ಜಮೀನಿಗೆ ನೀರು ಬಿಡುವ ವಿಷಯಕ್ಕೆ ವಾಗ್ವಾದ: ಯುವಕನ ಬರ್ಬರ ಕೊಲೆ

Kannadaprabha News   | Asianet News
Published : Apr 11, 2020, 12:08 PM IST
ಜಮೀನಿಗೆ ನೀರು ಬಿಡುವ ವಿಷಯಕ್ಕೆ ವಾಗ್ವಾದ: ಯುವಕನ ಬರ್ಬರ ಕೊಲೆ

ಸಾರಾಂಶ

ಹೊಲದಲ್ಲಿ ನೀರು ಬಿಡುವ ವಿಷಯಕ್ಕೆ ಜಗಳ| ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಇಂಗಳಗಿ ಗ್ರಾಮದಲ್ಲಿ ಯುವಕನ ಹತ್ಯೆ|ಈ ಸಂಬಂಧ ಯಮಕನಮರಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು|  

ಯಮಕನಮರಡಿ(ಏ.11): ಹೊಲದಲ್ಲಿ ನೀರು ಬಿಡುವ ವಿಷಯಕ್ಕೆ ಸಂಬಂಧಪಟ್ಟಂತೆ ವಾದ ವಿವಾದ ನಡೆದು ಯುವಕನ ಕೊಲೆಯಾದ ಘಟನೆ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಇಂಗಳಗಿ ಗ್ರಾಮದಲ್ಲಿ ಗುರುವಾರ ನಡೆದಿದೆ.

ಇಂಗಳಗಿ ಗ್ರಾಮದ ಸದ್ದಾಮಹುಸೇನ ಇಸ್ಮಾಯಿಲ್‌ ಅಂಕಲಿ(26) ಕೊಲೆಯಾದ ವ್ಯಕ್ತಿ. ಇಂಗಳಗಿ ಗ್ರಾಮದ ಗಜಬರಸಾಬ ಗುಲಾಬಸಾಬ ಮುಲ್ತಾನಿ ಇತನು ಜಮೀನದಲ್ಲಿ ಪೈಪ್‌ಲೈನ್‌ದಿಂದ ತನ್ನ ಹೊಲಕ್ಕೆ ನೀರು ತೆಗೆದುಕೊಳ್ಳುತ್ತಿದ್ದು, ಅದನ್ನು ಸದ್ದಾಮಹುಸೇನ ಇಸ್ಮಾಯಿಲ್‌ ಅಂಕಲಿ ಬಂದ್‌ ಮಾಡಿದ್ದಕ್ಕಾಗಿ ಸಿಟ್ಟಾಗಿ ಗುರುವಾರ ಸದ್ದಾಮಹುಸೇನ ಇಸ್ಮಾಯಿಲ್‌ ಅಂಕಲಿ ಇತನಿಗೆ ಗೊತ್ತಿಲ್ಲದಂತೆ, ಪೈಪ್‌ಲೈಲ್‌ ನೀರು ತನ್ನ ಹೊಲಕ್ಕೆ ಬಿಟ್ಟುಕೊಂಡಿದ್ದನು. 

ಬೆಳಗಾವಿ: ಲಾಕ್‌ಡೌನ್‌ ಮಧ್ಯೆಯೇ ಗುತ್ತಿದಾರನಿಂದ ಕಾಮಗಾರಿ

ಅದನ್ನು ಸದ್ದಾಮಸಹುಸೇನ ನೋಡಿ ವಿಚಾರಿಸಿದಕ್ಕೆ ಗಜಬರಸಾಬ ಗುಲಾಬಸಾಬ ಮುಲ್ತಾನಿ ಈತನು ಅವಾಚ್ಯ ಶಬ್ದಗಳಿಂದ ಬೈದು ಸದ್ದಾಮನಿಗೆ ಕೊಲೆ ಮಾಡುವ ಉದ್ದೇಶದಿಂದ ತನ್ನ ಕೈಯಲ್ಲಿದ್ದ ಕೂರುಪಿಯನ್ನು ತೆಗೆದುಕೊಂಡು ಸದ್ದಾಂಹುಸೇನನನ್ನು ಹೊಡೆದಿದ್ದಾನೆ. ತೀವ್ರ ಗಾಯಗೊಂಡಿದ್ದ ಈತನನ್ನು ಆಸ್ಪತ್ರೆಗೆ ಸಾಗಿಸುತ್ತಿರುವ ವೇಳೆ  ಮೃತಪಟ್ಟಿದ್ದಾನೆ. ಈ ಕುರಿತು ಯಮಕನಮರಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

PREV
click me!

Recommended Stories

ಮೈಸೂರು, ಮಂಡ್ಯದಲ್ಲಿ ಬಾಲ್ಯ ವಿವಾಹಕ್ಕೆ ಗಣನೀಯ ಇಳಿಕೆ, ಸರ್ಕಾರದಿಂದ ಸಿಕ್ಕಿತು ನೆಮ್ಮದಿಯ ಸುದ್ದಿ
ಬೆಂಗಳೂರು: ತಿಂಡಿ ಎಸೆದು ಪಾತ್ರೆಯಿಂದ ಹಲ್ಲೆ ಮಾಡಿದ ಪುಂಡರಿಗೆ ಕುದಿಯುವ ಎಣ್ಣೆ ಎರಚಿದ ವ್ಯಾಪಾರಿ!