ತೀರ್ಥಹಳ್ಳಿ: ತೋಟದಲ್ಲಿ ಹೆಜ್ಜೇನು ಕಚ್ಚಿ ವ್ಯಕ್ತಿ ಸಾವು

Suvarna News   | Asianet News
Published : Dec 28, 2020, 01:17 PM IST
ತೀರ್ಥಹಳ್ಳಿ: ತೋಟದಲ್ಲಿ ಹೆಜ್ಜೇನು ಕಚ್ಚಿ ವ್ಯಕ್ತಿ ಸಾವು

ಸಾರಾಂಶ

ಹೆಜ್ಜೇನು ಕಚ್ಚಿ ವ್ಯಕ್ತಿ ಸಾವು| ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆ ಸಿಂಗನ ಬಿದರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದ ಘಟನೆ| ವ್ಯಕ್ತಿಯ ಮೇಲೆ ದಾಳಿ ಮಾಡಿದ 50 ಕ್ಕೂ ಹೆಚ್ಚು ಹೆಜ್ಜೇನು| 

ಶಿವಮೊಗ್ಗ(ಡಿ.28):  ಹುಲಿ ಕಡಜಲು ಹುಳ (ಹೆಜ್ಜೇನು) ಕಚ್ಚಿ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆ ಸಿಂಗನ ಬಿದರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿನ್ನೆ(ಭಾನುವಾರ) ನಡೆದಿದೆ. ಕೀಗಡಿ ಜಯರಾಮ ಗೌಡರ ಪುತ್ರ ಅಖಿಲೇಶ್(39) ಹೆಜ್ಜೇನು ಕಚ್ಚಿ ಸಾವನ್ನಪ್ಪಿದ ವ್ಯಕ್ತಿಯಾಗಿದ್ದಾರೆ. 

ಬೆಂಗಳೂರಿನಲ್ಲಿದ್ದ ಅಖಿಲೇಶ್ ಕೊರೋನಾ ಹಿನ್ನೆಲೆ ಊರಿಗೆ ಮರಳಿದ್ದರು. ಭಾನುವಾರ ಮನೆಯಲ್ಲಿ ಕೊನೆ ತೆಗೆಯುವ ವೇಳೆ ತೋಟಕ್ಕೆ ಹೋಗಿದ್ದಾಗ ಹುಳಗಳು ಕಚ್ಚಿದೆ. ಸುಮಾರು 50 ಕ್ಕೂ ಹೆಚ್ಚು ಹೆಜ್ಜೇನು ಅಖಲೇಶ್‌ರನ್ನ ಕಚ್ಚಿದೆ. ಅಸ್ಪತ್ರೆಗೆ ಸಾಗಿಸುವ ವೇಳೆ ಅಖಿಲೇಶ್ ಮೃತಪಟ್ಟಿದ್ದಾರೆ. 

ಹೆಜ್ಜೇನು ದಾಳಿ​ಯಿಂದ ಮಕ್ಕಳು, ಶಿಕ್ಷಕರನ್ನು ರಕ್ಷಿ​ಸಿದ ಬಾಲ​ಕಿ!

ಅಖಿಲೇಶ್ ವಿವಾಹಿತರಾಗಿದ್ದು, ಪತ್ನಿ, 2 ತಿಂಗಳ ಪುಟ್ಟ ಮಗು ಇದೆ ಎಂದು ತಿಳಿದು ಬಂದಿದೆ.  ತೀರ್ಥಹಳ್ಳಿ ತಾಲೂಕಿನ ಮಹಿಷಿ ಮತ್ತು ಬಳಗಟ್ಟೆ ಬಳಿ ಜೇನು ಹುಳಗಳು ಕಚ್ಚಿ ಸಾವನ್ನಪ್ಪಿದ ಘಟನೆ ಈ ಹಿಂದೆ ಕೂಡ ನಡೆದಿತ್ತು.
 

PREV
click me!

Recommended Stories

ಬಳ್ಳಾರಿ ಲೂಟಿ, 'ಡ್ಯಾಡಿ' ರಾಜಕೀಯ: ಎದುರಾಳಿಗಳ ವಿರುದ್ಧ ಡೈಲಾಗ್ ಹೊಡೆದು ಶಾಸಕ ಪ್ರದೀಪ್ ಈಶ್ವರ್ ವಾಗ್ದಾಳಿ!
ಗದಗ: ಬಸ್ ರಶ್ ಇದೆ ಹತ್ತಬೇಡಿ ಎಂದಿದ್ದಕ್ಕೆ ಕುಡುಕನ ಕಿರಿಕ್; '50 ಮಂದಿಗಷ್ಟೇ ಅವಕಾಶ ಎಲ್ಲರನ್ನ ಕೆಳಗಿಳಿಸಿ' ಎಂದ ಭೂಪ!