'ವಿಕಲಚೇತನರಿಗೆ ಸರ್ಕಾರದ ಅನುಕೂಲ ದೊರಕಬೇಕು'

By Kannadaprabha News  |  First Published Oct 21, 2023, 7:32 AM IST

ವಿಕಲಚೇತನರಿಗೆ ಸರ್ಕಾರಿ ಸೌಲಭ್ಯ ಸಮರ್ಪಕವಾಗಿ ದೊರಕಬೇಕು. ಅವರು ಕೂಡ ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಎಂಬ ಗುರಿಯೊಂದಿಗೆ ಶೇ. ೫ರ ಅನುದಾನದಲ್ಲಿ ವಿಶೇಷ ಚೇತನರಿಗೆ ಸೌಲಭ್ಯ ಹಂಚಿಕೆ ಮಾಡಿದ್ದೇವೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಾರದಮ್ಮ ಹನುಮಂತರಾಯಪ್ಪ ಹೇಳಿದರು.


 ಶಿರಾ :  ವಿಕಲಚೇತನರಿಗೆ ಸರ್ಕಾರಿ ಸೌಲಭ್ಯ ಸಮರ್ಪಕವಾಗಿ ದೊರಕಬೇಕು. ಅವರು ಕೂಡ ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಎಂಬ ಗುರಿಯೊಂದಿಗೆ ಶೇ. ೫ರ ಅನುದಾನದಲ್ಲಿ ವಿಶೇಷ ಚೇತನರಿಗೆ ಸೌಲಭ್ಯ ಹಂಚಿಕೆ ಮಾಡಿದ್ದೇವೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಾರದಮ್ಮ ಹನುಮಂತರಾಯಪ್ಪ ಹೇಳಿದರು.

ಅವರು ತಾಲೂಕಿನ ಬೇವಿನಹಳ್ಳಿ ಗ್ರಾಮ ಪಂಚಾಯತಿ ಆವರಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ೧೫ನೇ ಹಣಕಾಸು ಯೋಜನೆಯಡಿ ಶೇ ೫ರ ಅಂಗವಿಕಲರ ಅನುದಾನದಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯ 60 ಜನ ವಿಶೇಷ ಚೇತನರಿಗೆ ವೈಯಕ್ತಿಕ ಸೌಲಭ್ಯ ವಿತರಣೆ ಮಾಡಿ ಮಾತನಾಡಿದರು.

Latest Videos

undefined

ಮಾಜಿ ಗ್ರಾ.ಪಂ. ಅಧ್ಯಕ್ಷ ಸಿದ್ದಾಪುರ ಶ್ರೀನಿವಾಸ್ ಮಾತನಾಡಿ, ಬೇವಿನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 120 ಜನ ವಿಕಲ ಚೇತನರಿದ್ದು, ಕಳೆದ ಸಾಲಿನಲ್ಲಿ 60 ಜನರಿಗೆ ಸೌಲಭ್ಯ ಹಂಚಿಕೆ ಮಾಡಿ ಉಳಿದ ೬೦ ಜನರಿಗೆ ಈ ಸಾಲಿನಲ್ಲಿ ವೈಯಕ್ತಿಕ ಸೌಲಭ್ಯಗಳನ್ನು ಹಂಚಿಕೆ ಮಾಡಿದ್ದೇವೆ. ಗ್ರಾಮ ಪಂಚಾಯತಿ ಅನುದಾನ ಸಮರ್ಪಕವಾಗಿ ಬಳಕೆಯಾಗಿತ್ತಿರುವುದು ಹರ್ಷ ತಂದಿದೆ ಎಂದರು.

ಈ ಸಂದರ್ಭದಲ್ಲಿ ಗ್ರಾ.ಪಂ ಉಪಾಧ್ಯಕ್ಷೆ ಮಹಾಲಕ್ಷ್ಮಿ, ಮಾಜಿ ಉಪಾಧ್ಯಕ್ಷೆ ಜೆ.ಮಧು, ಸದಸ್ಯರಾದ ಶ್ರೀರಾಮ್, ಕವಿತಾ ಗೋವಿಂದರಾಜು, ಕೃಷ್ಣಪ್ಪ, ಜಗನ್ನಾಥ್, ಮಮತಾ ಸಿದ್ದೇಶ್, ಪಿಡಿಒ ಕನಕಪ್ಪ, ಬಿಲ್ ಕಲೆಕ್ಟರ್ ಬಾಬು, ವಿಆರ್ ಡಬ್ಲ್ಯೂ ನಾಗರಾಜು ಹಾಜರಿದ್ದರು.

ಜೀವಜಲ ರಕ್ಷಿಸಬೇಕು

ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗೆ ಸರ್ಕಾರ ನೀಡುವಂತಹ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಗ್ರಾಮಗಳಲ್ಲಿ ಸ್ವಚ್ಛತೆ ಕಾಪಾಡುವುದರ ಜತೆಗೆ ಕುಡಿಯುವ ನೀರಿನ ಸಮಸ್ಯೆ ಬಾರದಂತೆ ಹೆಚ್ಚು ಕ್ರಿಯಾಶೀಲರಾಗಿ ಕೆಲಸ ಮಾಡಿದಾಗ ಜನ ಪ್ರತಿನಿಧಿ ಸ್ಥಾನಕ್ಕೆ ಹೆಚ್ಚು ಅರ್ಥ ಬರಲಿದೆ. ಸಾರ್ವಜನಿಕರು ನೀರನ್ನು ವ್ಯರ್ಥವಾಗದಂತೆ ನೋಡಿಕೊಂಡು ಮಿತವಾಗಿ ಬಳಸಿ ಜೀವಜಲ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ ಎಂದರು.

click me!