ವಿದ್ಯಾರ್ಥಿಗಳು ಜೀವನದಲ್ಲಿ ಕನಸು ಕಟ್ಟಿಕೊಂಡು, ಗುರಿ ಮುಟ್ಟಿದಾಗ ಮಾತ್ರ ಮುಂದಿನ ನಿಮ್ಮ ಬದುಕಿನಲ್ಲಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ವಿದ್ಯಾರ್ಥಿಗಳಿಗೆ ಕರೆ ನೀಡಿದರು
ಮಧುಗಿರಿ : ವಿದ್ಯಾರ್ಥಿಗಳು ಜೀವನದಲ್ಲಿ ಕನಸು ಕಟ್ಟಿಕೊಂಡು, ಗುರಿ ಮುಟ್ಟಿದಾಗ ಮಾತ್ರ ಮುಂದಿನ ನಿಮ್ಮ ಬದುಕಿನಲ್ಲಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಬುಧವಾರ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕೆ.ಎನ್.ಆರ್.ಸಭಾಂಗಣದಲ್ಲಿ ಏರ್ಪಡಿಸಿದ್ದ ಎನ್‌ಎಸ್‌ಎಸ್, ಕ್ರೀಡೆ, ಸ್ಕೌಟ್ ಅಂಡ್ ಗೈಡ್‌್ಸ ಮತ್ತು ಶೈಕ್ಷಣಿಕ
undefined
ಚಟುವಟಿಕೆಗಳ ಸಮಾರೋಪ ಸಮಾರಂಭ ಹಾಗೂ 2023-24ನೇ ಸಾಲಿನ ಪ್ರಥಮ ವರ್ಷದ ಸ್ನಾತಕ, ಸ್ನಾತಕೋತ್ತರ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಉದ್ಘಾಟಿಸಿ
ಮಾತನಾಡಿದರು.
ನಾಳೆ ನಾವು ಏನಾಗಬೇಕೆಂಬ ಕನಸನ್ನು ಕಾಣಬೇಕು, ಅದನ್ನು ನನಸಾಗಿಸಿಕೊಳ್ಳಲು ಸಾಕಷ್ಟುಪರಿಶ್ರಮ ಅಧ್ಯಯನ ಅಗತ್ಯ. ಇದಕ್ಕಾಗಿ ಸಮಾಜಮುಖಿ ಚಿಂತನೆ ಬೆಳೆಸಿಕೊಳ್ಳಬೇಕು. ಅಬ್ದುಲ್ ಕಲಾಂ ಅವರು ಹೇಳಿದಂತೆ ಕನಸು ಕಂಡಾಗ ತಾವು ಗುರಿ ಮುಟ್ಟಲು ಸಾಧ್ಯ. ಉನ್ನತ ಶಿಕ್ಷಣ ಪಡೆದು ಉಜ್ವಲ ಭವಿಷ್ಯ ರೂಪಿಸಿಕೊಳ್ಳುವ ಜೊತೆಗೆ ಹೆತ್ತ ತಂದೆ-ತಾಯಿಗೆ ವಿದ್ಯೆ ಕಲಿಸಿದ ಗುರು -ಹಿರಿಯರಿಗೆ ಹಾಗೂ ಹುಟ್ಟಿದ ಗ್ರಾಮಕ್ಕೆ ಕೀರ್ತಿ ತರಬೇಕು. ಎಲ್ಲರೂ ತಮ್ಮ ಸ್ವಯಂ ಬುದ್ದಿಶಕ್ತಿಯಿಂದ ಮುಂದೆ ಬರಬೇಕು. ಖಾಸಗಿ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಇಂಗ್ಲಿಷ್ ಭಾಷೆಯಲ್ಲಿ ಮಾತನಾಡುವುದನ್ನು ಕಂಡು ತಮ್ಮಲ್ಲಿ ಕೀಳರಿಮೆ ಬಿಟ್ಟು ಅದನ್ನು ಸವಾಲಾಗಿ ಸ್ವೀಕರಿಸಬೇಕು. ವಿದ್ಯೆ ಸಾಧಕನ ಸ್ವತ್ತೆ ವಿನಹ ಸೋಮಾರಿಯ ಸ್ವತ್ತಲ್ಲ ಎಂದರು.
ವಿದ್ಯಾರ್ಥಿಗಳು ಕಾಲೇಜಿಗೆ ಗೈರಾಗದೆ ಪ್ರತಿದಿನ ಪಾಠ ಪ್ರವಚನ ಕೇಳಿದಾಗ ಮಾತ್ರ ಪರೀಕ್ಷೆ ಬರೆಯಲು ಸುಲಭವಾಗಲಿದೆ. ನಿರಂತರ 15 ದಿನ ಗೈರಾದ ವಿದ್ಯಾರ್ಥಿಗಳಿಗೆ ಮತ್ತೆ ಶಿಕ್ಷಕರು ಪುನರ್ ಮನನ ಮಾಡುವಂತೆ ಸೂಚಿಸಿದರು.
ನಂತರ ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪಧೆæರ್‍ಗಳಲ್ಲಿ ವಿಜೇತರಾದ 75 ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಮತ್ತು ಪದಕ ವಿತರಿಸಲಾಯಿತು. ಪ್ರಥಮ ಬಿಕಾಂ ವಿದ್ಯಾರ್ಥಿ ತೇಜಸ್ ಪೆನ್ಸಿಲ್‌ನಿಂದ ಸಹಕಾರ ಸಚಿವ ಕೆ.ಎನ್.ರಾಜಣ್ಣನವರ ಭಾವಚಿತ್ರ ಬಿಡಿಸಿರುವ ಪೋಟೋವನ್ನು ಇದೇ ವೇಳೆ ಸಚಿವರಿಗೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಈಜು ಪಟು ವಿಶ್ವಾಸ್, ಚಲನಚಿತ್ರ ಯುವ ನಿರ್ದೇಶಕ ರಾಜಕುಮಾರ್, ಹಿರಿಯ ಸಾಹಿತಿ ಪ್ರೊ.ಮಲನಮೂರ್ತಿ, ಡಿಸಿಸಿ ಬ್ಯಾಂಕ್
ನಿರ್ದೇಶಕ ಬಿ.ನಾಗೇಶ್‌ಬಾಬು, ಮೂರ್ತಿ, ಕಾಲೇಜು ಪ್ರಾಂಶುಪಾಲ ಡಿ.ಎಸ್.ಮುನೀಂದ್ರಕುಮಾರ್, ಪುರಸಭೆ ಮಾಜಿ ಅಧ್ಯಕ್ಷ ಎಂ.ಕೆ.ನಂಜುಂಡಯ್ಯ, ಕೆಎಂಎಫ್
ನಿರ್ದೇಶಕ ಮೈದನಹಳ್ಲಿ ಕಾಂತರಾಜು, ಮುಖಂಡರಾದ ತುಂಗೋಟಿ ರಾಮಣ್ಣ, ಸಿದ್ದಗಂಗಪ್ಪ, ಉಪನ್ಯಾಸಕ ನಾಗಭೂಷಣ್, ಮಹಾಲಿಂಗೇಶ್, ಡಾ.ಅಶೋಕ್, ಡಾ.ಬಂದ್ರೇಹಳ್ಳಿ ಕುಮಾರ್, ಪುರುಷೋತ್ತಮ , ಪ್ರೊ.ದಿವಾಕರ್, ಕೆ.ವೇದಲಕ್ಷ್ಮೇ, ರೇಖಾ ಹಾಗೂ ವಿದ್ಯಾರ್ಥಿಗಳು ಇದ್ದರು.
ಯಾರಿಗೂ ಐಶ್ವರ್ಯ ನೀಡಲು ಸಾಧ್ಯವಿಲ್ಲ, ಅದಕ್ಕಾಗಿ ವಿದ್ಯಾರ್ಥಿಗಳಿಗೆ ಮೊದಲು ಶಿಕ್ಷಣ ನೀಡಿದರೆ ಅವರು ಮುಂದೆ ಎಲ್ಲವನ್ನು ಪಡೆದುಕೊಳ್ಳುತ್ತಾರೆ. ರಾಜ್ಯದ ಯಾವುದೇ ತಾಲೂಕಿನಲ್ಲಿ ಸರ್ಕಾರದ ಹಣದಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ವಿತರಿಸಿಲ್ಲ. ಆದರೆ ನಾನು ನನ್ನ ಕ್ಷೇತ್ರದಲ್ಲಿ ವಿತರಣೆ ಮಾಡುವ ಮೂಲಕ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ಶ್ರಮಿಸಿದ್ದೇನೆ.
ಕೆ.ಎನ್.ರಾಜಣ್ಣ ಸಹಕಾರ ಸಚಿವ