ಮದ್ಯ ಕುಡಿಯಲು ದುಡ್ಡು ಕೊಡದ ತಂದೆಯನ್ನೇ ಕೊಡಲಿಯಿಂದ ಕೊಚ್ಚಿ ಕೊಂದ ಮಗ| ಮದ್ಯ ವ್ಯಸನಿಯಾಗಿದ್ದ ಸಂಜೀವ ತೊರವಿ (27) ತಂದೆಯನ್ನೇ ಕೊಲೆ ಮಾಡಿದ ಆರೋಪಿ| ತಂದೆ ಅಣ್ಣಪ್ಪ ತೊರವಿ ಅವರಿಂದ 1 ಸಾವಿರ ಹಣ ಪಡೆದು ದಿನ ಪೂರ್ತಿ ಕುಡಿದು ಮನೆಗೆ ಬಂದಿದ್ದ ಮಗ| ಪತ್ನಿಗೆ ಮನಬಂದಂತೆ ಹೊಡೆಯತೊಡಗಿದ್ದಾನೆ| ಅದನ್ನು ನೋಡಿದ ತಂದೆ ಹೊಡೆಯುವುದನ್ನು ಬಿಡಿಸಿದ್ದಾನೆ| ನಂತರ ಮತ್ತೆ ಮದ್ಯ ಕುಡಿಯಲು 500 ಕೊಡುವಂತೆ ತಂದೆ ಬಳಿ ಕೇಳಿದ್ದಾನೆ| ನನ್ನ ಹತ್ತಿರ ಹಣ ಇಲ್ಲ ಬೇಕಾದರೆ ನನ್ನ ಜೀವ ತಗೋ ಎಂದು ತಲೆ ಬಾಗಿ ನಿಂತ ತಂದ ಕೊಡಲಿ ತೆಗೆದುಕೊಂಡು ಕೊಚ್ಚಿ ತಂದೆಯ ರುಂಡವನ್ನೇ ಕಡಿದ ಮಗ|
ಚಡಚಣ[ಅ.4]: ಮದ್ಯ ಕುಡಿಯಲು 500 ರೂ. ಕೊಡದ್ದಕ್ಕೆ ಮಗನೊಬ್ಬ ತನ್ನ ಸ್ವಂತ ತಂದೆಯನ್ನೇ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ವಿಜಯಪುರ ಜಿಲ್ಲೆಯ ಭೀಮಾತೀರದ ಟಾಕಳಿ ಗ್ರಾಮದ ತೋಟದ ಮನೆಯಲ್ಲಿ ಬುಧವಾರ ರಾತ್ರಿ ಸಂಭವಿಸಿದೆ.
ಕೊಲೆಗೀಡಾದ ವ್ಯಕ್ತಿಯನ್ನು ಅಣ್ಣಪ್ಪ ತೊರವಿ (55) ಎಂದು ಗುರುತಿಸಲಾಗಿದೆ . ಮದ್ಯ ವ್ಯಸನಿಯಾಗಿದ್ದ ಸಂಜೀವ ತೊರವಿ (27) ತಂದೆಯನ್ನೇ ಕೊಲೆ ಮಾಡಿದ ಆರೋಪಿ.ಯಾಗಿದ್ದಾನೆ. ಬುಧವಾರ ಬೆಳಗ್ಗೆ ತಂದೆ ಅಣ್ಣಪ್ಪ ತೊರವಿ ಅವರಿಂದ 1 ಸಾವಿರ ಹಣ ಪಡೆದು ದಿನ ಪೂರ್ತಿ ಕುಡಿದು ಮನೆಗೆ ಬಂದಿದ್ದಾನೆ.
undefined
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಪತ್ನಿಗೆ ಮನಬಂದಂತೆ ಹೊಡೆಯತೊಡಗಿದ್ದಾನೆ. ಅದನ್ನು ನೋಡಿದ ತಂದೆ ಹೊಡೆಯುವುದನ್ನು ಬಿಡಿಸಿದ್ದಾನೆ. ನಂತರ ಮತ್ತೆ ಮದ್ಯ ಕುಡಿಯಲು 500 ಕೊಡುವಂತೆ ತಂದೆ ಬಳಿ ಕೇಳಿದ್ದಾನೆ. ನನ್ನ ಹತ್ತಿರ ಹಣ ಇಲ್ಲ. ಬೇಕಾದರೆ ನನ್ನ ಜೀವ ತಗೋ ಎಂದು ತಲೆ ಬಾಗಿಸಿ ನಿಂತಾಗ ಕೊಡಲಿ ತೆಗೆದುಕೊಂಡು ಕೊಚ್ಚಿ ತಂದೆಯ ರುಂಡವನ್ನೇ ಕಡಿದಿದ್ದಾನೆ.
ಈ ಸಂಬಂಧ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಚಡಚಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.