ಸಂಬಳ ಕೇಳಿದ್ದೇ ತಪ್ಪಾಯ್ತಾ? ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಂದ ಮಾಲೀಕ!

ಸಂಬಳ ಕೇಳಿದ ಚಾಲಕನ ಕೊಂದ ಮಾಲೀಕ| ವೇತನಕ್ಕಾಗಿ ಮಾಲೀಕನೊಂದಿಗೆ ಚಾಲಕನ ಜಗಳ, ಅವಾಚ್ಯ ಶಬ್ದಗಳಿಂದ ನಿಂದನೆ| ಶೆಡ್‌ಲ್ಲಿ ಮಲಗಿದ್ದ ಚಾಲಕ ಮೇಲೆ ಸೈಜ್‌ಗಲ್ಲು ಎತ್ತಿಹಾಕಿ ಹತ್ಯೆ| ಶವ ಸಾಗಿಸಲು ಆಗದಿದ್ದಾಗ ಪೆಟ್ರೋಲ್‌ ಸುರಿದು ಬೆಂಕಿ ಇಟ್ಟ ಮಾಲೀಕ| 


ಬೆಂಗಳೂರು(ಮಾ.19): ಇತ್ತೀಚೆಗೆ ಕಲ್ಕೆರೆಯಲ್ಲಿ ನಡೆದಿದ್ದ ಚಾಲಕ ಶ್ರೀನಿವಾಸ್‌ ಕೊಲೆ ಪ್ರಕರಣ ಸಂಬಂಧ ಆತ ಕೆಲಸ ಮಾಡುತ್ತಿದ್ದ ಸಂಸ್ಥೆ ಮಾಲೀಕ ಸೇರಿದಂತೆ ಇಬ್ಬರನ್ನು ರಾಮಮೂರ್ತಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕೈವಾರದ ಕೃಷ್ಣ ಅಲಿಯಾಸ್‌ ಟೊರಿ ಕೃಷ್ಣ ಹಾಗೂ ಆತನ ಸ್ನೇಹಿತ ಹಲಸೂರಿನ ಕೃಷ್ಣ ಅಲಿಯಾಸ್‌ ಮಾಯಕೃಷ್ಣ ಬಂಧಿತರಾಗಿದ್ದು, ಆರೋಪಿಗಳಿಂದ ಆಟೋ, ಬೈಕ್‌ ಸೇರಿದಂತೆ ಇನ್ನಿತರ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

Latest Videos

ಪ್ರಿಯತಮನೊಂದಿಗಿನ ಕಾಮನೆ ತೀರಿಸಿಕೊಳ್ಳಲು ಗಂಡನ ರುಂಡ, ಕೈಕಾಲು ಲಕ್ಷ್ಮಣ ತೀರ್ಥದಲ್ಲಿ!

ಟೊರಿ ಕೃಷ್ಣನ ಮಾಲೀಕತ್ವದ ತರುಣ್‌ ಪ್ಯಾಕ​ರ್ಸ್‌ ಆ್ಯಂಡ್‌ ಮೂವ​ರ್ಸ್‌ ಕಂಪನಿಯಲ್ಲಿ ಶ್ರೀನಿವಾಸ್‌ ವಾಹನ ಚಾಲಕನಾಗಿದ್ದ. ಮಾ.10ರಂದು ವೇತನ ವಿಚಾರವಾಗಿ ಚಾಲಕ ಮತ್ತು ಮಾಲೀಕನ ಮಧ್ಯೆ ಜಗಳವಾಗಿತ್ತು. ಇದೇ ಕಾರಣಕ್ಕೆ ಚಾಲಕನನ್ನು ಕೊಂದಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಟೋರಿ ಕೃಷ್ಣ ಕ್ರಿಮಿನಲ್‌ ಹಿನ್ನೆಲೆಯುಳ್ಳವನಾಗಿದ್ದು, ಆತನ ವಿರುದ್ಧ ಎರಡು ಕೊಲೆ ಪ್ರಕರಣಗಳು ದಾಖಲಾಗಿವೆ. ಹಲವು ದಿನಗಳಿಂದ ಕೆ.ಆರ್‌.ಪುರ ಸಮೀಪದ ಕಲ್ಕೆರೆ ಮಾದಪ್ಪ ಲೇಔಟ್‌ನಲ್ಲಿ ಕೃಷ್ಣ, ತರುಣ್‌ ಪ್ಯಾಕ​ರ್ಸ್‌ ಆ್ಯಂಡ್‌ ಮೂವ​ರ್ಸ್‌ ಕಂಪನಿ ನಡೆಸುತ್ತಿದ್ದ. ಈ ಸಂಸ್ಥೆಗೆ ಶ್ರೀನಿವಾಸ್‌ನನ್ನು ಚಾಲಕನಾಗಿ ನೇಮಿಸಿಕೊಳ್ಳಲಾಗಿತ್ತು. ಆದರೆ ಸರಿಯಾಗಿ ಸಂಬಳ ಕೊಡದ ಕಾರಣಕ್ಕೆ ಮಾಲೀಕನ ವಿರುದ್ಧ ಶ್ರೀನಿವಾಸ್‌ ಅಸಮಾಧಾನಗೊಂಡಿದ್ದು, ಇದೇ ಕಾರಣಕ್ಕೆ ಅವರ ಮಧ್ಯೆ ಜಗಳವಾಗುತ್ತಿದ್ದವು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮುಖ ಜಜ್ಜಿದ ಸ್ಥಿತಿಯಲ್ಲಿ ಮಹಿ​ಳೆಯ ಬೆತ್ತ​ಲೆ ಶವ ಪತ್ತೆ: ಅತ್ಯಾ​ಚಾರ ಎಸಗಿ ಕೊಲೆ?

ಮಾ.9ರಂದು ಮಧ್ಯಾಹ್ನ 1ರಿಂದ ರಾತ್ರಿ 11ರವರೆಗೆ ಚಾಲಕ ಶ್ರೀನಿವಾಸ್‌ ಮಾಲೀಕ ಕೃಷ್ಣನ ಮೊಬೈಲ್‌ಗೆ ನಿರಂತರವಾಗಿ ಕರೆ ಮಾಡಿ ವೇತನ ನೀಡುವಂತೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. ಇದರಿಂದ ಕೆರಳಿದ ಕೃಷ್ಣ, ಕೂಡಲೇ ಮಾದಪ್ಪ ಲೇಔಟ್‌ನಲ್ಲಿದ್ದ ತರುಣ್‌ ಪ್ಯಾಕ​ರ್ಸ್‌ ಆ್ಯಂಡ್‌ ಮೂವ​ರ್ಸ್‌ ಕಚೇರಿ ಶೆಡ್‌ಗೆ ಬಂದಿದ್ದಾನೆ. ಆ ಶೆಡ್‌ನಲ್ಲಿ ನೆಲೆಸಿದ್ದ ಶ್ರೀನಿವಾಸ್‌ ಜತೆ ಮಾಲೀಕ ಜಟಾಪಟಿ ನಡೆಸಿದ್ದಾನೆ. ಕೆಲ ಹೊತ್ತಿನ ಬಳಿಕ ಶ್ರೀನಿವಾಸ್‌ ನಿದ್ರೆ ಜಾರಿದಾಗ ತಲೆ ಮೇಲೆ ಮೂರು ಬಾರಿ ಸೈಜು ಕಲ್ಲು ಎತ್ತಿ ಹಾಕಿ ಕೊಂದಿದ್ದಾನೆ. ಇದಾದ ನಂತರ ತನ್ನ ಗೆಳೆಯನಿಗೆ ಕರೆ ಮಾಡಿ ಕರೆಸಿಕೊಂಡ ಕೃಷ್ಣ, ಶೆಡ್‌ನಿಂದ ಮೃತದೇಹವನ್ನು ರಾಂಪುರ ಕೆರೆ ಬಳಿಗೆ ಸಾಗಿಸಲು ಯತ್ನಿಸಿದ್ದಾರೆ. ಆದರೆ ಅವರ ಯತ್ನ ವಿಫಲವಾಗಿದೆ.
ಕೊನೆಗೆ ಆರೋಪಿಗಳು, ಮರು ದಿನ ರಾತ್ರಿ 11.30ಕ್ಕೆ ಮತ್ತೆ ಶೆಡ್‌ಗೆ ಬಂದು ಪೆಟ್ರೋಲ್‌ ಸುರಿದು ಮೃತದೇಹಕ್ಕೆ ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾರೆ. ಈ ಕೃತ್ಯದ ಬಗ್ಗೆ ತನಿಖೆ ಕೈಗೆತ್ತಿಕೊಂಡ ಇನ್‌ಸ್ಪೆಕ್ಟರ್‌ ಸತೀಶ್‌ ಅವರು, ಮೃತ ಕೆಲಸ ಮಾಡುತ್ತಿದ್ದ ಕಂಪನಿ ಮಾಲಿಕನ ಹಿನ್ನೆಲೆ ಕೆದಕಿದ್ದಾರೆ. ಆತನ ಕ್ರಿಮಿನಲ್‌ ಹಿನ್ನೆಲೆ ತಿಳಿದ ಅವರು, ಕೂಡಲೇ ಕೃಷ್ಣನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯ ಬಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
 

click me!