ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಅಬಕಾರಿ ಇಲಾಖೆ ಸಂಪೂರ್ಣವಾಗಿ ನಿಷ್ಕಿ್ರಯಗೊಂಡಿದ್ದು, ಮನೆ ಮನೆಗಳಲ್ಲಿ ಅಕ್ರಮವಾಗಿ ಮಾರಾಟ ಮಾಡುತ್ತಿರುವ ಮದ್ಯಕ್ಕೆ ಕಡಿವಾಣ ಹಾಕದಿದ್ದರೆ, ಸಂಬಂಧಪಟ್ಟಅಧಿಕಾರಿಗಳ ಮೇಲೆ ಶಿಸ್ತು ಕ್ರಮಕ್ಕೆ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆಯುವುದಾಗಿ ಶಾಸಕ ಬಿ. ಸುರೇಶಗೌಡ ಎಚ್ಚರಿಕೆ ನೀಡಿದ್ದಾರೆ.
ತುಮಕೂರು : ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಅಬಕಾರಿ ಇಲಾಖೆ ಸಂಪೂರ್ಣವಾಗಿ ನಿಷ್ಕಿ್ರಯಗೊಂಡಿದ್ದು, ಮನೆ ಮನೆಗಳಲ್ಲಿ ಅಕ್ರಮವಾಗಿ ಮಾರಾಟ ಮಾಡುತ್ತಿರುವ ಮದ್ಯಕ್ಕೆ ಕಡಿವಾಣ ಹಾಕದಿದ್ದರೆ, ಸಂಬಂಧಪಟ್ಟಅಧಿಕಾರಿಗಳ ಮೇಲೆ ಶಿಸ್ತು ಕ್ರಮಕ್ಕೆ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆಯುವುದಾಗಿ ಶಾಸಕ ಬಿ. ಸುರೇಶಗೌಡ ಎಚ್ಚರಿಕೆ ನೀಡಿದ್ದಾರೆ.
ನಗರದ ತಾ.ಪಂ.ಸಭಾಂಗಣದಲ್ಲಿ ಶಾಸಕ ಅಧ್ಯಕ್ಷತೆಯಲ್ಲಿ ನಡೆದ 2023-24 ನೇ ಸಾಲಿನ ಮೊದಲ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿದರು. ಗಂಗೋನಹಳ್ಳಿಯಲ್ಲಿ ಯುವಕನೊಬ್ಬ ಮದ್ಯ ಕುಡಿದ ಅಮಲಿನಲ್ಲಿ ಕೆರೆಗೆ ಹಾರಿದ್ದಾನೆ. ಪ್ರತಿ ಗ್ರಾಮದ ಹತ್ತಾರು ಮನೆಗಳಲ್ಲಿ ಮದ್ಯ ಮಾರಾಟ ಯಾವುದೇ ಎಗ್ಗಿಲ್ಲದೆ ನಡೆಯುತ್ತಿದೆ. ಕೆಲವೊಂದು ಮದ್ಯದಂಗಡಿ ಮಾಲೀಕರೆ ತಮ್ಮ ವ್ಯಾಪಾರ ಹೆಚ್ಚಿಸಿಕೊಳ್ಳಲು ಮನೆ ಮನೆಗಳಲ್ಲಿ ಮದ್ಯ ಮಾರಾಟಕ್ಕೆ ಪೋ›ತ್ಸಾಹ ನೀಡುತ್ತಿದ್ದಾರೆ ಎಂಬ ಆರೋಪವಿದೆ. ಕೂಡಲೇ ಆರೋಪವಿರುವ ಹಳ್ಳಿಗಳ ಮೇಲೆ ದಾಳಿ ಮಾಡಿ, ಕ್ರಮ ಕೈಗೊಳ್ಳದಿದ್ದರೆ ಮಹಿಳೆಯರೊಂದಿಗೆ ನಿಮ್ಮ ಕಚೇರಿ ಎದುರು ಧರಣಿ ನಡೆಸಲಾಗುವುದು ಎಂದು ಶಾಸಕರು ಎಚ್ಚರಿಸಿದರು.
ಅಬಕಾರಿ ನಿಯಮದ ಪ್ರಕಾರ ಸಿ.ಎಂ.07 ಮತ್ತು 09 ಅಂಗಡಿಗಳನ್ನು ಇಂತಿಷ್ಟುಗಂಟೆಯಿಂದ ತೆರೆಯಬೇಕೆಂಬ ನಿಯಮವಿದ್ದರೂ ಬೆಳಗ್ಗೆ 7 ಗಂಟೆಗೆ ತೆರೆಯಲಾಗುತ್ತಿದೆ. ಅಲ್ಲದೆ ಗ್ರಾಮೀಣ ಭಾಗದಲ್ಲಿ ರೈತಾಪಿ ಜನರಿಗೆ ಕುಡಿಯಲು ಮದ್ಯ ಸಾಲ ನೀಡಿ, ದುಬಾರಿ ಹಣ ವಸೂಲಿ ಮಾಡಿರುವ ಕ್ರಮಗಳಿವೆ. ನಿಮ್ಮ ಇಲಾಖೆಗೆ ಜನರ ಪ್ರಾಣಕ್ಕಿಂತ ಆದಾಯಕ್ಕಷ್ಟೇ ಸಿಮಿತವಾಗಿದೆ. ಹಾಗಾಗಿ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕದಿದ್ದರೆ ಇಲ್ಲಿನ ಅಧಿಕಾರಿಗಳ ವಿರುದ್ಧ ನೇರ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆಯುತ್ತೇನೆ. ಅಲ್ಲದೆ ಸದನದಲ್ಲಿಯೂ ಪ್ರಸ್ತಾಪಿಸುತ್ತೇನೆ ಎಂದರು.
ಎಸ್‌ಸಿಪಿ, ಟಿಎಸ್‌ಪಿ ಕಾಮಗಾರಿ ಪೂರ್ಣಗೊಳಿಸಲು ತಾಕೀತು:
ಲೋಕೋಪಯೋಗಿ, ಪಂಚಾಯತ್ ರಾಜ್ ಎಂಜಿನಿಯರಿಂಗ್ ಸೇರಿದಂತೆ ವಿವಿಧ ಇಲಾಖೆಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನಿರ್ಮಾಣ ಕೆಲಸದಲ್ಲಿ ತೊಡಗಿರುವ ಏಜೆನ್ಸಿಗಳು ಮುಂದಿನ ಮೂರು ತಿಂಗಳ ಒಳಗೆ ಎಸ್‌ಸಿಪಿ, ಟಿಎಸ್‌ಪಿ ಯೋಜನೆಯಡಿ ತೆಗೆದುಕೊಂಡಿರುವ ಕಾಮಗಾರಿಗಳನ್ನು ಪೂರ್ಣ ಗೊಳಿಸಬೇಕು ಎಂದು ತಾಕೀತು ಮಾಡಿದ ಅವರು, ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ, ಗುತ್ತಿಗೆದಾರರಿಂದ ಒಳ್ಳೆಯ ಕಾಮಗಾರಿ ಮಾಡಿಸಲು ಸೂಚನೆ ನೀಡಿದ ಶಾಸಕರು, ಶಾಲಾ ಕೊಠಡಿ, ಶೌಚಾಲಯ, ಸಂಪರ್ಕ ರಸ್ತೆ ಕಾಮಗಾರಿಗಳನ್ನು ಮುಂದಿನ ಮೂರು ತಿಂಗಳ ಒಳಗೆ ಪೂರ್ಣಗೊಳಿಸಿ, ಜಮೀನಿನ ತಕರಾರು ಇರುವ ಕಡೆ, ಕಾಮಗಾರಿ ಬದಲಾವಣೆಗೆ ಪ್ರಸ್ತಾವನೆ ಸಲ್ಲಿಸಿದರೆ ಅಗತ್ಯ ಮಾರ್ಪಾಡು ಮಾಡಿಕೊಡಲು ಸಿದ್ಧ ಎಂದು ಸಲಹೆ ನೀಡಿದರು.
ಮಳೆ ಕೊರತೆಯಿಂದ ಬಿತ್ತನೆ ಕುಂಠಿತ:
ಕೃಷಿ ಇಲಾಖೆಯ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿ, ವಾರ್ಷಿಕ ಸರಾಸರಿ ಮಳೆ ವಾಡಿಕೆ ಮಳೆಗಿಂತ ಹೆಚ್ಚಿದ್ದರೂ ಆಗಸ್ಟ್ ತಿಂಗಳಲ್ಲಿ ಆಗಬೇಕಿದ್ದ ವಾಡಿಕೆ ಮಳೆ 117 ಎಂ.ಎಂ ಬದಲು ಕೇವಲ 07 ಎಂ.ಎಂ ಮಾತ್ರ ಆಗಿದೆ. ಇದರಿಂದ ತಾಲೂಕಿನ ಒಟ್ಟು 21 ಸಾವಿರ ಹೆಕ್ಟೇರ್ ರಾಗಿ ಬಿತ್ತನೆ ಪ್ರದೇಶದಲ್ಲಿ 13 ಸಾವಿರ ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆಯಾಗಿದೆ. ರಾಗಿ ಬಿತ್ತನೆಗೆ ಮುಂದಿನ 10-12 ದಿನಗಳು ಮಾತ್ರ ಕಾಲಾವಕಾಶವಿದ್ದು, ಈ ವೇಳೆ ಮಳೆ ಬಂದರೆ ಬಿತ್ತನೆ ಪ್ರಮಾಣ ಹೆಚ್ಚಲಿದೆ. ತಾಲೂಕಿನ ರಸಗೊಬ್ಬರ, ಬಿತ್ತನೆ ಬೀಜದ ಕೊರತೆಯಿಲ್ಲ. ಈಗಾಗಲೇ ಸಾಕಷ್ಟುಪ್ರಮಾಣದಲ್ಲಿ ರೈತರಿಗೆ ಹಂಚಿಕೆಯನ್ನು ಮಾಡಲಾಗಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್‌ಗೆ ಸಂಬಂಧಿಸಿದಂತೆ ಹೆಸರು ನೋಂದಾಯಿಸಿದ 33453 ಜನರಲ್ಲಿ 6297 ಜನರು ಇಕೆವೈಸಿ ಮಾಡಿಸಿಲ್ಲ. ಅವರು ಮಾಡಿಸಿದರೆ ಅವರ ಖಾತೆಗೆ ಹಣ ಸಂದಾಯವಾಗಲಿದೆ ಎಂದರು.
ಅನುದಾನ ನೀಡುವುದು ಬ್ಯಾಂಕಲ್ಲಿ ಇಡಕ್ಕಲ್ಲ:
ಸರ್ಕಾರ ಸಮಾಜ ಕಲ್ಯಾಣ ಇಲಾಖೆಗೆ 2014-15ನೇ ಸಾಲಿನಲ್ಲಿ 3 ಅಂಬೇಡ್ಕರ್ ಭವನಗಳ ನಿರ್ಮಾಣಕ್ಕೆ ತಲಾ 5 ಲಕ್ಷ ರು. ಗಳ ಅನುದಾನ ನೀಡಿದೆ. ಕಟ್ಟಡ ನಿರ್ಮಾಣಕ್ಕೆ ಅನುದಾನ ಸಾಲದು ಎಂಬ ಕಾರಣಕ್ಕೆ ಇದುವರೆಗೂ ಕಾಮಗಾರಿ ಕೈಗೊಂಡಿಲ್ಲ. ಹಣವನ್ನು ಡಿ.ಸಿ ಮತ್ತು ಜೆಡಿ ಸಮಾಜ ಕಲ್ಯಾಣ ಹೆಸರಿನಲ್ಲಿ ಠೇವಣಿ ಇಡಲಾಗಿದೆ. ಅನುದಾನ ನೀಡುವುದು ಹಣವನ್ನು ಬ್ಯಾಂಕಿನಲ್ಲಿ ಇಟ್ಟು ಬಡ್ಡಿ ಪಡೆಯುವುದಕ್ಕಲ್ಲ. ಇದೊಂದು ದೊಡ್ಡ ದಂಧೆಯಾಗಿದೆ. ಅನುದಾನ ಸಾಲದು ಎಂದಾದರೆ ಹೆಚ್ಚುವರಿ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಬೇಕು. ಇಲ್ಲವೆ ವಾಪಸ್ ಕಳುಹಿಸಬೇಕು. ಹೀಗೆ ಬ್ಯಾಂಕಿನಲ್ಲಿ ಇಟ್ಟರೆ ಉದ್ದೇಶ ಈಡೇರುತ್ತದೆಯೇ ಎಂದು ಪ್ರಶ್ನಿಸಿದ ಶಾಸಕರು, ಈ ಸಂಬಂಧ ಇಲಾಖೆಯೊಂದಿಗೆ ಚರ್ಚಿಸುವುದಾಗಿ ತಿಳಿಸಿದರು.
ಸಭೆಯಲ್ಲಿ ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕರು, ಇಒ ಹರ್ಷಕುಮಾರ್ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
ಬಾಕ್ಸ್
ಪ್ರತಿ ಗ್ರಾಪಂಗೆ ಒಂದು ಹೈಸ್ಕೂಲ್: ಶಾಸಕ
ಗ್ರಾಮಾಂತರ ಕ್ಷೇತ್ರದ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಹೈಸ್ಕೂಲ್ ಇರಬೇಕೆಂಬುದು ನಮ್ಮ ಕನಸು. ಗೂಳೂರು, ಹೊನ್ನುಡಿಕೆ, ಮಲ್ಲಸಂದ್ರ, ದೊಡ್ಡನಾರವಂಗಲ, ಸೋರೆಕುಂಟೆ, ನೆಲ್‌ಹಾಳ್, ತಿಮ್ಮರಾಜಯನಹಳ್ಳಿ, ಬುಗುಡನ ಹಳ್ಳಿ, ಸೀತಕಲ್ಲು ಸೇರಿದಂತೆ ಹತ್ತು ಗ್ರಾಮಪಂಚಾಯಿತಿ ಹೆಡ್‌ಕ್ವಾಟರ್‌ನಲ್ಲಿ ಸರ್ಕಾರಿ ಹೈಸ್ಕೂಲ್‌ಗಳಿಲ್ಲ. ಈಗಾಗಲೇ ಈ ಜಾಗಗಳಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿದ್ದು, ಇಲ್ಲಿಯೇ ಹೈಸ್ಕೂಲ್ ಪ್ರಾರಂಭಿಸಲು ಶಿಕ್ಷಣ ಇಲಾಖೆಗೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚನೆ ಬಿಇಒ ಅವರಿಗೆ ಸೂಚಿಸಿದ ಶಾಸಕರು, ಇದರಿಂದ ಬಡವರು, ದೀನದಲಿತರು, ಕೂಲಿ ಕಾರ್ಮಿಕರ ಮಕ್ಕಳಿಗೆ ಅನುಕೂಲವಾಗಲಿದೆ ಎಂದು ಶಾಸಕ ಸುರೇಶಗೌಡ ತಿಳಿಸಿದರು.
ಫೋಟೋ ಫೈಲ್ 10ಟಿಯುಎಂ10
ತುಮಕೂರು ನಗರದ ತಾ.ಪಂ.ಸಭಾಂಗಣದಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ನಡೆದ 2023-24 ನೇ ಸಾಲಿನ ಮೊದಲ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಸುರೇಶಗೌಡ ಮಾತನಾಡಿದರು.