* ನಿರಂತರ ಮಳೆಯಿಂದ ಸಂತಸಗೊಂಡ ರೈತರು
* ಹದವಾದ ಮಳೆಯಿಂದ ಬೆಳೆ ಬೆಳವಣಿಗೆಗೆ ಪೂರಕ
* ಜಿಟಿಜಿಟಿ ಮಳೆಯಿಂದ ತಂಪಾದ ವಾತಾವರಣ
ಹಾವೇರಿ(ಜು.19): ಜಿಲ್ಲಾದ್ಯಂತ ಭಾನುವಾರ ದಿನವಿಡೀ ಜಿಟಿಜಿಟಿ ಮಳೆಯಾಗುತ್ತಿದೆ. ನಿರಂತರವಾಗಿ ಬೀಳುತ್ತಿರುವ ಮಳೆಯಿಂದ ಗೋಡೆ ಕುಸಿದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟಘಟನೆ ರಾಣಿಬೆನ್ನೂರು ತಾಲೂಕಿನ ಕೋಡಿಯಾಲ ಗ್ರಾಮದಲ್ಲಿ ಸಂಭವಿಸಿದೆ.
ನದಿಹರಳಹಳ್ಳಿ ಗ್ರಾಮದ ಆಂಜನೇಯಪ್ಪ ಮೇಗಳಮನಿ (29) ಮೃತಪಟ್ಟ ವ್ಯಕ್ತಿ. ಗೌಂಡಿ ಕೆಲಸ ಮಾಡುತ್ತಿದ್ದ ಈತ ಕೋಡಿಯಾಲ ಗ್ರಾಮದಲ್ಲಿ ಮನೆಯೊಂದನ್ನು ಕಟ್ಟುತ್ತಿದ್ದ. ಈ ವೇಳೆ ನಿರಂತರ ಮಳೆಯಿಂದ ಶಿಥಿಲಗೊಂಡಿದ್ದ ಪಕ್ಕದ ಮನೆಯ ಗೋಡೆ ಕುಸಿದು ಬಿದ್ದಿದೆ. ಹರಿಹರದ ಆಸ್ಪತ್ರೆಗೆ ಚಿಕಿತ್ಸೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಶನಿವಾರ ಮೃತಪಟ್ಟಿದ್ದಾನೆ.
ರಾಜ್ಯದಲ್ಲಿ ಇನ್ನೂ ಎರಡು ದಿನ ಭಾರೀ ಮಳೆ: ‘ರೆಡ್ ಅಲರ್ಟ್’ ಘೋಷಣೆ
ಜಿಲ್ಲೆಯಲ್ಲಿ ಶನಿವಾರ ಸ್ವಲ್ಪ ವಿರಾಮ ನೀಡಿದ್ದ ಮಳೆ ಭಾನುವಾರ ಬೆಳಗ್ಗೆಯಿಂದ ನಿರಂತರವಾಗಿ ಜಿಟಿಜಿಟಿಯಾಗಿ ಸುರಿಯುತ್ತಿದೆ. ಇದರಿಂದ ರಸ್ತೆಗಳು ರಾಡಿಮಯವಾಗಿವೆ. ವಾತಾವರಣ ಸಂಪೂರ್ಣ ತಂಪಾಗಿದ್ದು, ಚಳಿ ಗಾಳಿಯೂ ಬೀಸುತ್ತಿದೆ. ಒಂದು ವಾರದಿಂದ ಬೀಳುತ್ತಿರುವ ಮಳೆಯಿಂದ ರೈತರು ಸಂತಸಗೊಂಡಿದ್ದಾರೆ. ಬಹುತೇಕ ಬಿತ್ತನೆ ಕಾರ್ಯ ಪೂರ್ಣಗೊಂಡಿದ್ದು, ಹದವಾದ ಮಳೆಯಿಂದ ಬೆಳೆ ಬೆಳವಣಿಗೆಗೆ ಪೂರಕವಾಗಿದೆ.