ತಿರುಪತಿ, ಗೋವಾ, ಹೈದರಾಬಾದ್‌ಗೂ ವಿಮಾನ ಹಾರಾಟಕ್ಕೆ ಅನುಮತಿ: ಸಂಸದ ರಾಘ​ವೇಂದ್ರ

By Kannadaprabha News  |  First Published Jul 30, 2023, 10:03 PM IST

ಶಿವಮೊಗ್ಗದಿಂದ ತಿರುಪತಿ, ಗೋವಾ ಮತ್ತು ಹೈದರಾಬಾದ್‌ ನಗರಗಳಿಗೆ ಉಡಾನ್‌ ಯೋಜನೆಯಡಿ ವಿಮಾನ ಯಾನ ಸೇವೆ ನೀಡಲು ಸ್ಪೈಸ್‌ ಜೆಟ್‌, ಸ್ಟಾರ್‌ ಏರ್‌ಲೈನ್ಸ್‌ ಮತ್ತು ಅಲಯನ್ಸ್‌ ಏರ್‌ಲೈನ್‌ ಸಂಸ್ಥೆಗಳಿಗೆ ಅನುಮತಿ ಸಿಕ್ಕಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು. 


ಶಿವಮೊಗ್ಗ (ಜು.30): ಶಿವಮೊಗ್ಗದಿಂದ ತಿರುಪತಿ, ಗೋವಾ ಮತ್ತು ಹೈದರಾಬಾದ್‌ ನಗರಗಳಿಗೆ ಉಡಾನ್‌ ಯೋಜನೆಯಡಿ ವಿಮಾನ ಯಾನ ಸೇವೆ ನೀಡಲು ಸ್ಪೈಸ್‌ ಜೆಟ್‌, ಸ್ಟಾರ್‌ ಏರ್‌ಲೈನ್ಸ್‌ ಮತ್ತು ಅಲಯನ್ಸ್‌ ಏರ್‌ಲೈನ್‌ ಸಂಸ್ಥೆಗಳಿಗೆ ಅನುಮತಿ ಸಿಕ್ಕಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಈ ಮಾರ್ಗದಲ್ಲಿ ವಿಮಾನ ಸಂಚಾರ ಮಾಡುವ ಸಂಬಂಧ ಕರೆದಿದ್ದ ಟೆಂಡರ್‌ನಲ್ಲಿ ಭಾಗವಹಿಸಿ ಈ ಮೂರು ಏರ್‌ಲೈನ್ಸ್‌ ಸಂಸ್ಥೆಗಳು ಯಶಸ್ವಿಯಾಗಿವೆ. ಸದ್ಯಕ್ಕೆ ಹಗಲು ವೇಳೆಯಲ್ಲಿ ಮಾತ್ರ ವಿಮಾನ ಸಂಚಾರವಿದ್ದು, ರಾತ್ರಿ ವೇಳೆ ಲ್ಯಾಂಡಿಂಗ್‌ ವ್ಯವಸ್ಥೆಗೆ ಸಂಬಂಧಿಸಿದ ಕಾಮಗಾರಿ ಪ್ರಗತಿಯಲ್ಲಿದ್ದು ಆದಷ್ಟುಬೇಗ ಮುಗಿಯಲಿದೆ ಎಂದು ತಿಳಿಸಿದರು.

ಉಡಾನ್‌ ಯೋಜನೆಯಡಿ ಅನುಮತಿ ಪಡೆದಿರುವ ಏರ್‌ಲೈನ್ಸ್‌ ಸಂಸ್ಥೆಗಳು ವಿಮಾನ ಸಂಚಾರಕ್ಕೆ ಸಿದ್ಧತೆ ನಡೆಸಿವೆ. ನಾಗರಿಕ ವಿಮಾನ ಯಾನ ನಿರ್ದೇಶನಾಲಯದ ಅನುಮತಿ ದೊರೆತ ನಂತರ ಅವು ಕಾರ್ಯಾಚರಣೆ ನಡೆಸಲಿವೆ. ಆ.11ರಂದು ವಿಮಾನ ಹಾರಾಟ ಆರಂಭವಾಗಬೇಕಿತ್ತು. ಆದರೆ, ತಾಂತ್ರಿಕ ಕಾರಣಗಳಿಂದ ಆ.31ಕ್ಕೆ ಮುಂದೂಡಲ್ಪಟ್ಟಿದೆ ಮಾಹಿತಿ ನೀಡಿದರು.

Tap to resize

Latest Videos

ವಿರೋ​ಧಿ​ಗ​ಳೊಂದಿಗೆ ರಾಜ​ಕೀಯ ಮಾಡೋಣ: ಶಾಸ​ಕ ವಿಜಯೇಂದ್ರ

ಎಫ್‌ಎಂ ಟ್ರಾನ್ಸ್‌ಮೀಟರ್‌ಗೆ .10 ಕೋಟಿ ಬಿಡುಗಡೆ: ಭದ್ರಾವತಿ ಆಕಾಶವಾಣಿ ಕೇಂದ್ರದಲ್ಲಿ ಪ್ರಸ್ತುತ 1 ಕಿಲೋ ವ್ಯಾಟ್‌ ಎಫ್‌ಎಂ ಟ್ರಾನ್ಸ್‌ಮೀಟರ್‌ ಬದಲಿಗೆ ಶಿವಮೊಗ್ಗಕ್ಕೆ 10 ಕಿಲೋ ವ್ಯಾಟ್‌ ಎಫ್‌ಎಂ ಟ್ರಾನ್ಸ್‌ಮೀಟರ್‌ ಪ್ರಸಾರ ಭಾರತಿ ಮಂಜೂರು ಮಾಡಿ .10 ಕೋಟಿ ಬಿಡುಗಡೆ ಮಾಡಿದೆ. ಮಂಜೂರಾದ 10 ಕಿಲೋ ವ್ಯಾಟ್‌ ಎಫ್‌ಎಂ ಟ್ರಾನ್ಸ್‌ಮೀಟರ್‌ನಿಂದ ಶಿವಮೊಗ್ಗ ಜಿಲ್ಲೆಯ ಸಾಂಸ್ಕೃತಿಕ ಚಟುವಟಿಕೆ, ರೈತಪರ ಯೋಜನೆ ಹಾಗೂ ಇತರೆ ಕ್ಷೇತ್ರಗಳ ಅಭಿವೃದ್ಧಿಗಳು ಜಗತ್ತಿಗೆ ಪರಿಚಯವಾಗಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು. ಮಂಜೂರಾದ 10 ಕಿಲೋ ವ್ಯಾಟ್‌ ಎಫ್‌ಎಂ ಟ್ರಾನ್ಸ್‌ಮೀಟರ್‌ ಭದ್ರಾವತಿಯಿಂದ 20 ಕಿ,ಮೀ ದೂರದಲ್ಲಿರುವ ಶಿವಮೊಗ್ಗದಲ್ಲಿ ಈಗ ನಿಷ್ಕಿ್ರಯವಾಗಿರುವ ದೂರದರ್ಶನ ಹೈಪವರ್‌ ಟ್ರಾನ್ಸ್‌ಮೀಟರ್‌ನಲ್ಲಿರುವ 100 ಮೀಟರ್‌ ಬದಲಾಗಿ 150 ಮೀಟರ್‌ ಎತ್ತರದ ಗೋಪುರದ ಮೇಲೆ ಸ್ಥಾಪನೆಗೊಳ್ಳಲಿದೆ ಎಂದರು.

ಭದ್ರಾವತಿಯ 100 ಮೀಟರ್‌ ಟವರ್‌ನಲ್ಲಿ ಪ್ರಸ್ತುತ ಇರುವ 1 ಕಿಲೋ ವ್ಯಾಟ್‌ ಎಫ್‌ಎಂ ಟ್ರಾನ್ಸ್‌ಮೀಟರ್‌ ಬದಲಿಗೆ ಶಿವಮೊಗ್ಗದ ದೂರದರ್ಶನ ಕೇಂದ್ರದ 150 ಮೀಟರ್‌ ಟವರ್‌ನಲ್ಲಿ 10 ಕಿಲೋ ವ್ಯಾಟ್‌ ಸಾಮರ್ಥ್ಯದ ಟ್ರಾನ್ಸ್‌ಮೀಟರ್‌ ಅಳವಡಿಸುವುದರಿಂದ ವಿಶಾಲವಾದ ವ್ಯಾಪ್ತಿಯ ಪ್ರದೇಶಕ್ಕೆ ಪ್ರಸಾರ ಮಾಡಲು ಅನುಕೂಲ ಆಗುತ್ತದೆ. ಮತ್ತು ಸರ್ಕಾರದ ವಿವಿಧ ಯೋಜನೆಗಳನ್ನು ತಿಳಿದುಕೊಳ್ಳಲು ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಟ್ರಾನ್ಸ್‌ಮೀಟರ್‌ ಅಳವಡಿಕೆಗೆ ಡಿಸೆಂಬರ್‌ ಒಳಗಾಗಿ ಟೆಂಡರ್‌ ಪ್ರಕ್ರಿಯೆ ನಡೆಯಲಿದೆ ಎಂದು ವಿವರಿಸಿದರು.

ಭದ್ರಾವತಿ ಆಕಾಶವಾಣಿ ಕೇಂದ್ರಕ್ಕಿಂತ ಎತ್ತರವಾದ ಮತ್ತು ಎಲ್ಲಾ ಸೌಲಭ್ಯ ಹೊಂದಿರುವ ಶಿವಮೊಗ್ಗದ ದೂರದರ್ಶನ ಕೇಂದ್ರದಲ್ಲಿ 10 ಕಿಲೋ ವ್ಯಾಟ್‌ ಎಫ್‌ಎಂ ಟ್ರಾನ್ಸ್‌ಮೀಟರ್‌ ಸ್ಥಾಪಿಸುವುದರಿಂದ ಸರ್ಕಾರಕ್ಕೆ ಹೆಚ್ಚುವರಿ ಹೊರೆ ಬೀಳುವುದಿಲ್ಲ. ಭದ್ರಾವತಿಯಲ್ಲಿರುವ ರೆಕಾರ್ಡಿಂಗ್‌ ಮತ್ತು ಪ್ಲೇಬ್ಯಾಕ್‌ ಸ್ಟುಡಿಯೋಗಳನ್ನು ರೆಕಾರ್ಡಿಂಗ್‌ ಮತ್ತು ಪ್ರಸಾರ ಸೇರಿದಂತೆ ಎಂದಿನಂತೆ ಬಳಸಬಹುದು. ಆಕಾಶವಾಣಿ ಭದ್ರಾವತಿ ಎಂದೇ ಪ್ರಸಾರ ಕಾರ್ಯಗಳನ್ನು ಭದ್ರಾವತಿ ಆಕಾಶವಾಣಿ ಕೇಂದ್ರದಿಂದಲೇ ಪ್ರಸಾರ ನಡೆಸಲಾಗುವುದು. ಆದಾಗ್ಯೂ ವಿವಿಐಪಿ ರೆಕಾರ್ಡಿಂಗ್‌ ಮತ್ತು ತುರ್ತು ರೆಕಾರ್ಡಿಂಗ್‌ಗಳಿಗೆ ಅನುಕೂಲ ಆಗುವಂತೆ ಶಿವಮೊಗ್ಗದಲ್ಲಿ 10 ಕಿಲೋ ವ್ಯಾಟ್‌ ಎಫ್‌ಎಂ ಟ್ರಾನ್ಸ್‌ಮೀಟರ್‌ ಸ್ಥಾಪನೆಯ ಜೊತೆಗೆ ತಾತ್ಕಾಲಿಕ ಸ್ಟುಡಿಯೋ ಸ್ಥಾಪಿಸುವ ಅಗತ್ಯವಿದೆ. 10 ಕಿಲೋ ವ್ಯಾಟ್‌ ಎಫ್‌ಎಂ ಟ್ರಾನ್ಸ್‌ಮೀಟರ್‌ ಮಂಜೂರು ಮಾಡಿದ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಚಿವ ಅನುರಾಗ್‌ ಠಾಕೂರ್‌, ಪ್ರಸಾರ ಭಾರತಿಯ ಸಿಇಒ ಅವರಿಗೆ ಸಂಸ​ದರು ಅಭಿನಂದಿಸಿದರು.

ಬೆಳೆಹಾನಿ ವೈಜ್ಞಾನಿಕ ವರದಿ ಸಲ್ಲಿ​ಸಲು ಸೂಚನೆ: ಸಚಿ​ವ ಮಧು ಬಂಗಾರಪ್ಪ

ಮಲೆನಾಡು ಭಾಗದಲ್ಲಿ ನೆಟ್‌ವರ್ಕ್ ಸಮಸ್ಯೆ ಇರುವುದನ್ನು ಮನಗಂಡು 250 ಕೋಟಿ ರೂ. ವೆಚ್ಚದಲ್ಲಿ 250 ಮೊಬೈಲ್‌ ನೆಟ್‌ವರ್ಕ್ ಟವರ್‌ಗಳನ್ನು ಅಳವಡಿಸಲಾಗುವುದು. ಇದಕ್ಕಾಗಿ ಅರಣ್ಯ ಇಲಾಖೆಯಿಂದ ಅನುಮತಿ ಬೇಕಾಗಿದೆ. ಈ ಕುರಿತು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಇಂದು ಸಭೆ ನಡೆಯಲಿದ್ದು, ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು. ಪತ್ರಿಕಾಗೋಷ್ಠಿಯಲ್ಲಿ ಶಾಸಕರಾದ ಎಸ್‌.ಎನ್‌. ಚನ್ನಬಸಪ್ಪ, ವಿಧಾನ ಪರಿಷತ್‌ ಸದಸ್ಯ ಎಸ್‌.ರುದ್ರೇಗೌಡ, ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್‌, ಮುಖಂಡರಾದ ಎಸ್‌. ದತ್ತಾತ್ರಿ, ಬಿ.ಕೆ.ಶ್ರೀನಾಥ್‌, ಶಿವರಾಜ್‌, ಬಳ್ಳೇಕೆರೆ ಸಂತೋಷ್‌, ಚಂದ್ರಶೇಖರ್‌, ನವೀನ್‌, ಕೆ.ವಿ.ಅಣ್ಣಪ್ಪ ಮತ್ತಿತರರು ಇದ್ದರು.

click me!