ. ಇದೇ ಸಮದರ್ಬದಲ್ಲಿ ಪೆಟ್ರೋಲ್ ಗಿಫ್ಟ್ ಕೊಡುವುದು ಸುದ್ದಿಯಾಗುತ್ತಿದೆ. 

ಮೈಸೂರು (ಫೆ.22): ಮಹಾನಗರಪಾಲಿಕೆ ಸದಸ್ಯರೊಬ್ಬರು ನೂತನ ವಧುವರರಿಗೆ ಪೆಟ್ರೋಲ್‌ ಗಿಫ್ಟ್‌ ನೀಡುವ ಮೂಲಕ ಶುಭ ಹಾರೈಸಿದ್ದಾರೆ. ಈ ಮೂಲಕ ತೈಲ ಬೆಲೆ ಏರಿಕೆಯನ್ನು ಖಂಡಿಸಿದ್ದಾರೆ. 

ಮೈಸೂರು ಮಹಾನಗರ ಪಾಲಿಕೆ ಸದಸ್ಯೆ ಶೋಭಾ ಸುನಿಲ್‌ ಪೆಟ್ರೋಲ್‌ ಗಿಫ್ಟ್‌ ನೀಡಿದವರಾಗಿದ್ದಾರೆ. ಮೈಸೂರು ನಗರದ ಕಲ್ಯಾಣ ಮಂಟಪವೊಂದರಲ್ಲಿ ನಡೆದ ವಿವಾಹ ಕಾರ್ಯಕ್ರಮಕ್ಕೆ ಶೋಭಾ ಹೋಗಿದ್ದರು. 

ಪೆಟ್ರೋಲ್‌ ಬೆಲೆ ಇಳಿಕೆ : ಸಚಿವೆ ನಿರ್ಮಲಾ ಪ್ರಸ್ತಾಪ ..

ಈ ಸಂದರ್ಭದಲ್ಲಿ ದಂಪತಿಗಳಿಗೆ 5 ಲೀಟರ್‌ ಪೆಟ್ರೋಲ್‌ ಉಡುಗೊರೆಯಾಗಿ ನೀಡಿದ್ದಾರೆ. ಬಳಿಕ ಪ್ರತಿಕ್ರಿಯೆ ನೀಡಿದ ಶೋಭಾ ಸುನಿಲ್‌, ಚಿನ್ನ, ಬೆಳ್ಳಿಗಿಂತ ಪೆಟ್ರೋಲ್‌ ಬೆಲೆ ದುಬಾರಿಯಾಗಿದೆ. ಹೀಗಾಗಿ, ಪೆಟ್ರೋಲ್‌ ಗಿಫ್ಟ್ ನೀಡಿರುವುದಾಗಿ ಹೇಳಿದ್ದಾರೆ.

PREV
click me!

Recommended Stories

ಮೈಸೂರು-ಕೇರಳ ನಡುವೆ 'ನಕಲಿ ಲೈಸೆನ್ಸ್' ಮಾಫಿಯಾ: ಆರ್‌ಟಿಒ ಅಧಿಕಾರಿಗಳ ಅಮಾನತು; ವಿಜಿಲೆನ್ಸ್ ತನಿಖೆಗೆ ಶಿಫಾರಸು!
ಲಕ್ಕುಂಡಿ ಉತ್ಖನನ: ಮನೆಯೊಳಗೆ ಪತ್ತೆಯಾಯ್ತು 10ನೇ ಶತಮಾನದ ಈಶ್ವರ ದೇಗುಲ; ಪುರಾತತ್ವ ಇಲಾಖೆ ಫುಲ್ ಖುಷ್!